ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನಪರ ಆಡಳಿತ ನಡೆಸುತ್ತಿದೆ
ಕೊಪ್ಪಳ: ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಸೇರಿದಂತೆ ಅನೇಕ ಜನಪರ ಕಾರ್ಯ ಮಾಡುತ್ತಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ.
ಕೊಪ್ಪಳ ಮತಕ್ಷೇತ್ರದ ಗಬ್ಬುರು,ಗುಳದಲ್ಲಿ, ಕೆರೆಹಳ್ಳಿ, ಶಹಾಪುರ, ಲಿಂಗದಹಳ್ಳಿ ಹಾಗೂ ಬೇವಿನಹಳ್ಳಿ ಗ್ರಾಮದಲ್ಲಿ ₹2.06 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ನೆರವೇರಿಸಿ ಮಾತನಾಡಿದರು.ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನಪರ ಆಡಳಿತ ನಡೆಸುತ್ತಿದೆ. ಘೋಷಣೆ ಮಾಡಿದ್ದ ಎಲ್ಲ ಯೋಜನೆಗಳನ್ನು ಯಥವತ್ತಾಗಿ ಜಾರಿ ಮಾಡಿ ನುಡಿದಂತೆ ನಡೆಯುತ್ತಿದ್ದೇವೆ. ಸಮಾಜದ ಕಟ್ಟಕಡೆಯ ಸಮಾಜಕ್ಕೂ ಕೂಡ ಸರ್ಕಾರದ ಯೋಜನೆಗಳು ತಲುಪುತ್ತಿವೆ ಎಂದರು.
ವಿಶೇಷವಾಗಿ ನಮ್ಮ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಕಂದಾಯ ಇಲಾಖೆಯಲ್ಲಿನ ಹಕ್ಕುಪತ್ರಕ್ಕೆ ಸಂಬಂಧಿಸಿದಂತೆ ಬಾಕಿ ಉಳಿದಿದ್ದ ಎಲ್ಲ ಕಡತ ವಿಲೇವಾರಿ ಮಾಡಿ ಹಕ್ಕುಪತ್ರ ವಿತರಣೆ ಮಾಡಲಾಗುತ್ತಿದೆ. ಏಕಕಾಲಕ್ಕೆ ವಿಜಯನಗರ ಹಾಗೂ ಹುಬ್ಬಳ್ಳಿಯಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಿ ಸಚಿವ ಕೃಷ್ಣ ಬೈರೇಗೌಡ ಅದ್ಬುತ ಕೆಲಸ ಮಾಡಿ ಸರ್ಕಾರಕ್ಕೆ ಪ್ರಶಂಸೆ ತರುವ ಪ್ರಾಮಾಣಿಕ ಕೆಲಸ ಮಾಡುತ್ತಿದ್ದಾರೆ ಎಂದರು.ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ರಮೇಶ ಹಿಟ್ನಾಳ, ಗ್ಯಾರಂಟಿ ಸಮಿತಿ ಅಧ್ಯಕ್ಷ ಬಾಲಚಂದ್ರನ್, ನಿಂಗಜ್ಜ ಶಹಾಪುರ, ಗುಡದಪ್ಪ ಗುಳದಲ್ಲಿ, ಕುಬೇರ ಮಜ್ಜಿಗಿ, ಸೋಮಣ್ಣ ಹುಡೇದ್, ಗವಿಸಿದ್ದಪ್ಪ ಪೂಜಾರ್, ಕರಿಯಪ್ಪ ಗಬ್ಬುರು, ಮುರಳಿ ಲಿಂಗದಹಳ್ಳಿ, ಲಕ್ಷ್ಮಣ್ ಗುಳದಲ್ಲಿ, ಯಮನೂರಪ್ಪ ಗುಳದಲ್ಲಿ, ಪರಶುರಾಮ್ ಕೆರೆಹಳ್ಳಿ, ಮಲ್ಲು ಪೂಜಾರ್, ಗಿರೀಶ್ ಹಿರೇಮಠ್, ದೊಡ್ಡಪ್ಪ ಗುಳದಳ್ಳಿ, ಅಕ್ಬರ್ ಪಲ್ಟಾನ್, ತಹಸೀಲ್ದಾರ್ ಬಸವರಾಜ, ತಾಪಂ ಇಓ ದುಂದೇಶ ತುರಾದಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.