ದಲಿತರಿಗೆ ಅಧಿಕಾರ ನೀಡದೆ ವಂಚಿಸುತ್ತಾರ ಬಂದಿರುವ ಕಾಂಗ್ರೆಸ್: ಹಾಲ್ಕೋಡ್ ಹನುಮಂತಪ್ಪ

| Published : Apr 23 2024, 12:48 AM IST

ದಲಿತರಿಗೆ ಅಧಿಕಾರ ನೀಡದೆ ವಂಚಿಸುತ್ತಾರ ಬಂದಿರುವ ಕಾಂಗ್ರೆಸ್: ಹಾಲ್ಕೋಡ್ ಹನುಮಂತಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ನೆಹರುಯಿಂದ ಹಿಡಿದು ರಾಜೀವ್‌ಗಾಂಧಿವರೆಗೂ ಒಬೊಬ್ಬರ ಸಮಾಧಿಗೆ 50 ಎಕರೆ ಪ್ರದೇಶದ ಜಾಗ ನೀಡಿರುವ ಕಾಂಗ್ರೆಸ್ ದೇಶಕ್ಕೆ ಸಂವಿಧಾನ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ನಿಧಾನರಾದ ಜಾಗ ನೀಡಿಲ್ಲ. 1954ರಲ್ಲಿ ಅಂಬೇಡ್ಕರ್‌ರನ್ನು ಎರಡು ಬಾರಿ ಸೋಲಿಸಿ ಸಂಸತ್ ಪ್ರವೇಶ ಮಾಡದಂತೆ ತಡೆದಿದ್ದಾರೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ದಲಿತರನ್ನು ರಾಜಕೀಯವಾಗಿ ಬಳಕೆ ಮಾಡಿಕೊಂಡು ಬಂದಿರುವ ಕಾಂಗ್ರೆಸ್ ಅಧಿಕಾರ ನೀಡದೆ ವಂಚಿಸುತ್ತಾ ಬಂದಿದೆ ಎಂದು ಮಾಜಿ ಸಚಿವ ಹಾಲ್ಕೋಡ್ ಹನುಮಂತಪ್ಪ ದೂರಿದರು.

ಪಟ್ಟಣದ ಟಿಎಪಿಸಿಎಂಎಸ್ ರೈತ ಭವನದಲ್ಲಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನಡೆದ ಜೆಡಿಎಸ್ ಪಕ್ಷದ ಪರಿಶಿಷ್ಟ ಜಾತಿ ವಿಭಾಗದ ಪದಾಧಿಕಾರಿಗಳು ಹಾಗೂ ಕಾರ್‍ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ರಾಜ್ಯದಲ್ಲಿ ದಲಿತರಿಗೆ ಹೆಚ್ಚಿನ ಅಧಿಕಾರ ಸಿಕ್ಕಿದ್ದು ಜೆಡಿಎಸ್ ಪಕ್ಷದಲ್ಲಿ ಮಾತ್ರ. ಆದ್ದರಿಂದ ದಲಿತರು ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿಗೆ ಮತ ನೀಡಬೇಕು ಎಂದು ಕರೆ ನೀಡಿದರು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ನೆಹರುಯಿಂದ ಹಿಡಿದು ರಾಜೀವ್‌ಗಾಂಧಿವರೆಗೂ ಒಬೊಬ್ಬರ ಸಮಾಧಿಗೆ 50 ಎಕರೆ ಪ್ರದೇಶದ ಜಾಗ ನೀಡಿರುವ ಕಾಂಗ್ರೆಸ್ ದೇಶಕ್ಕೆ ಸಂವಿಧಾನ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ನಿಧಾನರಾದ ಜಾಗ ನೀಡಿಲ್ಲ. 1954ರಲ್ಲಿ ಅಂಬೇಡ್ಕರ್‌ರನ್ನು ಎರಡು ಬಾರಿ ಸೋಲಿಸಿ ಸಂಸತ್ ಪ್ರವೇಶ ಮಾಡದಂತೆ ತಡೆದಿದ್ದಾರೆ ಎಂದು ಕಿಡಿಕಾರಿದರು.

ಕೇಂದ್ರದಲ್ಲಿ ಎನ್‌ಡಿಎ ಅಧಿಕಾರಿಕ್ಕೆ ಬಂದರೆ ಸಂವಿಧಾನ ತಿದ್ದುಪಡಿ ಮಾಡುತ್ತಾರೆ ಕಾಂಗ್ರೆಸ್ ಸುಳ್ಳು ಹೇಳಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಅದೇ 1975ರಲ್ಲಿ ಇಂದಿರಾಗಾಂಧಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ತಂದು 125 ತಿದ್ದುಪಡಿ ಮಾಡಿದವರು ಯಾರು?, ಸಂವಿಧಾನವನ್ನು ಯಾರಿಂದಲು ತಿದ್ದುಪಡಿ ಮಾಡಲು ಸಾಧ್ಯವಿಲ್ಲ, ಕಾಂಗ್ರೆಸ್‌ನವರು ಸುಳ್ಳು ಮಾತುಗಳಿಗೆ ಕಿವಿಕೊಡಬೇಡಿ ಎಂದು ಮನವಿ ಮಾಡಿದರು.

ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ದಲಿತರ ಮನೆಯಲ್ಲಿ ವಾಸ್ತವ್ಯ ಮಾಡಿ ಸಮಸ್ಯೆ ಆಲಿಸಿ ಕೆಲಸ ಮಾಡಿದ್ದಾರೆ.

ಹೊಸಹೊಸ ಯೋಜನೆ ತಂದು ದೀನದಲಿತರು, ಬಡವರು, ಶೋಷಿತರು, ರೈತರಪರವಾಗಿ ಕೆಲಸ ಮಾಡಿದರು. ಹಾಗಾಗಿ ದಲಿತ ಸಮುದಾಯ ಮೈತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮತಕೊಟ್ಟು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ದಲಿತರು ಹಾಗೂ ಹೆಣ್ಣುಮಕ್ಕಳು ಕಾಂಗ್ರೆಸ್‌ನವರು ಸುಳ್ಳು ಭರವಸೆಗಳಿಗೆ ಮರುಳಾಗಬೇಡಿ. ಹಣವಂತ ಹಾಗೂ ಹೃದಯವಂತರ ನಡುವೆ ನಡೆಯುತ್ತಿರುವ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಗೆಲುವಿಗೆ ಸಹಕರಿಸಬೇಕು ಎಂದು ಕೋರಿದರು.

ಈ ವೇಳೆ ಜಿಪಂ ಮಾಜಿ ಸದಸ್ಯ ಎಚ್.ಮಂಜುನಾಥ್, ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್, ಸಿ.ಕೆ.ಪಾಪಯ್ಯ, ಜೆಡಿಎಸ್ ಎಸ್ಸಿ/ಎಸ್‌ಟಿ ಘಟಕದ ಜಿಲ್ಲಾಧ್ಯಕ್ಷ ಜಯರಾಮು, ತಾಲೂಕು ಅಧ್ಯಕ್ಷ ಬೊಮ್ಮರಾಜು, ದಸಂಸ ಮುಖಂಡರಾದ ಅಲ್ಪಳ್ಳಿ ಗೋವಿಂದಯ್ಯ, ಟೌನ್‌ಚಂದ್ರು, ಎಂ.ಎಸ್.ಜಗದೀಶ್, ಜವರಯ್ಯ, ಕರಿಯ್ಯ, ಕಣಿವೆಯೋಗೇಶ್, ಪುರಸಭೆ ಮಾಜಿ ಅಧ್ಯಕ್ಷೆ ಅರ್ಚನ ಚಂದ್ರು, ಪುರಸಭೆ ಸದಸ್ಯರಾದ ಶಿವರಾಜು, ಚಂದ್ರು, ಗ್ರಾಪಂ ಮಾಜಿ ಅಧ್ಯಕ್ಷೆ ಶ್ವೇತ, ಗ್ರಾಪಂ ಅಧ್ಯಕ್ಷೆ ಗಾಯಿತ್ರಿಕುಮಾರ್, ಸ್ವಾಮಿ, ಕೆಂಪರಾಜು, ಪ್ರಶಾಂತ್, ಶಿವಸ್ವಾಮಿ, ಜಯಲಕ್ಷ್ಮಿ, ಹೊಸೂರುಸ್ವಾಮಿ, ದುದ್ದಹೋಬಳಿ ಹಲಗಯ್ಯ, ಶಿವಲಿಂಗಯ್ಯ ಸೇರಿದಂತೆ ಹಲವರು ಹಾಜರಿದ್ದರು.