ಕಾಂಗ್ರೆಸ್ ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಭಾರತವನ್ನು ಸ್ವತಂತ್ರಗೊಳಿಸುವಲ್ಲಿ ಪಾತ್ರ ವಹಿಸಿದ ಪ್ರಮುಖ ಪಕ್ಷಗಳಲ್ಲಿ ಕಾಂಗ್ರೆಸ್ ಒಂದಾಗಿದೆ.

ನರೇಗಲ್ಲ: ಕಾಂಗ್ರೆಸ್ ರಾಷ್ಟ್ರವಾದಿ ಮತ್ತು ಸ್ವಾತಂತ್ರ್ಯ ಎಂಬ ತತ್ವದಲ್ಲಿ ಸ್ಥಾಪಿತವಾದ ಪಕ್ಷವಾಗಿದ್ದು, ಏಷ್ಯಾ ಮತ್ತು ಆಫ್ರಿಕದ ಆಗಿನ ಬ್ರಿಟಿಷ್ ಸಾಮ್ರಾಜ್ಯದಲ್ಲಿ ಹೊರಹೊಮ್ಮಿದ ಮೊದಲ ಆಧುನಿಕ ಪಕ್ಷವಾಗಿದೆ. ಸಮಬಾಳು, ಸಹಜೀವನ, ಜತೆಗೆ ಸ್ವಾತಂತ್ರ್ಯಕ್ಕಾಗಿ ಸ್ಥಾಪಿತವಾದ ಪ್ರಮುಖ ಸಂಘಟನೆಯಾಗಿದೆ ಎಂದು ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಕ್ಷಯ ಪಾಟೀಲ ತಿಳಿಸಿದರು.

ಸಮೀಪದ ಅಬ್ಬಿಗೇರಿಯ ಗಾಂಧಿ ಸರ್ಕಲ್‌ನಲ್ಲಿ ಕಾಂಗ್ರೆಸ್ 141ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಂಗ್ರೆಸ್ ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಭಾರತವನ್ನು ಸ್ವತಂತ್ರಗೊಳಿಸುವಲ್ಲಿ ಪಾತ್ರ ವಹಿಸಿದ ಪ್ರಮುಖ ಪಕ್ಷಗಳಲ್ಲಿ ಕಾಂಗ್ರೆಸ್ ಒಂದಾಗಿದೆ. ಬ್ರಿಟಿಷ್ ಸಾಮ್ರಾಜ್ಯದಲ್ಲಿನ ಇತರ ವಸಾಹತುಶಾಹಿ ವಿರೋಧಿ ರಾಷ್ಟ್ರೀಯತಾವಾದಿ ಚಳವಳಿಗಳ ಮೇಲೆ ಕಾಂಗ್ರೆಸ್ ಪ್ರಭಾವ ಬೀರಿದೆ ಎಂದರು.

ರೋಣ ತಾಲೂಕು ವಾಲ್ಮಿಕಿ ಸಮಾಜದ ಅಧ್ಯಕ್ಷ ಬಸವರಾಜ ತಳವಾರ ಮಾತನಾಡಿ, ಬ್ರಿಟಿಷ್ ಆಳ್ವಿಕೆ ನಂತರ ಆಡಳಿತದಲ್ಲಿ ಭಾರತೀಯರು ಹೆಚ್ಚಿನ ಭಾಗವಹಿಸುವಿಕೆಯ ಉದ್ದೇಶವನ್ನು ಇಟ್ಟುಕೊಂಡು ರಾಷ್ಟ್ರೀಯತಾವಾದಿ ಚಳವಳಿಗಾಗಿ ರಚಿಸಲಾದ ಪ್ರಮುಖ ಸಂಘಟನೆಯೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌. ದೇಶವನ್ನು ಸ್ವತಂತ್ರಗೊಳಿಸುವುದು, ದೇಶಕ್ಕೆ ಹೊಸ ಸಂವಿಧಾನ ರಚಿಸುವುದು, ರಾಮರಾಜ್ಯ ಸ್ಥಾಪನೆ, ಸರ್ವೋದಯ ಪರಿಕಲ್ಪನೆ ಮೂಲಕ ಸ್ಥಾಪಿತವಾದ ಒಂದು ಸಂಘಟನೆಯಾಗಿದೆ. ಕ್ರಮೇಣ ಇದು ರಾಜಕೀಯ ಪಕ್ಷವಾಯಿತು. ಏಷ್ಯಾ ಮತ್ತು ಆಫ್ರಿಕ ಖಂಡಗಳ ಸುಮಾರು ಅರವತ್ತು ದೇಶಗಳ ಸ್ವಾತಂತ್ರ್ಯ ಹೋರಾಟಕ್ಕೆ ಈ ರಾಷ್ಟ್ರೀಯ ಕಾಂಗ್ರೆಸ್ ಪ್ರೇರಣೆ ನೀಡಿತು ಎಂದರು.

ಈ ವೇಳೆ ಪಕ್ಷಕ್ಕೆ ಸೇವೆ ಸಲ್ಲಿಸಿದ, ಹಿರಿಯರಾದ ಬುದ್ಧಿವಂತಪ್ಪ ಉಪಾಧ್ಯ, ಭೀಮಣ್ಣ ಬಂಡಿಹಾಳ, ಮಲ್ಲೇಶಪ್ಪ ಗದುಗಿನ, ಮಲ್ಲಪ್ಪ ಕಲ್ಲೇಶ್ಯಾಣಿ, ಎಚ್.ಟಿ. ದ್ವಾಸಲ, ಸುರೇಶ ಬಸವರಡ್ಡೇರ, ಹನುಮಪ್ಪ ನಡುವಲಗುಡ್ಡ, ಹೂವಪ್ಪ ಪೂಜಾರ, ಅಂದಪ್ಪ ದ್ವಾಸಲ ಅವರನ್ನು ಸನ್ಮಾನಿಸಲಾಯಿತು. ಬಾಬುಗೌಡ ಪಾಟೀಲ, ಬಸವರಾಜ ಪಲ್ಲೇದ, ಸುರೇಶ ಬಸವರಡ್ಡೇರ, ಎಚ್.ಟಿ. ದ್ವಾಸಲ, ಬಾಬು ಬನ್ನಿಕೊಪ್ಪ, ಎಂ.ಡಿ. ಬಸವರಡ್ಡೇರ, ರಾಮನಗೌಡ ಹಲಕುರ್ಕಿ, ಜಗದೀಶ ಅವರಡ್ಡಿ, ಭೀಮರಡ್ಡಿ ಅವರಡ್ಡಿ, ಗುರಣ್ಣ ಅವರಡ್ಡಿ, ಎಂ.ಡಿ. ಬಸವರಡ್ಡೇರ, ಸುರೇಶ ಶಿರೋಳ, ಮಲ್ಲು ಯಲ್ಲರಡ್ಡಿ, ಅಂದಪ್ಪ ಹಲಕುರ್ಕಿ, ಸಿದ್ದು ಹನುಮನಾಳ, ಮುತ್ತು ಕುಕನೂರ, ಶಿವಣ್ಣ ಗುಗ್ಗರಿ, ಮಹಾಂತೇಶ ತಳವಾರ, ಮಹಾಂತೇಶ ಇಮ್ರಾಪೂರ, ಭೀಮಣ್ಣ ಕಂಬಳಿ, ಅಂದಪ್ಪ ತಾಳಿಕೋಟಿ, ಟಿ.ಬಿ. ಇಮ್ರಾಪೂರ, ಬಸವರಾಜ ಕಮ್ಮಾರ, ತಿರುಮಲೇಶ ಬಂಡಿವಡ್ಡರ, ರಾಮಣ್ಣ ಕುಲಕರ್ಣಿ, ಸಂತೋಷ ಕಲ್ಲೆಶ್ಯಾಣಿ, ಕುಮಾರ ಬಸವರಡ್ಡೇರ, ಸೋಮು ಶಿರೋಳ, ಶಿವಪುತ್ರ ಕೆಂಗಾರ, ಶೇಕಣ್ಣ ಕಮ್ಮಾರ, ಗುರುಲಿಂಗಪ್ಪ ಬಸವರಡ್ಡೇರ, ಶರಣು ವಡವಿ, ಸೋಮು ವಡವಿ, ಅಶೋಕ ಶಿರೋಳ, ಮನೋಹರ ಬಳಗಾನೂರ, ಮಂಜು ಚಿತ್ತರಗಿ, ಚನ್ನಬಸು ಹೂಗಾರ, ಲಕ್ಷ್ಮಣ ಹಿರೇಮನಿ, ಶಶಿ ಸಂಗನಾಳ, ಶಶಿ ಹಿರೇಮನಿ, ಶಂಕರ ದ್ವಾಸಲ, ಮಳ್ಳಪ್ಪ ದ್ವಾಸಲ, ರಮೇಶ ಕುಡಗುಂಟಿ, ಮುಂತಾದವರು ಉಪಸ್ಥಿತರಿದ್ದರು.