ಸಾರಾಂಶ
ಕೊಲೆ ಬೆದರಿಕೆಯ ಈ ಪ್ರಕರಣದಲ್ಲಿ ಬಂಧಿತರಾದ ಆರು ಜನ ಆರೋಪಿಗಳ ಪೈಕಿ ತೇಜೋ ಖಾನ್ ಹೆಸರಿನ ಖಾತೆಯಿಂದ ಈ ರೀತಿಯ ಪೋಸ್ಟ್ ಸದ್ಯ ಚರ್ಚೆತ ವಿಷಯವಾಗಿದೆ.
ಧಾರವಾಡ:
ಇಲ್ಲಿಯ ಅಂಜುಮನ್ ಇಸ್ಲಾಂ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಅವರಿಗೆ ಕಳೆದ ನಾಲ್ಕೈದು ದಿನಗಳ ಹಿಂದಷ್ಟೇ ಜೀವ ಬೆದರಿಕೆ ಹಾಕಿ ಬಂಧಿತರಾಗಿದ್ದ ಆರು ಜನರ ಪೈಕಿ ಒಬ್ಬಾತ ತನ್ನ ಇನ್ಸ್ಟಾಗ್ರಾಮ್‌ನಲ್ಲಿ ನೀನು ಎಷ್ಟೇ ದೊಡ್ಡವನಾದರೂ ಸುಮ್ಮನೆ ಬಿಡೋದಿಲ್ಲ ಎಂದು ಪೋಸ್ಟ್ ಹಾಕಿದ್ದು, ಇದೀಗ ವೈರಲ್ ಆಗಿದೆ.ಕೊಲೆ ಬೆದರಿಕೆಯ ಈ ಪ್ರಕರಣದಲ್ಲಿ ಬಂಧಿತರಾದ ಆರು ಜನ ಆರೋಪಿಗಳ ಪೈಕಿ ತೇಜೋ ಖಾನ್ ಹೆಸರಿನ ಖಾತೆಯಿಂದ ಈ ರೀತಿಯ ಪೋಸ್ಟ್ ಸದ್ಯ ಚರ್ಚೆತ ವಿಷಯವಾಗಿದ್ದು, ತಮಟಗಾರ ಈ ಕುರಿತು ಮಾಧ್ಯಮಗಳಿಗೂ ಪ್ರತಿಕ್ರಿಯೆ ನೀಡಿದ್ದಾರೆ.
ಪೊಲೀಸ್ ಇಲಾಖೆಯು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎನಿಸುತ್ತಿದೆ. ನಾನು ಮೂರು ಸಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ. ಕಳೆದ ಆರು ತಿಂಗಳಿಂದ ಕೊಲೆ ಬೆದರಿಕೆ ಇದೆ. ಈ ಕುರಿತು ಪೊಲೀಸರಿಗೆ ಮನವಿ ಸಹ ಸಲ್ಲಿಸಿದ್ದೇನೆ. ಕಳೆದ ನಾಲ್ಕು ದಿನದ ಹಿಂದೆ ನಡೆದಿರುವ ಘಟನೆ ಭಯ ಹುಟ್ಟಿಸಿದೆ. ಆರೋಪಿಯೊಬ್ಬ ಚಾಹೇ ಕಿತ್ನಾಬಿ ಬಡಾ ಆದ್ಮಿ ಹೋ ಮೈ ನೈ ಚೋಢೆಂಗೆ ಎಂದು ಪೋಸ್ಟ್ ಮಾಡಿದ್ದು ಹೇಗೆ? ಕಾಂಗ್ರೆಸ್ ಸರ್ಕಾರದಲ್ಲಿಯೇ ಕಾಂಗ್ರೆಸ್ ಮುಖಂಡನಿಗೆ ರಕ್ಷಣೆ ಇಲ್ಲ ಎಂದರೆ ಹೇಗೆ? ಹೀಗಾಗಿ ಆ. 16ರಂದು ಅಂಜುಮನ್ ವತಿಯಿಂದ ಧಾರವಾಡದಲ್ಲಿ ಬೃಹತ್ ರ್‍ಯಾಲಿ ನಡೆಸಲಾಗುತ್ತಿದೆ ಎಂದರು.ಈ ಕೊಲೆ ಬೆದರಿಕೆಯ ಪ್ರಕರಣದಲ್ಲಿ ಆರು ಜನ ಆರೋಪಿಗಳು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರಿಗೆ ಮೊಬೈಲ್ ಬಳಕೆಗೆ ಅವಕಾಶವಿಲ್ಲ. ಹೀಗಾಗಿ ಅವರ ಹೆಸರಿನಲ್ಲಿ ತಮಟಗಾರ ವಿರೋಧಿಗಳು ಈ ರೀತಿ ಪೋಸ್ಟ್ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಪೊಲೀಸರು ತನಿಖೆಯಿಂದ ಪತ್ತೆ ಹಚ್ಚಬೇಕಿದೆ.