ಸ್ವಾತಂತ್ರ್ಯ ಚಳವಳಿಯಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ತರ

| Published : Aug 15 2024, 01:56 AM IST

ಸಾರಾಂಶ

ಧಾರವಾಡ ಶಿಕ್ಷಣ ಕಾಶಿಯಾಗಿ, ಸಾಂಸ್ಕೃತಿಕ ನಗರವಾಗಿ ದೇಶ ಮತ್ತು ‌ನಾಡಿಗೆ ತನ್ನದೇ ಆದ ಕೊಡುಗೆ ನೀಡಿದೆ. ಇಲ್ಲಿಯ ಅನೇಕ ಹೆಸರಾಂತ ಶಿಕ್ಷಣ ಸಂಸ್ಥೆಗಳು ಅನೇಕ ಹೋರಾಟಗಾರರನ್ನು ರೂಪಿಸಿದೆ.

ಧಾರವಾಡ:

ಕರ್ನಾಟಕ ಕಾಲೇಜು ಸೇರಿದಂತೆ ಧಾರವಾಡದ ಅನೇಕ ಐತಿಹಾಸಿಕ ಶಿಕ್ಷಣ ಸಂಸ್ಥೆಗಳು ಭಾರತದ ಸ್ವಾತಂತ್ರ‍್ಯದ ಚಳವಳಿಯಲ್ಲಿ ಮತ್ತು ಕರ್ನಾಟಕದ ಏಕೀಕರಣದಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದು‌‌ ಇತಿಹಾಸದ ವಿಭಾಗದ ಮುಖ್ಯಸ್ಥ ಪ್ರೊ. ಜಗದೀಶ ಕೀವುಡನವರ ಹೇಳಿದರು.

ಜಿಲ್ಲಾಡಳಿತ ಮತ್ತು ಕರ್ನಾಟಕ ಕಲಾ‌ ಕಾಲೇಜಿನ ಇತಿಹಾಸ ವಿಭಾಗ ಪ್ರವಾಸೋದ್ಯಮ ಅಧ್ಯಯನ ವಿಭಾಗದಲ್ಲಿ 77ನೇ ಸ್ವಾತಂತ್ರ‍್ಯೋತ್ಸವದ ಅಂಗವಾಗಿ ''''''''ಭಾರತದ ಸ್ವಾತಂತ್ರ‍್ಯ ಚಳವಳಿ ಮತ್ತು ಕರ್ನಾಟಕ ಏಕೀಕರಣದಲ್ಲಿ ಧಾರವಾಡ ಶಿಕ್ಷಣ ಸಂಸ್ಥೆಗಳ ಪಾತ್ರ'''''''' ಎಂಬ ವಿಷಯದ ವಿಶೇಷ ಉಪನ್ಯಾಸ ನೀಡಿದರು.

ಧಾರವಾಡ ಶಿಕ್ಷಣ ಕಾಶಿಯಾಗಿ, ಸಾಂಸ್ಕೃತಿಕ ನಗರವಾಗಿ ದೇಶ ಮತ್ತು ‌ನಾಡಿಗೆ ತನ್ನದೇ ಆದ ಕೊಡುಗೆ ನೀಡಿದೆ. ಇಲ್ಲಿಯ ಅನೇಕ ಹೆಸರಾಂತ ಶಿಕ್ಷಣ ಸಂಸ್ಥೆಗಳು ಅನೇಕ ಹೋರಾಟಗಾರರನ್ನು ರೂಪಿಸಿದ್ದು, ಸ್ವಾತಂತ್ರ‍್ಯದ ಕಾಲಘಟ್ಟದಲ್ಲಿ ಕರ್ನಾಟಕ ಕಾಲೇಜು,‌ ಟ್ರೇನಿಂಗ್ ಕಾಲೇಜು ಸೇರಿದಂತೆ ನಗರದ ವಿವಿಧ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಸ್ವಾತಂತ್ರ‍್ಯದ ಮಹತ್ವವನ್ನು ತಿಳಿಸಿಕೊಟ್ಟವು. ಅದರಲ್ಲಿ ಅನೇಕ ವಿದ್ಯಾರ್ಥಿ ಚಳವಳಿಗಳು ಧಾರವಾಡದ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ ನಲ್ಲಿ ರೂಪುಗೊಂಡವು ಎಂದರು.

ಕನ್ನಡ ಸಂಸ್ಕೃತಿ ಇಲಾಖೆಯ ಪ್ರಭು ಕುಂದರಗಿ ತಂಡದವರು ದೇಶಭಕ್ತಿಗೀತೆಗಳನ್ನು ಹಾಡಿದರು. ಮೇಘಾ ಪಾಟೀಲ್, ಉಪನ್ಯಾಸಕರಾದ ಮಾಲತೇಶ ಹುಣಸೀಮರದ, ವಿನಾಯಕ ಶೇಠ, ಪಾರ್ವತಿ ಪಟ್ಟಣಶೆಟ್ಟಿ, ಶೈಲಜಾ ವಡಕಣ್ಣವರ, ಡಾ. ಸುಷ್ಮಾ ಮಳಿಗಿ, ಸಂದೀಪ ಘೋರ್ಪಡೆ, ಸುಷ್ಮಾ ಅರಳಿ, ಶಿಲ್ಪಾ ರೇವಣಕರ ಇದ್ದರು.