ಸಾರಾಂಶ
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ದೇಶಭಕ್ತಿಯ, ಏಕತೆಯ, ಬ್ರಿಟಿಷರ ವಿರುದ್ಧ ಹೋರಾಟದ ಶಕ್ತಿಶಾಲಿಯಾಗಿ ರೂಪಗೊಂಡ ವಂದೇ ಮಾತರಂ ರಾಷ್ಟ್ರಗೀತೆಯನ್ನು ಕಾಂಗ್ರೆಸ್ ವಿರೋಧಿಸಿದೆ ಎಂದು ಚೂಡಾ ಮಾಜಿ ಅಧ್ಯಕ್ಷ ಶಾಂತಮೂರ್ತಿ ಕುಲಗಾಣ ಆರೋಪಿಸಿದರು.ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ವಂದೇ ಮಾತರಂ 150ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾರತಾಂಬೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. 1923ರಲ್ಲಿ ಕಾಕಿನಾಡದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಪಂ. ವಿಷ್ಣು ದಿಗಂಬರ ಪಾಲುಸ್ಕರ್ ಅವರನ್ನು ''''''''ವಂದೇ ಮಾತರಂ'''''''' ಹಾಡಲು ಆಹ್ವಾನಿಸಲಾಯಿತು. ಆದರೆ ಆ ವರ್ಷದ ಕಾಂಗ್ರೆಸ್ ಅಧ್ಯಕ್ಷರಾದ ಮೌಲಾನಾ ಮೊಹಮ್ಮದ್ ಅಲಿ ಅವರು ಧಾರ್ಮಿಕ ಕಾರಣಗಳಿಂದ ವಿರೋಧಿಸಿದರು.
ಮುಸ್ಲಿಂ ಲೀಗ್ ನಾಯಕರನ್ನು ಸಂತೋಷ ಪಡಿಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು 1937ರಲ್ಲಿ ರಾಷ್ಟ್ರಗೀತೆಯ ಕೆಲವು ಭಾಗಗಳನ್ನು ಅಧಿಕೃತವಾಗಿ ಕೈಬಿಟ್ಟಿತು. ನಂತರದಲ್ಲಿ ಕಾಂಗ್ರೆಸ್ ಮತ್ತು ಅದರ ಕೆಲವು ನಾಯಕರು ''''''''ವಂದೇ ಮಾತರಂ''''''''ಗೆ ವಿರೋಧ ವ್ಯಕ್ತಪಡಿಸುತ್ತಿದ್ದರು.2017ರಲ್ಲಿ ನಾಯಕ ಅಕ್ಟರುದ್ದೀನ್ ಓವೈಸಿ ಅವರು ಶಾಲೆಗಳಲ್ಲಿ ''''''''ವಂದೇ ಮಾತರಂ'''''''' ಹಾಡುವುದು ಕಡ್ಡಾಯಗೊಳಿಸಿದ ಸುತ್ತೋಲೆಯನ್ನು ರದ್ದುಪಡಿಸುವಂತೆ ಬೇಡಿಕೆ ಇಟ್ಟರು. ತೆಲಂಗಾಣ ಸರ್ಕಾರವು ನಂತರ ಶಾಲೆಗಳಲ್ಲಿ ಹಾಡು ಕಡ್ಡಾಯವಲ್ಲ ಎಂದು ಹೇಳಿತು. 2019ರಲ್ಲಿ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರವು ಕಾರ್ಯಾಲಯದಲ್ಲಿ ''''''''ವಂದೇ ಮಾತರಂ'''''''' ಹಾಡುವುದಕ್ಕೆ ನಿರ್ಬಂಧ ಹೇರಿತು ಎಂದರು.
ಭಾರತ ಸರ್ಕಾರದ ಮಂತ್ರಿ ಮಂಡಲವು ಆ. 1 ರಿಂದ ದೇಶದ ರಾಷ್ಟ್ರಗೀತೆ, ವಂದೇಮಾತರಂನ 150ನೇ ವರ್ಷದ ಸಂಭ್ರಮಾಚರಣೆಯನ್ನು ದೇಶವ್ಯಾಪಿಯಾಗಿ ಆಚರಿಸಲು ತೀರ್ಮಾನಿಸಿದ್ದು, ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಈ ಹಾಡಿನ ಪಾತ್ರವನ್ನು ಗಮನದಲ್ಲಿಟ್ಟುಕೊಂಡು 150ನೇ ವರ್ಷದ ಪ್ರಯುಕ್ತ ದೇಶಾದಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಸುವ ನಿರ್ಧಾರ ತೆಗೆದುಕೊಂಡಿದೆ ಎಂದರು.ವಂದೇ ಮಾತರಂ ಗೀತೆಯನ್ನು ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರು 1875ರಲ್ಲಿ ರಚಿಸಿದರು. ಈ ಹಾಡನ್ನು ರವೀಂದ್ರನಾಥ ಟಾಗೋರ್ 1896ರಲ್ಲಿ ಕೊಲ್ಕತಾದಲ್ಲಿ ಪ್ರಪ್ರಥಮವಾಗಿ ಸಾರ್ವಜನಿಕವಾಗಿ ಹಾಡಿದರು. 1905ರಲ್ಲಿ ಬಂಗಾಳ ವಿಭಜನೆಯ ವೇಳೆಗೆ ಈ ಕಾವ್ಯ ನಮ್ಮ ದೇಶ್ ಮಲ್ಹಾರ್ ರಾಗದಲ್ಲಿ ಹಾಡಲಾಗುತ್ತಿತ್ತು. ಇದು ಹೋರಾಟಗಾರರ ಮೆರವಣಿಗೆಯ ಹಾಡಾಗಿ ಪ್ರಸಿದ್ದಿಯಾಯಿತು. ದೇಶದ ಪ್ರಥಮ ರಾಷ್ಟ್ರಪತಿ ಡಾ.ಬಾಬುರಾಜೇಂದ್ರಪ್ರಸಾದ್ ಅವರು 1950 ವಂದೇ ಮಾತರಂಗೆ ರಾಷ್ಟ್ರಗೀತೆ ಸ್ಥಾನಮಾನವನ್ನು ನೀಡಿದರು. ದೇಶಭಕ್ತಿಯ, ಏಕತೆಯ, ಬ್ರಿಟಿಷರ ವಿರುದ್ಧ ಹೋರಾಟದ ಶಕ್ತಿ ಶಾಲಿ ರೂಪುಗೊಂಡಿತು ಈ ಕಾರಣದಿಂದ ಬ್ರಿಟಿಷ್ ಸರ್ಕಾರವು ಈ ಘೋಷಣೆಯನ್ನು ನಿಷೇಧಿಸಿತು ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ವೃಷಬೇಂದ್ರಪ್ಪ ಅತ್ಮನಿರ್ಭರ ಭಾರತ ನಿರ್ಮಾಣ ಪ್ರತಿಜ್ಞೆ ಬೋಧಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳಾದ ಮೂಡ್ನಾಕೂಡು ಪ್ರಕಾಶ್, ಹೊನ್ನೂರು ಮಹದೇವಸ್ವಾಮಿ, ಓಬಿಸಿ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ನೂರೊಂದು ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಸುಂದ್ರಪ್ಪ, ನಗರಸಭಾ ಮಾಜಿ ಸದಸ್ಯ ಶಿವಣ್ಣ,ಜಿಲ್ಲಾ ಕಾರ್ಯದರ್ಶಿ ನಟರಾಜು, ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಸೂರ್ಯ, ಗ್ರಾಮಾಂತರ ಮಂಡಲ ಅಧ್ಯಕ್ಷ ಶಿವರುದ್ರಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೂಸಣ್ಣ, ಮಾಧ್ಯಮ ಸಂಚಾಲಕ ರಾಮಸಮುದ್ರ ಶಿವಣ್ಣ, ಮಾಧ್ಯಮ ಪ್ರಮುಖ್ ವೀರೇಂದ್ರ, ಉಡಿಗಾಲ ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ಮಂಜು, ಶಕ್ತಿ ಕೇಂದ್ರ ದ ಭಾಸ್ಕರ್, ಹೊಂಗನೂರು ಮಹಾದೇವಸ್ವಾಮಿ, ಗ್ರಾಮಾಂತರ ಮಂಡಲ ಕಾರ್ಯದರ್ಶಿ ಮಹದೇವಶೆಟ್ಟಿ ಇತರರು ಹಾಜರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))