ಸಾರಾಂಶ
ಉಡುಪಿ : ಕಾಂಗ್ರೆಸ್ ಪಕ್ಷವು ಯಾವತ್ತೂ ಕಾರ್ಯಕರ್ತರನ್ನು ಮರೆಯದೇ ಅವರ ಬೆಂಗಾವಲಾಗಿ ಇರುತ್ತದೆ. ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಯೋಗ್ಯ ಸ್ಥಾನ ನೀಡುತ್ತದೆ ಎಂದು ಕಾಂಗ್ರೆಸ್ ನಾಯಕ ಅಮೃತ್ ಶೆಣೈ ಹೇಳಿದರು.
ಅವರು ಉಡುಪಿ ಕಾಂಗ್ರೆಸ್ ಭವನದಲ್ಲಿ ನಡೆದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಸಭೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ದಿನಕರ್ ಹೇರೂರು, ಉಡುಪಿ ನಗರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಉಡುಪಿಯ ಜನತೆಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕಾರ್ಯನಿರ್ವಹಿಸಿ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವುದಾಗಿ ತಿಳಿಸಿದರು.
ಸಂಘಟನೆಯ ಅಧ್ಯಕ್ಷ ಸುರೇಶ್ ಶೆಟ್ಟಿ ಬನ್ನಂಜೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆ ಪದಾಧಿಕಾರಿಗಳಾದ ರಮಾ ಕುಕ್ಕಿಕಟ್ಟೆ, ಸದಾನಂದ ಕಿನ್ನಿಮುಲ್ಕಿ, ಉದಯ ಪೂಜಾರಿ ಪಂದುಬೆಟ್ಟು, ಯೋಗೀಶ್ ಮೂಡಬೆಟ್ಟು, ಮಹೇಶ್ ಮೂಡಬೆಟ್ಟು, ಅನ್ವರ್ ಕುಕ್ಕಿಕಟ್ಟೆ, ಸಾಯಿ ರಾಜ್ ಕೋಟ್ಯಾನ್, ಸುಕನ್ಯಾ ಪೂಜಾರಿ ಕಮಲ್ ಮಲ್ಪೆ, ಸುರೇಂದ್ರ ಆಚಾರ್ಯ ಕಾಡುಬೆಟ್ಟು, ಸುರೇಂದ್ರ ನಿಟ್ಟೂರು, ಉದಯ ಆಚಾರ್ಯ, ಸೂರ್ಯ ಬ್ರಹ್ಮಾವರ ಉಪಸ್ಥಿತರಿದ್ದರು. ಸುರೇಶ್ ತೆಂಕನಿಡಿಯೂರು ಕಾರ್ಯಕ್ರಮ ನಿರ್ವಹಿಸಿದರು, ಅನಿಲ್ ಕುಮಾರ್ ಹೆರ್ಗ ವಂದಿಸಿದರು.
;Resize=(128,128))
;Resize=(128,128))
;Resize=(128,128))