ಮತಬ್ಯಾಂಕ್ ರಾಜಕಾರಣಕ್ಕಾಗಿ ಇನ್ನೆಷ್ಟು ದಿನ ಹಿಂದೂಗಳ ಭಾವನೆಗಳ ಜೊತೆ ರಾಜ್ಯ ಕಾಂಗ್ರೆಸ್ ಸರ್ಕಾರ ಆಟ ಆಡುತ್ತದೆ?, ಇತ್ತೀಚೆಗೆ ನಡೆದ ಈದ್ ಮಿಲಾದ್ ಕಾರ್ಯಕ್ರಮಗಳಿಗೆ ಎಷ್ಟು ಅನುಮತಿ ನೀಡಲಾಯಿತು?. ಯಾವ ನಿಯಮಗಳ ಅಡಿಯಲ್ಲಿ ಅನುಮತಿ ನೀಡಲಾಯಿತು?. ಇದೇ ನಿಯಮಗಳು ಎಲ್ಲರಿಗೂ ಸಮಾನವಾಗಿ ಅನ್ವಯವಾಗುತ್ತಿವೆಯೇ?. ಸರ್ಕಾರ ಇದಕ್ಕೆ ಜನರ ಮುಂದೆ ಸ್ಪಷ್ಟ ಉತ್ತರ ನೀಡಬೇಕು ಎಂದು ಮಹಾನಗರ ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ ಪ್ರಶ್ನಿಸಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಈ ಕುರಿತು ಪ್ರಕಟಣೆ ನೀಡಿದ ಅವರು, ಗಣೇಶನನ್ನು ಪ್ರತಿಷ್ಠಾಪಿಸಲು ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ ಅನುಮತಿಗಾಗಿ ನೀಡಬೇಕಾದ ದಾಖಲೆಗಳ ಪಟ್ಟಿಯಲ್ಲಿ ಇನ್ನಿಲ್ಲದ ನಿಯಮ ಹಾಕಿದೆ. ಸುಖಾ ಸುಮ್ಮನೆ ಹಿಂದೂಗಳಿಗೆ ಕಿರಿಕಿರಿ ಮಾಡಲು ಸಿಕ್ಕಸಿಕ್ಕ ದಾಖಲೆಗಳನ್ನೆಲ್ಲ‌ ಕೇಳುತ್ತಿದೆ. ಕಾಂಗ್ರೆಸ್ ಸರ್ಕಾರ ಯಾರನ್ನೂ ಓಲೈಸುವ ಕೆಲಸ ಮಾಡಬಾರದು. ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು, ನಿಯಮ ಎಲ್ಲರಿಗೂ ಒಂದೇ ಆಗಿರಬೇಕು, ನ್ಯಾಯವೂ ಎಲ್ಲರಿಗೂ ಒಂದೇ ಆಗಿರಬೇಕು. ಜನರ ತೆರಿಗೆ ಹಣದಲ್ಲಿ ನಡೆಯುವ ಸರ್ಕಾರ ಯಾವುದೋ ಒಂದು ಮತಬ್ಯಾಂಕ್‌ನ ಸರ್ಕಾರವಲ್ಲ. ಇಡೀ ರಾಜ್ಯದ ಜನರ ಸರ್ಕಾರವಾಗಿದೆ. ಯಾರಿಗೂ ಅಧಿಕಾರ ಶಾಶ್ವತವಲ್ಲ, ಜನರ ತೀರ್ಪೇ ಅಂತಿಮವಾಗಿದೆ. ಗಣೇಶನ ವಿಚಾರದಲ್ಲಿ ಮತ್ತೆ ರಾಜಕೀಯ ಶುರುವಾಗಿದೆ ಎಂದು ಶಿವರುದ್ರ ಬಾಗಲಕೋಟ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.