ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಲೋಕಸಭೆ ಹಾಗೂ ರಾಜ್ಯಸಭೆಯ ಉಭಯ ಸದನಗಳ 146 ಸಂಸದರನ್ನು ಅಮಾನತುಗೊಳಿಸಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಶುಕ್ರವಾರ ನಗರದ ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾಧ್ಯಕ್ಷ ರಾಜು ಆಲಗೂರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಬಿಜೆಪಿ ಸರ್ಕಾರದ ಧೋರಣೆ ಖಂಡಿಸಲಾಯಿತು.ಪ್ರತಿಭಟನಾಕಾರನ್ನುದ್ದೇಶಿಸಿ ಜಿಲ್ಲಾಧ್ಯಕ್ಷ ರಾಜು ಆಲಗೂರ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರ ಸಂವಿಧಾನ ವಿರೋಧಿಯಾಗಿದ್ದು, ಇವರಿಗೆ ಸಂವಿಧಾನದ ಮೇಲೆ ವಿಶ್ವಾಸವಿಲ್ಲ. ಸರ್ಕಾರದ ಕೆಲ ನಿರ್ಧಾರ ಪ್ರಜಾತಂತ್ರ ವ್ಯವಸ್ಥೆಗೆ ಧಕ್ಕೆ ತರುವಂತಿದೆ. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಇದನ್ನು ಬಲವಾಗಿ ಖಂಡಿಸುತ್ತದೆ. ರಾಜಕೀಯ ದ್ವೇಷ ಸಾಧಿಸಲು ಹೊರಟಿರುವ ಈ ಸರ್ಕಾರ ವಿರೋಧ ಪಕ್ಷಗಳ ಮೇಲೆ ಗದಾಪ್ರಹಾರ ಮಾಡುತ್ತಿದೆ. ಲೋಕಸಭೆ ಹಾಗೂ ರಾಜ್ಯಸಭೆಯ ಸಭಾಪತಿಗಳನ್ನು ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಂಡು ವಿರೋಧ ಪಕ್ಷಗಳನ್ನು ನಿರ್ನಾಮ ಮಾಡಲು ಹೊರಟಿದ್ದಾರೆ. ಇವರ ಜನವಿರೋಧಿ ನೀತಿಗಳನ್ನು ಪ್ರಶ್ನೆ ಮಾಡಿದರೆ ಹಿಂಬಾಗಿಲಿನಿಂದ ಕೇಂದ್ರ ಸರ್ಕಾರ ವಿರೋಧ ಪಕ್ಷದ ಉಭಯ ಸದನಗಳ ಸಂಸದರನ್ನು ಅಮಾನತುಗೊಳಿಸಿದೆ. ಸಣ್ಣ ವಿಷಯಕ್ಕೆ ಅನರ್ಹಗೊಳಿಸುವ ಕೃತ್ಯಗಳಿಗೆ ಕೈಹಾಕಿರುವುದು ಈ ದೇಶದ ದುರಂತಗಳಲ್ಲಿ ಒಂದು. ಭಾರತ ರಾಷ್ಟ್ರ ಸ್ವಾತಂತ್ರ್ಯಗೊಂಡ ನಂತರ ಇಷ್ಟೊಂದು ಸಂಖ್ಯೆಯಲ್ಲಿ ಸಂಸದರನ್ನು ಅಮಾನತುಗೊಳಿಸಿರುವುದು ಇದೇ ಮೊದಲ ಪ್ರಕರಣ. ಈ ದೇಶದ ಜನ ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದಾರೆ ಎಂದರು.
ವಿರೋಧ ಪಕ್ಷಗಳನ್ನು ಹೊರಗಿಟ್ಟು, ಜನವಿರೋಧಿ ಬಿಲ್‌ಗಳನ್ನು ಮಂಡಿಸಿ ಪಾಸ್ ಮಾಡಿಕೊಳ್ಳುವ ಬಿಜೆಪಿ ಹುನ್ನಾರ ಇಡೀ ದೇಶವೇ ಗಮನಿಸಿದೆ. ಇವರ ಹುಳುಕನ್ನು ವಿರೋಧ ಪಕ್ಷ ಪ್ರಶ್ನೆ ಮಾಡಿದಾಗ ಈ ತರಹದ ಕೆಲಸ ಮಾಡಿದ್ದಾರೆ. ಇವರು ಈ ದೇಶವನ್ನು ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಂಡು ಜನವಿರೋಧಿ ಬಿಲ್‌ಗಳನ್ನು ಮಂಡಿಸಿ ದೇಶದ ಸಾಮರಸ್ಯಕ್ಕೆ ಧಕ್ಕೆ ತಂದೊಡ್ಡುವ ಪ್ರಯತ್ನ ಮಾಡುತ್ತಿದ್ದು, ಸರ್ವಾಧಿಕಾರಿ ರಾಜನಂತೆ ವರ್ತಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಈ ನೀತಿಯನ್ನು ಜನರ ಮುಂದೆ ಕೊಂಡೊಯ್ದು ತಕ್ಕಪಾಠ ಕಲಿಸಲಿದೆ. ಇವರ ಈ ಸರ್ವಾಧಿಕಾರಿ ಧೋರಣೆಯನ್ನು ಬಲವಾಗಿ ಖಂಡಿಸಲಿದೆ ಎಂದು ಹೇಳಿದರು.ಕೆ.ಎಫ್. ಅಂಕಲಗಿ, ಆಜಾದ್ ಪಟೇಲ್, ರಮೇಶ ಗುಬ್ಬೇವಾಡ, ಮಹಮ್ಮದ್ ರಫೀಕ್ ಟಪಾಲ, ಆರತಿ ಶಹಾಪೂರ, ಶಬ್ಬೀರ್ ಜಾಗೀರದಾರ, ಸಾಹೇಬಗೌಡ ಬಿರಾದಾರ ಮುಂತಾದವರು ಮಾತನಾಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಚಾಂದಸಾಬ ಗಡಗಲಾವ, ಡಾ.ಗಂಗಾಧರ ಸಂಬಣ್ಣಿ, ಚಂದ್ರಕಾಂತ ಶೆಟ್ಟಿ, ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ, ಜಮೀರ್ ಅಹ್ಮದ ಬಕ್ಷಿ, ಕಾಂಗ್ರೆಸ್ ಮುಖಂಡ ಡಿ.ಎಲ್. ಚವ್ಹಾಣ, ಎನ್‌ಎಸ್‌ಯುಐ ಜಿಲ್ಲಾ ಅಧ್ಯಕ್ಷ ಅಮಿತ ಚವ್ಹಾಣ, ಮಹಾನಗರಪಾಲಿಕೆ ಸದಸ್ಯ ದಿನೇಶ ಹಳ್ಳಿ, ಅಂಗ ಘಟಕಗಳ ಅಧ್ಯಕ್ಷ ಕೃಷ್ಣಾ ಕಾಮಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊನಮಲ್ಲ ಸಾರವಾಡ, ಚನಬಸಪ್ಪ ನಂದರಗಿ, ಹಾಜಿಲಾಲ ದಳವಾಯಿ, ಸೈಯದ್ ಅಫ್ತಾಬ್ ಖಾದ್ರಿ, ಭಾರತಿ ಹೊಸಮನಿ, ಭಾರತಿ ನಾವಿ, ಮಂಜುಳಾ ಗಾಯಕವಾಡ, ಪಯಾಜ ಕಲಾದಗಿ, ಅಫ್ಜಲ್ ಜಾನವೆಕರ, ಶಂಕರಸಿಂಗ ಹಜೇರಿ, ಕನ್ನಾನ ಮುಶ್ರೀಫ್, ಆಸ್ಮಾ ಕಾಲೆಬಾಗ, ಸಂತೋಷ ಬಾಲಗಾಂವಿ, ಮೊಹಮ್ಮದ ಮುಲ್ಲಾ, ಮಂಜುಳಾ ಗಾಯಕವಾಡ, ಅಬುಬಕರ್ ಕಂಬಾಗಿ, ಲಾಲಸಾಬ ಕೊರಬು, ಮಹೆಬೂಬ ಮುಧೋಳ, ಸಲೀಂ ಕಲಾದಗಿ, ಮಹಾದೇವ ಜಾಧವ, ಪ್ರಿಯಾಂಕಾ ತೊರವಿ, ಡಿ.ಆರ್. ಸಂಕದ, ಬಾಬುಸಾಬ ಯಾಳವಾರ, ಶಮೀಮ್ ಅಕ್ಕಲಕೋಟ, ಇಲಿಯಾಸ ಅಹಮ್ಮದ್ ಸಿದ್ದಿಕಿ, ಸಿದ್ದು ಹಡಪದ, ಕೃಷ್ಣಾ ಲಮಾಣಿ, ಸುಂದರಪಾಲ, ಮಹಿಬೂಬಸಾಬ್ ಚೌಧರಿ, ಫಿರೋಜ್ ಶೇಖ, ಹಮಿದಾ ಪಟೇಲ್, ಪರಶುರಾಮ ಹೊಸಮನಿ, ಗಿರೀಶ ಇಟ್ಟಂಗಿ, ರಜಾಕ್ ಸಾಬ ಕಾಖಂಡಕಿ, ದಸ್ತಗೀರ್ ಸಾಲೋಟಗಿ, ಪೀರಾ ಜಮಖಂಡಿ, ಮಂಜುನಾಥ ನಿಡೋಣಿ, ಜಹೀರಾ ಚೌಧರಿ, ಎ.ಎನ್. ಮನಗೂಳಿ ಮುಂತಾದವರು ಉಪಸ್ಥಿತರಿದ್ದರು.