ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿರುದ್ಧ ಮುಡಾ ಹಾಗೂ ವಾಲ್ಮೀಕಿ ಪ್ರಕರಣಗಳಲ್ಲಿ ವಿನಾಕಾರಣ ಆಪಾದನೆ ಮಾಡಿ ಅವರನ್ನು ತೇಜೋವಧೆ ಮಾಡಲಾಗುತ್ತಿದೆ. ಅಲ್ಲದೇ, ರಾಜ್ಯಪಾಲರು ಸಹ ಏಕಪಕ್ಷೀಯವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಜಿಲ್ಲಾ ಅಹಿಂದ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ರ್‍ಯಾಲಿ ನಡೆಸಲಾಯಿತು.ಮಂಗಳವಾರ ಬೆಳಗ್ಗೆ ನಗರದ ಶ್ರೀ ಸಿದ್ದೇಶ್ವರ ದೇವಾಲಯದಿಂದ ಆರಂಭಗೊಂಡ ರ್‍ಯಾಲಿ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಗಾಂಧಿ ವೃತ್ತ ತಲುಪಿತು. ಸಾವಿರಾರು ಕಾರ್ಯಕರ್ತರು ಬಿಜೆಪಿ ನಾಯಕರ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿದರು. ೧೦ ಸಾವಿರಕ್ಕೂ ಅಧಿಕ ಕಾರ್ಯಕರ್ತರು ರ್‍ಯಾಲಿಯಲ್ಲಿ ಭಾಗವಹಿಸಿದ್ದು, ಬಿಜೆಪಿ ಹಾಗೂ ಜೆಡಿಎಸ್ ನಾಯಕರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ನಂತರ ಡಾ.ಬಿ.ಆರ್. ಅಂಬೇಡ್ಕರ ವೃತ್ತದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಲಾಯಿತು.ಈ ಸಂದರ್ಭದಲ್ಲಿ ಸಕ್ಕರೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಮುಡಾದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪತ್ನಿಗೆ ನ್ಯಾಯಯುತ ಹಾಗೂ ಕಾನೂನಿನ ಪರಿಧಿಯಲ್ಲಿಯೇ ಸೈಟ್ ಹಂಚಿಕೆಯಾಗಿದೆ, ಇಲ್ಲಿ ಹಗರಣ ನಡೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ದೊಡ್ಡ ಹಗರಣಗಳೇ ನಡೆದಿವೆ. ಈ ಬಗ್ಗೆ ನಾವು ಪ್ರಶ್ನೆ ಮಾಡಿದ್ದೇವೆ, ಪಾದಯಾತ್ರೆ ನಡೆಸುತ್ತಿರುವ ಬಿಜೆಪಿ ನಾಯಕರು ನೈತಿಕತೆ ಇದ್ದರೆ ಈ ಸವಾಲುಗಳಿಗೆ ಉತ್ತರ ನೀಡಲಿ. ಮುಡಾ ಹಗರಣದಲ್ಲಿ ಬಿಜೆಪಿ, ಜೆಡಿಎಸ್ ನಾಯಕರ ಪಾತ್ರ ಇದೆಯೇ ಹೊರತು ಸಿದ್ಧರಾಮಯ್ಯ ಅವರ ಎಳ್ಳಷ್ಟೂ ಪಾತ್ರವಿಲ್ಲ ಎಂದು ಸಮರ್ಥಿಸಿಕೊಂಡರು.ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲಗಣಿಹಾರ ಮಾತನಾಡಿ, ಎಚ್.ಡಿ.ಕುಮಾರಸ್ವಾಮಿ ಹಾಗೂ ವಿಜಯೇಂದ್ರ ಇವರು ಹುಟ್ಟಿನಿಂದಲೇ ಭ್ರಷ್ಟಾಚಾರದ ಬಣ್ಣಹೊತ್ತೆ ಬಂದಿದ್ದಾರೆ. ಜನನಾಯಕನ ಮೇಲೆ ಆಪಾದನೆ ಹೊರೆಸುತ್ತಿರುವ ಬಿಜೆಪಿ, ಜೆಡಿಎಸ್ ನಾಯಕರೇ ಮೊದಲು ಭ್ರಷ್ಟರು. ಸಿದ್ದರಾಮಯ್ಯ ಅವರ ಹೆಸರು ಹೇಳಲು ಸಹ ಅವರಿಗೆ ಯೋಗ್ಯತೆ ಇಲ್ಲ. ಈ ಹಿಂದೆ ರೈಲು, ವಿಮಾನ ನಿಲ್ದಾಣ ಎಲ್ಲವನ್ನೂ ಮಾರಾಟ ಮಾಡುತ್ತಿರುವ ಮೋದಿಜಿ ಅವರ ಕಣ್ಣು ಈಗ ನಮ್ಮ ಸರ್ಕಾರದ ಮೇಲೆ ಬಿದ್ದಿದೆ. ಶಾಸಕರನ್ನು ಖರೀದಿಸಿ ಅಧಿಕಾರ ನಡೆಸುವುದು ಮಾತ್ರ ಬಿಜೆಪಿಗೆ ಗೊತ್ತಿದೆ ಎಂದು ಟೀಕಿಸಿದರು.ಸಿಂದಗಿ ಶಾಸಕ ಅಶೋಕ ಮನಗೂಳಿ ಹಾಗೂ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಮಾತನಾಡಿದರು. ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ, ಕೆಪಿಸಿಸಿ ಮಹಿಳಾ ಕಾರ್ಯದರ್ಶಿ ಸ್ನೇಹಲತಾ ಶೆಟ್ಟಿ ಮಹಿಳಾ ಕಾರ್ಯಕರ್ತರ ಹಾಗೂ ಹೋರಾಟಗಾರರ ನೇತೃತ್ವ ವಹಿಸಿದ್ದರು.ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಮೊಹ್ಮದ್‌ರಫೀಕ್ ಟಪಾಲ್, ಅಹಿಂದ ಒಕ್ಕೂಟಗಳ ಧುರೀಣರಾದ ಸೋಮನಾಥ ಕಳ್ಳಿಮನಿ, ಜಿಪಂ ಮಾಜಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಧುರೀಣರಾದ ಅಬ್ದುಲ್‌ರಜಾಕ್ ಹೊರ್ತಿ, ರಫೀಕ್‌ಅಹ್ಮದ್ ಖಾಣೆ, ಮಹಾದೇವಿ ಗೋಕಾಕ, ಆರತಿ ಶಹಾಪೂರ, ಜಮೀರ್ ಭಕ್ಷಿ, ಷಹಜಾನ್ ಮುಲ್ಲಾ, ಶಬ್ಬೀರ್ ಜಹಾಗೀರದಾರ, ಫಯಾಜ್ ಕಲಾದಗಿ, ಶರಣಪ್ಪ ಸುಣಗಾರ, ಎಂ.ಸಿ.ಮುಲ್ಲಾ, ಫಯಾಜ್ ಕಲಾದಗಿ, ಅಡಿವೆಪ್ಪ ಸಾಲಗಲ್ಲ, ಅರ್ಜುನ್ ರಾಠೋಡ, ಡಿ.ಎಲ್.ಚವಾನ್, ಜೆಟ್ಟೆಪ್ಪ ರಾವಳಿ, ಜಕ್ಕಪ್ಪ ಅಡವೆ, ಮಲ್ಲಿಕಾರ್ಜುನ ಮದರಿ, ಜಾವೀದ್ ಮೊಮಿನ್, ಗುರು ತಾರಾನಾಳ, ಮಲ್ಲು ಬಿದರಿ, ಸಂಜು ಕಂಬಾಗಿ, ಅಕ್ರಮ ಮಾಶಾಳಕರ, ಸಂಗಮೇಶ ಓಲೇಕಾರ, ಝಕೀರ ಬಾಗವಾನ ಮುಂತಾದವರು ಇದ್ದರು.-----------------
ಕೋಟ್ಹಿಂಬಾಗಿಲ ಮೂಲಕ ಅಧಿಕಾರ ಪಡೆಯುವ ಬಿಜೆಪಿ ಈಗ ಪರಿಶುದ್ಧ ಹಸ್ತದ ಸಿದ್ಧರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಷಡ್ಯಂತ್ರ ಮಾಡುತ್ತಿದೆ. ಐದಾರು ರಾಜ್ಯಗಳಲ್ಲಿ ಬಿಜೆಪಿ ಅಪ್ರಜಾಪ್ರಭುತ್ವದ ಮೂಲಕ ಅಧಿಕಾರಕ್ಕೆ ಬಂದಿದೆ. ಆದರೆ ಸ್ಪಷ್ಟ ಬಹುಮತ ಪಡೆದು ಜನಹಿತದ ಉದ್ದೇಶಕ್ಕಾಗಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನ ಮಾಡುತ್ತಿದೆ.
-ಶಿವಾನಂದ ಪಾಟೀಲ, ಸಕ್ಕರೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ.ಬಾಕ್ಸ್..
ತಲೆಸುತ್ತು ಬಂದು ಬಿದ್ದ ಹೆಡ್ ಕಾನ್ಸಟೆಬಲ್ನಗರದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಯುತ್ತಿದ್ದ ವೇಳೆ ತಲೆಸುತ್ತು ಬಂದು ಸ್ಥಳದಲ್ಲೇ ಪೊಲೀಸ್ ಸಿಬ್ಬಂದಿ ಬಿದ್ದ ಘಟನೆ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್ ನಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಹೆಡ್ ಕಾನ್ಸಟೆಬಲ್ ಒಬ್ಬರು ಬಿದ್ದಿದ್ದು, ತಕ್ಷಣವೇ ಪೊಲೀಸ್ ಸಿಬ್ಬಂದಿಯನ್ನು ಸಾರ್ವಜನಿಕರು ರಕ್ಷಣೆ ಮಾಡಿದ್ದಾರೆ. ಕೂಡಲೇ ಆಟೋ ಬಾಡಿಗೆ ಮಾಡಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿರುದ್ಧ ಮುಡಾ ಹಾಗೂ ವಾಲ್ಮೀಕಿ ಪ್ರಕರಣಗಳಲ್ಲಿ ವಿನಾಕಾರಣ ಆಪಾದನೆ ಮಾಡಿ ಅವರನ್ನು ತೇಜೋವಧೆ ಮಾಡಲಾಗುತ್ತಿದೆ. ಅಲ್ಲದೇ, ರಾಜ್ಯಪಾಲರು ಸಹ ಏಕಪಕ್ಷೀಯವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಜಿಲ್ಲಾ ಅಹಿಂದ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ರ್‍ಯಾಲಿ ನಡೆಸಲಾಯಿತು.ನಗರದ ಸಿದ್ದೇಶ್ವರ ದೇವಾಲಯದಿಂದ ಆರಂಭಗೊಂಡ ರ್‍ಯಾಲಿ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಗಾಂಧಿ ವೃತ್ತ ತಲುಪಿತು. ಸಾವಿರಾರು ಕಾರ್ಯಕರ್ತರು ಬಿಜೆಪಿ ನಾಯಕರ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿದರು. ೧೦ ಸಾವಿರಕ್ಕೂ ಅಧಿಕ ಕಾರ್ಯಕರ್ತರು ರ್‍ಯಾಲಿಯಲ್ಲಿ ಭಾಗವಹಿಸಿದ್ದು, ಬಿಜೆಪಿ ಹಾಗೂ ಜೆಡಿಎಸ್ ನಾಯಕರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ನಂತರ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಲಾಯಿತು.ಈ ಸಂದರ್ಭದಲ್ಲಿ ಸಕ್ಕರೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಮುಡಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ನ್ಯಾಯಯುತ ಹಾಗೂ ಕಾನೂನಿನ ಪರಿಧಿಯಲ್ಲಿಯೇ ಸೈಟ್ ಹಂಚಿಕೆಯಾಗಿದೆ. ಇಲ್ಲಿ ಹಗರಣ ನಡೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.
ಸಿಂದಗಿ ಶಾಸಕ ಅಶೋಕ ಮನಗೂಳಿ ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ದೊಡ್ಡ ಹಗರಣಗಳೇ ನಡೆದಿವೆ. ಈ ಬಗ್ಗೆ ನಾವು ಪ್ರಶ್ನೆ ಮಾಡಿದ್ದೇವೆ. ಪಾದಯಾತ್ರೆ ನಡೆಸುತ್ತಿರುವ ಬಿಜೆಪಿ ನಾಯಕರು ನೈತಿಕತೆ ಇದ್ದರೇ ಈ ಸವಾಲುಗಳಿಗೆ ಉತ್ತರ ನೀಡಲಿ. ಮುಡಾ ಹಗರಣದಲ್ಲಿ ಬಿಜೆಪಿ, ಜೆಡಿಎಸ್ ನಾಯಕರ ಪಾತ್ರ ಇದೆಯೇ ಹೊರತು ಸಿದ್ದರಾಮಯ್ಯ ಅವರ ಎಳ್ಳಷ್ಟೂ ಪಾತ್ರವಿಲ್ಲ ಎಂದು ಸಮರ್ಥಿಸಿಕೊಂಡರು.ಕೆಪಿಸಿಸಿ ಸದಸ್ಯ ಅಬ್ದುಲ್‌ಹಮೀದ್ ಮುಶ್ರೀಫ್ ಮಾತನಾಡಿ, ಜನನಾಯಕನ ಮೇಲೆ ಆಪಾದನೆ ಹೊರೆಸುತ್ತಿರುವ ಬಿಜೆಪಿ, ಜೆಡಿಎಸ್ ನಾಯಕರೇ ಮೊದಲು ಭ್ರಷ್ಟರು. ಸಿದ್ದರಾಮಯ್ಯ ಅವರ ಹೆಸರು ಹೇಳಲು ಸಹ ಅವರಿಗೆ ಯೋಗ್ಯತೆ ಇಲ್ಲ. ಈ ಹಿಂದೆ ರೈಲು, ವಿಮಾನ ನಿಲ್ದಾಣ ಎಲ್ಲವನ್ನೂ ಮಾರಾಟ ಮಾಡುತ್ತಿರುವ ಮೋದಿಜಿ ಅವರ ಕಣ್ಣು ಈಗ ನಮ್ಮ ಸರ್ಕಾರದ ಮೇಲೆ ಬಿದ್ದಿದೆ. ಶಾಸಕರನ್ನು ಖರೀದಿಸಿ ಅಧಿಕಾರ ನಡೆಸುವುದು ಮಾತ್ರ ಬಿಜೆಪಿಗೆ ಗೊತ್ತಿದೆ ಎಂದು ಟೀಕಿಸಿದರು.ಜಿಲ್ಲಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಹಾಗೂ ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ ಮಾತನಾಡಿದರು. ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಮೊಹ್ಮದ್‌ರಫೀಕ್ ಟಪಾಲ್, ಅಹಿಂದ ಒಕ್ಕೂಟಗಳ ಧುರೀಣರಾದ ಸೋಮನಾಥ ಕಳ್ಳಿಮನಿ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ, ಜಿಪಂ ಮಾಜಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಧುರೀಣರಾದ ಅಬ್ದುಲ್‌ರಜಾಕ್ ಹೊರ್ತಿ, ರಫೀಕ್‌ಅಹ್ಮದ್ ಖಾಣೆ, ಮಹಾದೇವಿ ಗೋಕಾಕ, ಆರತಿ ಶಹಾಪೂರ, ಜಮೀರ್ ಭಕ್ಷಿ, ಷಹಜಾನ್ ಮುಲ್ಲಾ, ಶಬ್ಬೀರ್ ಜಹಾಗೀರದಾರ, ಫಯಾಜ್ ಕಲಾದಗಿ, ಶರಣಪ್ಪ ಸುಣಗಾರ, ಎಂ.ಸಿ.ಮುಲ್ಲಾ, ಫಯಾಜ್ ಕಲಾದಗಿ, ಅಡಿವೆಪ್ಪ ಸಾಲಗಲ್ಲ, ಅರ್ಜುನ್ ರಾಠೋಡ, ಡಿ.ಎಲ್.ಚವಾನ್, ಸ್ನೇಹಲತಾ ಶೆಟ್ಟಿ, ಜೆಟ್ಟೆಪ್ಪ ರಾವಳಿ, ಜಕ್ಕಪ್ಪ ಅಡವೆ, ಮಲ್ಲಿಕಾರ್ಜುನ ಮದರಿ, ಜಾವೀದ್ ಮೊಮಿನ್, ಗುರು ತಾರಾನಾಳ, ಮಲ್ಲು ಬಿದರಿ, ಸಂಜು ಕಂಬಾಗಿ, ಅಕ್ರಮ ಮಾಶಾಳಕರ, ಸಂಗಮೇಶ ಓಲೇಕಾರ, ಝಕೀರ ಬಾಗವಾನ ಮುಂತಾದವರು ಇದ್ದರು.-----------ಕೋಟ್...
ಹಿಂಬಾಗಿಲ ಮೂಲಕ ಅಧಿಕಾರ ಪಡೆಯುವ ಬಿಜೆಪಿ ಈಗ ಪರಿಶುದ್ಧ ಹಸ್ತದ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಷಡ್ಯಂತ್ರ ಮಾಡುತ್ತಿದೆ. ಐದಾರು ರಾಜ್ಯಗಳಲ್ಲಿ ಬಿಜೆಪಿ ಅಪ್ರಜಾಪ್ರಭುತ್ವದ ಮೂಲಕ ಅಧಿಕಾರಕ್ಕೆ ಬಂದಿದೆ. ಆದರೆ, ಸ್ಪಷ್ಟ ಬಹುಮತ ಪಡೆದು ಜನಹಿತದ ಉದ್ದೇಶಕ್ಕಾಗಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನ ಮಾಡುತ್ತಿದೆ.-ಶಿವಾನಂದ ಪಾಟೀಲ, ಸಕ್ಕರೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರು.