ಅಯಾಜ್‌ ಖಾನ್‌ಗೆ ಕಾಂಗ್ರೆಸ್‌ ಟಿಕೆಟ್, ಶಿಫಾರಸ್ಸಿಗೆ ಮನವಿ

| Published : Feb 23 2024, 01:45 AM IST

ಅಯಾಜ್‌ ಖಾನ್‌ಗೆ ಕಾಂಗ್ರೆಸ್‌ ಟಿಕೆಟ್, ಶಿಫಾರಸ್ಸಿಗೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಬೀದರ್‌ ಲೋಕಸಭಾ ಕ್ಷೇತ್ರದಿಂದ ಮುಖಂಡ ಅಯಾಜ್‌ ಖಾನ್‌ಗೆ ಕಾಂಗ್ರೆಸ್‌ ಟಿಕೆಟ್‌ ನೀಡಲು ಶಿಫಾರಸ್ಸು ಮಾಡ ಬೇಕೆಂದು ಬೆಂಗಳೂರಿನಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ಸಮಾಜದ ವಿವಿಧ ಮುಖಂಡರಿಗೆ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಹಿರಿಯ ಯುವ ಕಾಂಗ್ರೆಸ್‌ ಮುಖಂಡ ಮಹ್ಮದ್‌ ಅಯಾಜ್‌ ಖಾನ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಬೇಕೆಂದು ವಿವಿಧ ಸಂಘಟನೆಗಳ ಪ್ರಮುಖರು ಆಗ್ರಹಿಸಿದ್ದಾರೆ.

ಜಿಲ್ಲೆಯ ಹಾಗೂ ವಿವಿಧ ತಾಲೂಕುಗಳಿಂದ ಅನೇಕ ಅಲ್ಪಸಂಖ್ಯಾತರ ಸಂಘಟನೆಗಳ ಪ್ರಮುಖರು ಬೆಂಗಳೂರಿಗೆ ತೆರಳಿ ಅಲ್ಲಿನ ಅಲ್ಪಸಂಖ್ಯಾತ ಮುಸ್ಲಿಂ ಸಮಾಜದ ಮುಖಂಡರಾದ ಮೌಲಾನಾ ಸಗೀರ ಅಹ್ಮದ ರಶ್ದಿ ಅಮೀರ- ಎ- ಶರೀಯತ್‌, ಡಾ. ಮೌಲಾನಾ ಮಸೂದ ಇಮ್ರಾನ್‌ ರಶ್ದಿ ಖತೀಬ್‌ ಸಿಟಿ ಜಾಮಿಯಾ ಮಸೀದಿ ಬೆಂಗಳೂರು, ಮೌಲಾನಾ ರಹೀಮ್‌ ರಶ್ದಿ, ಅಲ್‌ಹಜ್‌ ಅಮೀರಜಾನ್‌, ಜಮಾತೆ ಇಸ್ಲಾಮಿ ಹಿಂದ್‌ ಬೆಂಗಳೂರಿನ ಅಧ್ಯಕ್ಷರಾದ ಮೌಲಾನಾ ಯೂಸುಫ್‌ ಕನ್ನಿ,ಮಸೂದ ಅಬ್ದುಲ್‌ ಖಾದರ್‌, ಹಬೀಬುರ್‌ ರಹೆಮಾನ್‌ ರಶ್ದಿ ಇನ್ನಿತರರಿಗೆ ಮನವಿ ಸಲ್ಲಿಸಿ ಅಯಾಜ್‌ ಖಾನ್‌ ಅವರಿಗೆ ಬೀದರ್‌ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ನೀಡಲು ಕಾಂಗ್ರೆಸ್‌ ಪಕ್ಷದ ಹೈಕಮಾಂಡ್‌ಗೆ ಶಿಫಾರಸ್ಸು ಮಾಡುವಂತೆ ಮನವಿಸಿದ್ದಾರೆ.

ಮಹ್ಮದ ಆಯಾಜ್‌ ಖಾನ್‌ ಕಾಂಗ್ರೆಸ್‌ ಹಿರಿಯ ಮುಖಂಡರು, ಶಿಕ್ಷಣ ತಜ್ಞರು ಅಲ್ಲದೇ ಸಾಮಾಜಿಕ ಕಳಕಳಿವುಳ್ಳವರಾಗಿದ್ದು ಎಲ್ಲ ಸಮಾಜದ ಜನರೊಂದಿಗೆ ಉತ್ತಮ ಬಾಂಧವ್ಯವುಳ್ಳವರಾಗಿದ್ದಾರೆ. ಅವರಿಗೆ ಟಿಕೆಟ್‌ ನೀಡುವಂತೆ ಕಾಂಗ್ರೆಸ್‌ಗೆ ಶಿಫಾರಸ್ಸು ಮಾಡುವುದಾಗಿ ಸಮಾಜದ ಮುಖಂಡರು ಭರವಸೆ ನೀಡಿದ್ದಾರೆ ಅಲ್ಪಸಂಖ್ಯಾತ ಸಂಘಟನೆಗಳು ಪ್ರಕಟಣೆಯಲ್ಲಿ ತಿಳಿಸಿವೆ.

ಈ ಸಂದರ್ಭದಲ್ಲಿ ಮನ್ನಾಎಖ್ಖೇಳ್ಳಿಯ ಸಲಾಂ ಪಾಶಾ, ಮುಫ್ತಿ ಅಬ್ದುಲ್‌ ವಾಜೀದ ಅಲಿ ಚಿಟಗುಪ್ಪ, ಮೌಲಾನಾ ಇಬ್ರಾಹಿಂ ಔರಾದ್‌, ಹಾಜಿ ಗುಲಾಮ್‌ ಸಮದ ಭಾಲ್ಕಿ, ಡಾ. ರಫೀಕ್‌ ಮತೀನ, ಹಾಫೀಜ್‌ ಹಮೀದ್ ಚಿಂಚೋಳಿ, ಮೊಹ್ಮದ್‌ ಮುಸ್ತಫಾ ಹುಮನಾಬಾದ್‌, ಮೊಹ್ಮದ ಮೌಲಾನಾ ಲೈಖ್‌ ಬಸವಕಲ್ಯಾಣ, ಮುಫ್ತಿ ಗಫಾರ್‌, ಖಾರಿ ಹಾಸೀಮ್‌, ಅಸ್ಲಂ ಖಾಸ್ಮಿ, ಮೌಲಾನಾ ಇಫ್ತೆಕಾರ್‌ ಬೀದರ್‌, ಮುಫ್ತಿ ಎಹೇತೆಶಾಮ, ಕಮಲನಗರ, ಸೈಯದ್‌ ಮೆಹಬೂಬ ಬುಖಾರಿ ನೀರ್ಣಾ ಹೀಗೆ ವಿವಿಧ ತಾಲೂಕುಗಳ ಮುಸ್ಲಿಂ ಸಮುದಾಯದ ಅನೇಕ ಮುಖಂಡರು ಉಪಸ್ಥಿತರಿದ್ದರು.