ಸಾರಾಂಶ
ಕೈ ವಶವಾದ ಹಾಲು ಉತ್ಪಾದಕರ ಸಂಘ । ಕಾಂಗ್ರೆಸ್‌ಗೆ 12ರಲ್ಲಿ 11 ಸ್ಥಾನ
ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿಹೋಬಳಿಯ ಅತ್ತಿಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ 5 ವರ್ಷಗಳ ಅವಧಿಗೆ ನೆಡೆದ ಚುನಾವಣೆಯಲ್ಲಿ 12 ನಿರ್ದೇಶಕರ ಪೈಕಿ 11 ಸ್ಥಾನವನ್ನು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸುವ ಮೂಲಕ ಹಾಲು ಉತ್ಪಾದಕರ ಸಂಘ ಕಾಂಗ್ರೆಸ್ ವಶವಾಗಿದೆ.
ತೀವ್ರ ಪ್ರತಿಷ್ಠೆಯ ಕಣವಾಗಿದ್ದ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ ಮುಂಜಾಗ್ರತ ಕ್ರಮವಾಗಿ ಪೊಲೀಸರ ಬಿಗಿ ಭದ್ರತೆಯಲ್ಲಿ ಭಾನುವಾರ ಚುನಾವಣೆ ನಡೆಯಿತು. ಒಟ್ಟು 12 ನಿರ್ದೇಶಕ ಸ್ಥಾನಗಳಿಗೆ ಕಾಂಗ್ರೆಸ್ ಬೆಂಬಲಿತ 12 ಅಭ್ಯರ್ಥಿಗಳು ಜೆಡಿಎಸ್ ಬೆಂಬಲಿತ 12 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದರು. ಭಾನುವಾರ ಬೆಳಿಗ್ಗೆಯಿಂದಲೇ ಮತದಾನ ಶಾಂತಿಯುತವಾಗಿ ನಡೆಯಿತು. ಸಂಜೆ ನಡೆದ ಮತ ಎಣಿಕೆಯಲ್ಲಿ ಕಾಂಗ್ರೆಸ್ ಬೆಂಬಲಿತ 11 ಅಭ್ಯರ್ಥಿಗಳು ಜೆಡಿಎಸ್ ಬೆಂಬಲಿತ ಒಬ್ಬ ಅಭ್ಯರ್ಥಿ ಜಯಗಳಿಸಿದರು. ಚುನಾವಣಾಧಿಕಾರಿಯಾಗಿ ಅಣ್ಣಪ್ಪ ಕಾರ್ಯ ನಿರ್ವಹಿಸಿದರು.ಈ ಚುನಾವಣೆಯು ಸೇರಿ ಕಳೆದ 4 ಅವಧಿಯ ಚುನಾವಣೆಗಳಲ್ಲೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೇ ಜಯಗಳಿಸಿದ್ದರು. ಈ ಚುನಾವಣೆಯಲ್ಲಿ ಜಯಗಳಿಸುವ ಮೂಲಕ 5ನೇ ಬಾರಿಗೆ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಂತಾಗಿದೆ.
ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸುತ್ತಿದ್ದಂತೆ ಪಕ್ಷದ ಕಾರ್ಯಕರ್ತರು, ಮುಖಂಡರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.ನೂತನ ನಿರ್ದೇಶಕರಾದ ಎ .ಕೆ.ಅಶೋಕ್, ಯೋಗೇಶ್, ಎಟಿ ಧನಂಜಯ, ಗೋವಿಂದ ಜಿ., ಚಂದ್ರೇಗೌಡ, ಎಆರ್ ವೆಂಕಟೇಶ್, ನಾಗರತ್ನ, ಸ್ಮಿತಾ, ಮಂಗಳ ಕೆ.ಎನ್., ಭಾರತಿ, ಎ ಎಲ್ ಲಿಂಗರಾಜು, ಪಾರ್ವತಮ್ಮ, ಅವರನ್ನು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಅಭಿನಂದಿಸಿದರು.
ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಾಲಿಂಗೇಗೌಡ ಮಾತನಾಡಿ, ಕಳೆದ 5 ಅವಧಿಗಳಿಂದಲೂ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಕಾಂಗ್ರೆಸ್ ಪಕ್ಷದ ಹಿಡಿತದಲ್ಲಿದೆ. ಪಕ್ಷದ ಮುಖಂಡರಾದ ಎಂ.ಎ. ಗೋಪಾಲಸ್ವಾಮಿ, ಎಚ್.ಎಸ್. ವಿಜಯಕುಮಾರ್, ದೀಪು, ಶಶಿಧರ್ ಅವರ ಹೆಚ್ಚಿನ ಸಹಕಾರದಿಂದ ಈ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 11 ಅಭ್ಯರ್ಥಿಗಳು ಜಯಗಳಿಸಲು ಸಾಧ್ಯವಾಯಿತು. ನೂತನ ಆಡಳಿತ ಮಂಡಳಿ ಮುಂದಿನ 5 ವರ್ಷ ರೈತರ ಪರ ಕೆಲಸ ನಿರ್ವಹಿಸಲಿ ಎಂದರು.ಮುಖಂಡರಾದ ಮಾಲಿಂಗೇಗೌಡ, ಎ.ಎನ್.ನಾಗೇಂದ್ರ ಪ್ರಸಾದ್, ಟಿ. ಕಂಬೇಗೌಡ, ಎ.ಟಿ. ಶ್ರೀನಿವಾಸ್, ಸಹದೇವಣ್ಣ, ಸಣ್ಣ ತಿಮ್ಮೇಗೌಡ, ಮೊಗಣ್ಣ ಗೌಡ, ಹನುಮಂತೇಗೌಡ, ಕಿರಣ್, ಹುಲಿಕೆರೆ ಶಿವಸ್ವಾಮಿ, ಬಾಂಬೆ ರಮೇಶ್, ಕಾರ್ಯದರ್ಶಿ ತಿಮ್ಮ ಶೆಟ್ಟಿ, ಹಾಲು ಪರೀಕ್ಷಕ ಎನ್. ಮಂಜಪ್ಪ ಹಾಜರಿದ್ದರು.ಅತ್ತಿಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ ಹಿನ್ನೆಲೆ ನೂತನ ನಿರ್ದೇಶಕರನ್ನು ಮುಖಂಡರು, ಕಾರ್ಯಕರ್ತರು ಅಭಿನಂದಿಸಿದರು.