ಸಾರಾಂಶ
ಅಖಿಲ ಭಾರತ ವೀರಶೈವ ಮಹಾಸಭಾವನ್ನು ವೀರಶೈವ ಸಮುದಾಯದವರಿಗೆ ಆಚಾರ, ವಿಚಾರ, ಸಂಪ್ರದಾಯ ಮತ್ತು ಪರಂಪರೆಗಳ ಮಹತ್ವದ ಬಗ್ಗೆ ಪ್ರಜ್ಞೆ ಮೂಡಿಸುವುದು
ಕನ್ನಡಪ್ರಭ ವಾರ್ತೆ ಕೊರಟಗೆರೆ
ಅಖಿಲ ಭಾರತ ವೀರಶೈವ ಮಹಾಸಭಾವನ್ನು ವೀರಶೈವ ಸಮುದಾಯದವರಿಗೆ ಆಚಾರ, ವಿಚಾರ, ಸಂಪ್ರದಾಯ ಮತ್ತು ಪರಂಪರೆಗಳ ಮಹತ್ವದ ಬಗ್ಗೆ ಪ್ರಜ್ಞೆ ಮೂಡಿಸುವುದು ಹಾಗೂ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಧ್ಯೇಯದಿಂದ ಹಾನಗಲ್ ಕುಮಾರಸ್ವಾಮಿ ರವರು ೧೯೦೨ ಸ್ಥಾಪಿಸಿದರು ಎಂದು ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಶ್ರೀ ವೀರಭದ್ರಶಿವಾಚಾರ್ಯಸ್ವಾಮೀಜಿ ತಿಳಿಸಿದರು.ಪಟ್ಟಣದ ಕನ್ನಿಕಾ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಕೊರಟಗೆರೆ ತಾಲೂಕು ಘಟಕ ಏರ್ಪಡಿಸಿದ್ದ ತಾಲೂಕು ಘಟಕದ ನೂತನ ಅಧ್ಯಕ್ಷ ಹಾಗೂ ನಿರ್ದೇಶಕರ ಪದಗ್ರಹಣ ಸಮಾರಂಭದಲ್ಲಿ ದಿವ್ಯಸಾನಿದ್ಯ ವಹಿಸಿ ಮಾತನಾಡಿ ವೀರಶೈವ ಮಹಾಸಭಾ ರಾಜ್ಯದಲ್ಲಿಯೇ ಧಾರ್ಮಿಕ ನೆಲೆಗಟ್ಟನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ವೈಜ್ಞಾನಿಕಕತೆಯ ಆದುನಿಕ ತಂತ್ರಜ್ಞಾನದ ಜಗತ್ತಿನಲ್ಲಿ ಯುವ ಪೀಳಿಗೆಯಲ್ಲಿ ಸಂಸ್ಕಾರ, ಸಂಸ್ಕೃತಿ ಹಾಗೂ ಗುರು ಹಿರಿಯರಲ್ಲಿ ಗೌರವದ ಭಾವನೆ ಕಡಿಮೆಯಾಗುತ್ತಿದ್ದು ಶಿವ ಪೂಜೆ ಯಂತಹ ಮಹತ್ತರ ಧಾರ್ಮಿಕ ಕಾರ್ಯವನ್ನೆ ಮರೆಯುತ್ತಿದ್ದಾರೆ. ವೀರಶೈವ ಮಹಾಸಭಾ ಇಂತಹ ಸಂಪ್ರದಾಯಗಳ ಅರಿವು ಮೂಡಿಸುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಮಹಾಸಭಾದ ನೂತನ ಜಿಲ್ಲಾಧ್ಯಕ್ಷ ಪ್ರತಿ ತಿಂಗಳು ತಾಲೂಕು ಮಟ್ಟದ ಸಂಘಗಳಿಗೆ ಹಾಗೂ ತಾಲೂಕು ಸಂಘಗಳ ಪದಾಧಿಕಾರಿಗಳು ಹೋಬಳಿ ಮತ್ತು ಗ್ರಾಮೀಣ ಮಟ್ಟದ ಸಂಘಗಳನ್ನು ಬೇಟಿ ಮಾಡಿ ಕುಂದು ಕೊರತೆಗಳುನ್ನು ಬಗೆಹರಿಸಬೇಕು. ಮೊದಲು ತಾಲೂಕಿನಲ್ಲಿ ವಿದ್ಯಾರ್ಥಿಗಳಿಗೆ ವಸತಿನಿಲಯ ಹಾಗೂ ಸಮುದಾಯ ಭವನವನ್ನು ಕಟ್ಟುವ ಕೆಲಸ ಮಾಡಬೇಕು ಹಾಗೂ ತಾಲೂಕಿನಲ್ಲಿ ಕುಂಟಿತವಾಗಿರುವ ವೀರಶೈವ ಬಂಧು ಪತ್ತಿನ ಸಹಕಾರ ಬ್ಯಾಂಕ್ ಅನ್ನು ಪುನಶ್ಚೇತನ ಗೊಳಿಸಬೇಕು ಎಂದರು. ಜಿಲ್ಲಾ ಘಟಕದ ನೂತನ ಅಧ್ಯಕ್ಷ ಡಾ.ಪರಮೇಶ್ ಮಾತನಾಡಿ, ಜಿಲ್ಲೆಯಲ್ಲಿ ಸಂಘಗಳನ್ನು ಶಕ್ತಿಯುತ ಗೊಳಿಸಲು ಶ್ರಮಿಸಲಾಗುವುದು ಮತ್ತು ತಾಲೂಕಿನಲ್ಲಿ ನಿರ್ಮಿಸುವ ಸಮುದಾಯ ಭವನಕ್ಕೆ ೧ ಲಕ್ಷ ದೇಣಿಗೆಯನ್ನು ನೀಡುವುದಾಗಿ ತಿಳಿಸಿದರು. ತಾಲೂಕು ನೂತನ ಅಧ್ಯಕ್ಷ ಪಿ.ವಿ.ವೀರಭದ್ರಯ್ಯ(ಭದ್ರಣ್ಣ) ಮಾತನಾಡಿ ವೀರಶೈವ ಸಮುದಾಯದ ಅಭಿವೃದ್ದಿಗೆ ಸಂಘದ ಪ್ರತಿಯೊಬ್ಬರು ಅಧ್ಯಕ್ಷರೆಂದು ಭಾವಿಸಬೇಕು ಎಲ್ಲರೂ ಒಟ್ಟಾಗಿ ಶ್ರಮಿಸಬೇಕು, ತಾಲೂಕಿನಲ್ಲಿ ನೂತನವಾಗಿ ನಿರ್ಮಿಸುವ ಸಮುದಾಯ ಭವನಕ್ಕೆ ೫ ಲಕ್ಷ ದೇಣಿಗೆಯನ್ನು ನೀಡುವುದಾಗಿ ಘೋಷಿಸಿದರು. ಕೃಷಿಕ ಸಮಾಜದ ಮಾಜಿ ಅಧ್ಯಕ್ಷ ಹೆಚ್.ಎಂ.ರುದ್ರಪ್ರಸಾದ್ ಮಾತನಾಡಿ ವೀರಶೈವ ಸಮುದಾಯದಲ್ಲಿ ಶಕ್ತಿವಂತ ಜನರಿದ್ದರೂ ನಮ್ಮಗಳ ಕಾಲುಗಳನ್ನು ನಾವೇ ಎಳೆದುಕೊಂಡು ಸಮಾಜದಲ್ಲಿ ಮುಖ್ಯವಾಹಿನಿಗೆ ಬರಲು ಸಾದ್ಯವಾಗುತ್ತಿಲ್ಲ, ಮೊದಲು ತಾಲೂಕಿನಲ್ಲಿ ನಮ್ಮ ವೀರಶೈವ ಜನಾಂಗವು ಸಂಘಟಿತರಾಗಬೇಕು ನೂತನ ವೀರಶೈವ ಸಂಘದ ಪದಾದಿಕಾರಿಗಳ ಜೊತೆಗೂಡಿ ತಾಲೂಕಿನಲ್ಲಿ ಪ್ರಥಮ ಹಂತವಾಗಿ ಸಮುದಾಯದ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ್ಣು ಮಕ್ಕಳು ಮತ್ತು ಗಂಡು ಮಕ್ಕಳ ವಿದ್ಯಾರ್ಥಿನಿಲಯವನ್ನು ನಿರ್ಮಿಸಬೇಕು. ಈ ಕಟ್ಟಡಗಳ ನಿರ್ಮಾಣಕ್ಕೆ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ರವರು ಅನುದಾನವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ, ಇದರೊಂದಿಗೆ ಜನಾಂಗದ ಸಮುದಾಯ ಭವನವು ಸಹ ನಿರ್ಮಿಸಬೇಕಿದ್ದು ಎಲ್ಲರ ಸಹಕಾರ ಮುಖ್ಯ ಎಂದರು. ಈ ಸಂದರ್ಭದಲ್ಲಿ ತಾಲೂಕಿನ ವೀರಶೈವ ಮಹಾಸಭಾದ ನೂತನವಾಗಿ ಆಯ್ಕೆಯಾದ ನಿರ್ದೇಶಕರುಗಳಾದ ಈಶಪ್ರಸಾದ್, ಜಿ.ಎಂ.ಶಿವಾನಂದ್, ಉಮಾಶಂಕರಾದ್ಯ, ಚನ್ನಬಸವರಾಧ್ಯ, ಚನ್ನಂಜಯ್ಯ, ಎಸ್.ಎಸ್.ಪವನ್‌ಕುಮಾರ್, ಜ್ಯೋತಿ ಪ್ರಕಾಶ್, ಪುಟ್ಟರಾಜು, ಪಾಲನೇತ್ರಯ್ಯ, ವಿನಯ್‌ಕುಮಾರ್, ಶಿವಕುಮಾರ್, ಕಿರಣ್‌ಕುಮಾರ್, ಚಿದಾನಂದ, ಪುಪ್ಪಲತಾ, ಭಾರತಿ, ರೂಪಶ್ರೀ, ಶುಭಾ, ಶಂಕುತಲಾ, ಶಾಂತಮ್ಮ ರವರುಗಳನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ಬಿಜೆಪಿ ತಾಲೂಕು ಅಧ್ಯಕ್ಷ ದರ್ಶನ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರುದ್ರೇಶ್, ಮುಖಂಡರುಗಳಾದ ಎಲ್.ರಾಜಣ್ಣ, ಪರ್ವತಯ್ಯ, ಆರ್.ಎಸ್. ರಾಜಣ್ಣ, ಮಂಜುಳಾ ಶಂಭುಲಿಂಗಾರಾಧ್ಯ, ದ್ರಾಕ್ಷಾಯಿಣಿ, ಮಮತಾ, ತೀತಾ ಮಂಜುನಾಥ್, ಕೆ.ಬಿ.ಲೋಕೇಶ್, ಆರ್.ಆರ್.ರಾಜಣ್ಣ, ಕೆ.ಎಂ.ಸುರೇಶ್, ಮಲ್ಲಣ್ಣ, ತ್ರೀಯಂಭಕಾರಾದ್ಯ, ಕಾಳಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.