ಜಲಮೂಲವಿದ್ದರೂ ನಿತ್ಯ ನೀರಿಗಾಗಿ ಪರದಾಟ: ಘಾಣೂರ

| Published : May 14 2024, 01:09 AM IST

ಜಲಮೂಲವಿದ್ದರೂ ನಿತ್ಯ ನೀರಿಗಾಗಿ ಪರದಾಟ: ಘಾಣೂರ
Share this Article
  • FB
  • TW
  • Linkdin
  • Email

ಸಾರಾಂಶ

ಅಫಜಲ್ಪುರ ತಾಲೂಕಿನ ಆನೂರ ಗ್ರಾಮದಲ್ಲಿ ಜಲಮೂಲವಿದ್ದರೂ ಕೂಡ ಗ್ರಾಪಂನವರು ಸರಿಯಾಗಿ ನೀರು ಸರಬರಾಜು ವ್ಯವಸ್ಥೆ ಮಾಡದೇ ಇರುವುದರಿಂದ ಗ್ರಾಮದಲ್ಲಿ ನಿತ್ಯ ನೀರಿಗಾಗಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ

ಚವಡಾಪುರ:

ಅನೇಕ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ತಗ್ಗಿದ್ದು ನೀರಿಗಾಗಿ ಜನ ಪರದಾಡುವಂತಾಗಿದೆ. ಆದರೆ ಅಫಜಲ್ಪುರ ತಾಲೂಕಿನ ಆನೂರ ಗ್ರಾಮದಲ್ಲಿ ಜಲಮೂಲವಿದ್ದರೂ ಕೂಡ ಗ್ರಾಪಂನವರು ಸರಿಯಾಗಿ ನೀರು ಸರಬರಾಜು ವ್ಯವಸ್ಥೆ ಮಾಡದೇ ಇರುವುದರಿಂದ ಗ್ರಾಮದಲ್ಲಿ ನಿತ್ಯ ನೀರಿಗಾಗಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಗ್ರಾ.ಪಂ. ಅಧ್ಯಕ್ಷ ದತ್ತು ಘಾಣೂರ ಆರೋಪಿಸಿದರು.

ಸೋಮವಾರ ಗ್ರಾಮಸ್ಥರೊಂದಿಗೆ ಗ್ರಾ.ಪಂ. ಕಚೇರಿಗೆ ಮುತ್ತಿಗೆ ಹಾಕಿ ಮಾತನಾಡಿ, ಆನೂರ ಗ್ರಾಮದಲ್ಲಿ ಎಲ್ಲಾ ಕಡೆ ಅಂತರ್ಜಲ ಮಟ್ಟ ಸರಿಯಾಗಿದೆ. ಇರುವ ಜಲಮೂಲಗಳನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಗ್ರಾಮಸ್ಥರಿಗೆ ನೀರು ಪೂರೈಕೆ ಮಾಡಬೇಕು. ಇನ್ನೊಂದು ತಿಂಗಳಲ್ಲಿ ಗ್ರಾಮ ದೇವತೆ ಜಾತ್ರೆ ನಡೆಯಲಿದೆ. ಬೇರೆ ಬೇರೆ ಊರುಗಳಲ್ಲಿ ನೆಲೆಸಿರುವ ಗ್ರಾಮಸ್ಥರು ಊರಿಗೆ ಬರುತ್ತಾರೆ. ಅಲ್ಲದೆ ಆನೂರ ಗ್ರಾಮದೇವತೆ ಚಂದ್ರಗಿರಿ ದೇವಿಯ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಗ್ರಾಮಕ್ಕೆ ಬಂದು ಹೋಗುತ್ತಾರೆ. ಈ ಸಮದಯದಲ್ಲಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಪಂಚಾಯಿತಿಯವರು ವ್ಯವಸ್ಥೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಗ್ರಾಮದಲ್ಲಿ ಸಮಸ್ಯೆ ಉಲ್ಬಣಿಸಲಿದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲಣ್ಣಗೌಡ ಮಾಲಿಪಾಟೀಲ, ಚಂದ್ರಕಾಂತ ಸೀತನೂರ, ಗುರಣ್ಣ ಜಿರೋಳಿ, ಶ್ರೀಶೈಲ ಮುತ್ಯಾ, ಸಿದ್ದು ರೂಗಿ, ದತ್ತು ಕಲಶೆಟ್ಟಿ, ಬಸವರಾಜ ಬಳೂಂಡಗಿ, ಕಾಳಪ್ಪ ತೇಲ್ಕರ್, ದವಲಸಾಬ, ಭೀಮರಾಯ ಭೂಸನೂರ, ಕಲ್ಲಣ್ಣ ಗೋಳಸಾರ ಇದ್ದರು.