ಫೆಬ್ರವರಿ 13 ರಿಂದ ಅರಸೀಕೆರೆಯಲ್ಲಿ ಸಂವಿಧಾನ ಜಾಥಾ: ಎಲ್ಲರೂ ಪಾಲ್ಗೊಳ್ಳುವಂತೆ ದಲಿತ ಒಕ್ಕೂಟದ ವೆಂಕಟೇಶ್‌ ಮನವಿ

| Published : Feb 14 2024, 02:17 AM IST

ಫೆಬ್ರವರಿ 13 ರಿಂದ ಅರಸೀಕೆರೆಯಲ್ಲಿ ಸಂವಿಧಾನ ಜಾಥಾ: ಎಲ್ಲರೂ ಪಾಲ್ಗೊಳ್ಳುವಂತೆ ದಲಿತ ಒಕ್ಕೂಟದ ವೆಂಕಟೇಶ್‌ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಫೆಬ್ರವರಿ 13 ರಿಂದ 21 ರ ವರೆಗೆ ಅರಸೀಕೆರೆಯಲ್ಲಿ ನಡೆಯುವ ಸಂವಿಧಾನ ಜಾಗೃತಿ ಜಾಥಾದಲ್ಲಿ ದಲಿತ ಸಮಾಜ ಬಂಧುಗಳು ಸೇರಿದಂತೆ ಪ್ರತಿಯೊಬ್ಬರು ಪಾಲ್ಗೊಳ್ಳುವ ಮೂಲಕ ಸಂವಿಧಾನವನ್ನು ಅರಿತುಕೊಳ್ಳಬೇಕು ಎಂದು ತಾಲೂಕು ದಲಿತಪರ ಒಕ್ಕೂಟಗಳ ಅಧ್ಯಕ್ಷ ವೆಂಕಟೇಶ್ ಮನವಿ ಮಾಡಿದರು.

ತಾಲೂಕು ದಲಿತಪರ ಒಕ್ಕೂಟಗಳ ಅಧ್ಯಕ್ಷ ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕು ಆಡಳಿತ ಹಾಗೂ ದಲಿತ ಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಫೆ.13 ರಿಂದ 21 ರ ವರೆಗೆ ನಡೆಯುವ ಸಂವಿಧಾನ ಜಾಗೃತಿ ಜಾಥಾದಲ್ಲಿ ದಲಿತ ಸಮಾಜ ಬಂಧುಗಳು ಸೇರಿದಂತೆ ಪ್ರತಿಯೊಬ್ಬರು ಪಾಲ್ಗೊಳ್ಳುವ ಮೂಲಕ ಸಂವಿಧಾನವನ್ನು ಅರಿತುಕೊಳ್ಳಬೇಕು ಎಂದು ತಾಲೂಕು ದಲಿತಪರ ಒಕ್ಕೂಟಗಳ ಅಧ್ಯಕ್ಷ ವೆಂಕಟೇಶ್ ಮನವಿ ಮಾಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಗರ ಸಭೆ ಸೇರಿದಂತೆ ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯಕ್ರಮ ಆಯೋಜಿಸುವ ಮೂಲಕ ಸಾರ್ವಜನಿಕರಲ್ಲಿ ಸಂವಿಧಾನದ ಜಾಗೃತಿ ಮೂಡಿಸುವಂತೆ ಈಗಾಗಲೇ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಹಾಸನದ ಮೂಲಕ ಬುಧವಾರ ಮಧ್ಯಾಹ್ನ ಎರಡು ಗಂಟೆಗೆ ನಗರವನ್ನು ಪ್ರವೇಶಿಸಲಿರುವ ಜಾಗೃತಿ ಜಾಥಾವನ್ನು ನಗರದ ಅಯ್ಯಪ್ಪ ಸ್ವಾಮಿ ವೃತ್ತದ ಬಳಿ ತಾಲೂಕು ಆಡಳಿತ ಸ್ವಾಗತಿಸಲಿದ್ದು ಸಮಾಜದ ಬಂಧುಗಳು ಸೇರಿದಂತೆ ಕನ್ನಡಪರ ಹಾಗೂ ರೈತಪರ ಸಂಘಟನೆಗಳು ಮತ್ತು ಪ್ರಗತಿಪರ ಸಂಘಟನೆಯ ಪದಾಧಿಕಾರಿಗಳು, ರಾಜಕೀಯ ಪಕ್ಷಗಳ ಮುಖಂಡರು ಪಾಲ್ಗೊಳ್ಳುವ ಮೂಲಕ ಸಾರ್ವಜನಿಕರಲ್ಲಿ ಸಂವಿಧಾನದ ಅರಿವು ಜಾಗೃತಿ ಮೂಡಿಸಲು ಮುಂದಾಗಬೇಕು ಎಂದು ಕರೆ ನೀಡಿದರು

ಸಂಜೆ ನಗರದ ಪ್ರವಾಸಿ ಮಂದಿರದ ಮುಂಭಾಗವಿರುವ ಸರ್ಕಾರಿ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಸಮಾರಂಭ ಆಯೋಜಿಸಿದ್ದು ಸಮಾರಂಭದಲ್ಲಿ ಪಾಲ್ಗೊಳ್ಳುವ ತಾಲೂಕು ದಂಡಾಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು ಹಾಗೂ ಪ್ರಮುಖರು ಸಂವಿಧಾನದ ಕುರಿತು ಅರಿವು ಮೂಡಿಸಲಿದ್ದು ಇದರ ಪ್ರಯೋಜನವನ್ನು ತಾಲೂಕಿನ ಜನತೆ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಸಭಾ ಕಾರ್ಯಕ್ರಮದ ಬಳಿಕ ಸಂವಿಧಾನ ಜಾಗೃತಿ ಜಾಥಾವು ಮುಂದಿನ ಒಂದು ವಾರಗಳ ಕಾಲ ತಾಲೂಕಿನ ಅತ್ಯಂತ ಸಂಚರಿಸಲಿದೆ ಎಂದು ಮಾಹಿತಿ ನೀಡಿದರು.ದಲಿತಪರ ಒಕ್ಕೂಟಗಳ ಅಧ್ಯಕ್ಷ ವೆಂಕಟೇಶ್.