ಸಾರಾಂಶ
ಬಹುಮುಖ್ಯವಾಗಿ ಹಿಂದಿನ ಸರ್ಕಾರಗಳು ಕೂಡ ಸಂವಿಧಾನದ ಮಹತ್ವದ ಬಗ್ಗೆ ಪ್ರಚಾರ ಪಡಿಸಲಿಲ್ಲ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯರ ನೇತೃತ್ವದ ಕರ್ನಾಟಕ ಸರ್ಕಾರ ಸಂವಿಧಾನದ ಬಗ್ಗೆ ಜನಜಾಗೃತಿ ಮೂಡಿಸಲು ರಾಜ್ಯಾದ್ಯಂತ ಜಾಥಾ ನಡೆಸುತ್ತಿರುವುದನ್ನು ದಲಿತ ಸಂಘರ್ಷ ಸಮಿತಿ ಕರ್ನಾಟಕ ರಾಜ್ಯ ಸಮಿತಿ ಸ್ವಾಗತಿಸುತ್ತಿದೆ.
ಸರ್ಕಾರಕ್ಕೆ ಡಿಎಸ್‌ಎಸ್ ನ ಮಂಜುನಾಥ್ ಅಣ್ಣಯ್ಯ ಅಭಿನಂದನೆ
ಕನ್ನಡಪ್ರಭ ವಾರ್ತೆ ಹೊಸಕೋಟೆಜನವರಿ 26 ರಿಂದ ಫೆಬ್ರವರಿ 23ರವರೆಗೆ ರಾಜ್ಯಾದ್ಯಂತ ಸಂವಿಧಾನ ಜಾಗೃತಿ ಜಾಥಾವನ್ನು ಆಯೋಜಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರ್ಯವನ್ನು ದಸಂಸ ಕರ್ನಾಟಕ ಬೆಂಗಳೂರು ವಿಭಾಗೀಯ ಸಂಚಾಲಕ ಮಂಜುನಾಥ್ ಅಣ್ಣಯ್ಯ ಅಭಿನಂದಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನ ಜಾರಿಗೆ ಬಂದು 75 ವರ್ಷಗಳ ಸುವರ್ಣ ಮಹೋತ್ಸವ ಆಚರಿಸುತ್ತಿದ್ದೇವೆ. ಆದರೆ ಸಂವಿಧಾನದಲ್ಲಿರುವ ಎಲ್ಲಾ ಅಂಶಗಳು ದೇಶದ ಬಹುಭಾಗದ ಜನರಿಗೆ ಪರಿಚಯ ಇರುವುದಿಲ್ಲ. ಬಹುಮುಖ್ಯವಾಗಿ ಹಿಂದಿನ ಸರ್ಕಾರಗಳು ಕೂಡ ಸಂವಿಧಾನದ ಮಹತ್ವದ ಬಗ್ಗೆ ಪ್ರಚಾರ ಪಡಿಸಲಿಲ್ಲ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯರ ನೇತೃತ್ವದ ಕರ್ನಾಟಕ ಸರ್ಕಾರ ಸಂವಿಧಾನದ ಬಗ್ಗೆ ಜನಜಾಗೃತಿ ಮೂಡಿಸಲು ರಾಜ್ಯಾದ್ಯಂತ ಜಾಥಾ ನಡೆಸುತ್ತಿರುವುದನ್ನು ದಲಿತ ಸಂಘರ್ಷ ಸಮಿತಿ ಕರ್ನಾಟಕ ರಾಜ್ಯ ಸಮಿತಿ ಸ್ವಾಗತಿಸುತ್ತಿದೆ ಎಂದರು.ಕಾಯಕ ಜೀವಿಗಳು ದಲಿತ, ಹಿಂದುಳಿದ, ಅಲ್ಪಸಂಖ್ಯಾತರು ಹಾಗೂ ಮಹಿಳೆಯರನ್ನೊಳಗೊಂಡಂತೆ ಎಲ್ಲ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ದುರ್ಬಲ ಜನರ, ಸಮುದಾಯದ ಪಾಲಿಗೆ ಸಂವಿಧಾನದ ಆಶಯಗಳು ಇನ್ನು ಅಪೂರ್ಣವಾಗಿವೆ. ಯುವಜನತೆಯ ದಿಕ್ಕು ತಪ್ಪಿಸುವ ಪ್ರಯತ್ನ ಇಂದು ವ್ಯವಸ್ಥಿತವಾಗಿ ನಡೆಯುತ್ತಿದೆ. ನಮ್ಮನ್ನು ಮುನ್ನಡೆಸವ ಸಂವಿಧಾನವನ್ನು ನಾವು ಕಾಪಾಡಿಕೊಳ್ಳಲು ಜಾಗೃತರಾಗಬೇಕಾದ ಸಮಯ ಇದಾಗಿದೆ. 26 ಜನವರಿ ೨೦೨೪ ರಿಂದ ಒಂದು ತಿಂಗಳ ಕಾಲ ನಡೆಯುವ ಸಂವಿಧಾನ ಜಾಗೃತಿ ಜಾಥಾದಲ್ಲಿ ಪ್ರತಿಯೊಬ್ಬ ನಾಗರಿಕರೂ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ದಲಿತ ಸಂಘರ್ಷ ಸಮಿತಿ ಕರ್ನಾಟಕದ ರಾಜ್ಯ ಸಂಘಟನಾ ಸಂಚಾಲಕ ಬೆನ್ನಿಗನಹಳ್ಳಿ ರಾಮಚಂದ್ರ ವಿಭಾಗೀಯ ಸಂಚಾಲಕ ಮಂಜುನಾಥ ಅಣ್ಣಯ್ಯ, ರಾಜ್ಯ ಸಂಚಾಲಕ ಅಣ್ಣಯ್ಯ, ಬೆಂಗ್ರಾ ಜಿಲ್ಲಾ ಸಂಚಾಲಕ ಲೋಕೇಶ್, ನಾರಾಯಣಸ್ವಾಮಿ, ತಾಲೂಕು ಸಂಚಾಲಕ ಎಸ್ ನಾರಾಯಣಸ್ವಾಮಿ ಹಾಜರಿದ್ದರು.---------
ಮಂಜುನಾಥ್ ಅಣ್ಣಯ್ಯ ಭಾವಚಿತ್ರ.;Resize=(128,128))
;Resize=(128,128))
;Resize=(128,128))
;Resize=(128,128))