ಸಾರಾಂಶ
ಕನ್ನಡಪ್ರಭ ವಾರ್ತೆ ನಾಲತವಾಡ ಸಂವಿಧಾನದ ಪ್ರಾಮುಖ್ಯತೆಯನ್ನು ಪ್ರತಿಯೊಬ್ಬ ನಾಗರಿಕರೂ ಅವಲೋಕಿಸಬೇಕಾಗಿದೆ. ದೇಶದಲ್ಲಿ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಬದಲಾವಣೆಯ ನಡುವೆ ಸಂವಿಧಾನವು ನಮ್ಮ ಮಾರ್ಗದರ್ಶಿಯಾಗುತ್ತದೆ ಎಂದು ಡಿಎಸ್‌ಎಸ್ ಮುಖಂಡ ಸಿದ್ದಪ್ಪ ಕಟ್ಟಿಮನಿ ಹೇಳಿದರು.
ಕನ್ನಡಪ್ರಭ ವಾರ್ತೆ ನಾಲತವಾಡ
ಸಂವಿಧಾನದ ಪ್ರಾಮುಖ್ಯತೆಯನ್ನು ಪ್ರತಿಯೊಬ್ಬ ನಾಗರಿಕರೂ ಅವಲೋಕಿಸಬೇಕಾಗಿದೆ. ದೇಶದಲ್ಲಿ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಬದಲಾವಣೆಯ ನಡುವೆ ಸಂವಿಧಾನವು ನಮ್ಮ ಮಾರ್ಗದರ್ಶಿಯಾಗುತ್ತದೆ ಎಂದು ಡಿಎಸ್‌ಎಸ್ ಮುಖಂಡ ಸಿದ್ದಪ್ಪ ಕಟ್ಟಿಮನಿ ಹೇಳಿದರು.ಪಟ್ಟಣದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳಿಂದ ಸಂವಿಧಾನ ದಿನದ ಪ್ರಯುಕ್ತ ಹಮ್ಮಿಕೊಂಡ ಜಾಗೃತಿ ಜಾಥಾದಲ್ಲಿ ಅವರು ಮಾತನಾಡಿದರು. ಭಾರತದ ಸಂವಿಧಾನವು ವಿಶ್ವದ ಅತ್ಯಂತ ವಿಶಿಷ್ಟ ಮತ್ತು ವಿಸ್ತೃತ ಸಂವಿಧಾನಗಳಲ್ಲಿ ಒಂದಾಗಿದ್ದು, ಭಾರತೀಯ ಪ್ರಜಾಪ್ರಭುತ್ವವು ಜನರಿಂದ ಜನರಿಗೆ ಆಡಳಿತ ಎಂಬ ಮೌಲ್ಯವನ್ನು ಸಾರುತ್ತದೆ. ಪ್ರತಿವರ್ಷ ನ. 26ರಂದು ಸಂವಿಧಾನ ದಿನವನ್ನು ಆಚರಿಸುತ್ತದೆ. ಈ ದಿನ ನಮ್ಮ ಸಂವಿಧಾನ ಯಾವ ರೀತಿಯಲ್ಲಿ ದೇಶವನ್ನು ಪ್ರಜಾಪ್ರಭುತ್ವದ ಹಾದಿಯಲ್ಲಿ ಮುನ್ನಡೆಸುತ್ತಿದೆ ಎಂಬುದನ್ನು ನೆನಪಿಸಲು ವಿಶೇಷ ಮಹತ್ವವಿದೆ. ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ 389 ಸದಸ್ಯರು 2 ವರ್ಷ 11 ತಿಂಗಳು ಮತ್ತು 18 ದಿನಗಳಲ್ಲಿ ಇದನ್ನು ರಚಿಸಿದರು. ಇದರಲ್ಲಿ ಪ್ರಜಾಪ್ರಭುತ್ವ, ಧರ್ಮ ನಿರಪೇಕ್ಷತೆ ಮತ್ತು ಸಮಾನತೆ ಆಧಾರಿತ ಆಯ್ಕೆಗಳು ಸ್ಪಷ್ಟವಾಗಿವೆ. ಪ್ರತಿಯೊಬ್ಬ ನಾಗರಿಕನಿಗೂ ತಮ್ಮ ಕರ್ತವ್ಯ ಮತ್ತು ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಅವಕಾಶವಾಗಿದೆ. ದೇಶದ ಪ್ರಗತಿಗೆ ಸಂವಿಧಾನವು ಮಾರ್ಗದರ್ಶಕ ಪ್ರತಿ ಎಂದರು.ಈ ವೇಳೆ ಡಿಎಸ್‌ಎಸ್ ಮುಖಂಡರಾದ ಹಣಮಂತ ಚಲವಾದಿ, ಮಂಜುನಾಥ ಕಟ್ಟಿಮನಿ, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕರಾದ ಅಮರಯ್ಯ ಹಿರೇಮಠ, ಜಾಫರ ಚೌಧ್ರಿ, ನಿಲಯ ಪಾಲಕ ಜಿ.ಕೆ.ಭಜಂತ್ರಿ, ದೈಹಿಕ ಶಿಕ್ಷಕ ಎಸ್.ಪಿ.ಹಂಡರಗಲ್, ಕಿರಣ ಜಾದವ, ಎಸ್.ಐ.ಸಜ್ಜನ, ಎಸ್.ಎಸ್.ಲಮಾಣಿ, ಎಸ್.ಐ.ಜೀವಣಗಿ ಇದ್ದರು.