ಸಾರಾಂಶ
ಸಂವಿಧಾನ ಸಮಿತಿಯು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ವಿಶ್ವದ ಬಹುತೇಕ ಸಂವಿಧಾನಗಳ ಅಧ್ಯಯನ ಮಾಡಿ ಲಿಖಿತ ಸಂವಿಧಾನ ಕೊಟ್ಟು ಅಪ್ಪಿಕೊಂಡ ದಿನವೇ ಭಾರತದ ಗಣರಾಜ್ಯೋತ್ಸವ. ಇಂದು ನಾವು ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದೇವೆ. ಸಂವಿಧಾನವು ಸಾಮಾನ್ಯ ಪ್ರಜೆಯಿಂದ ರಾಷ್ಟ್ರಪತಿ ಯವರೆಗೆ ನೀತಿ ನಿರೂಪಣೆಗಳ ತಿಳಿಸುವಂತಹ ಒಂದು ಮಹಾನ್ ಪವಿತ್ರ ಗ್ರಂಥ.
ಕನ್ನಡಪ್ರಭ ವಾರ್ತೆ ದಾವಣಗೆರೆ
ವಿಶ್ವದಲ್ಲಿ ಹಲವು ದೇಶಗಳು ತನ್ನದೇ ಆದ ಸಂವಿಧಾನಗಳ ಹೊಂದಿವೆ. ಆದರೆ ವಿಶ್ವದ ಎಲ್ಲಾ ದೇಶಗಳ ಸಂವಿಧಾನಕ್ಕಿಂತಲೂ ಭಾರತದ ಸಂವಿಧಾನ ಸರ್ವ ಶ್ರೇಷ್ಠವಾದ್ದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ವಾಮದೇವಪ್ಪ ತಿಳಿಸಿದರು.ನಗರದ ಕುವೆಂಪು ಕನ್ನಡ ಭವನದ ಆವರಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ವಿನೂತನ ಮಹಿಳಾ ಸಮಾಜದಿಂದ ಹಮ್ಮಿಕೊಂಡ 75 ಭಾರತ ಗಣರಾಜ್ಯೋತ್ಸವದ ಅಮೃತ ಮಹೋತ್ಸವ ವರ್ಷದ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂವಿಧಾನ ಸಮಿತಿಯು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ವಿಶ್ವದ ಬಹುತೇಕ ಸಂವಿಧಾನಗಳ ಅಧ್ಯಯನ ಮಾಡಿ ಲಿಖಿತ ಸಂವಿಧಾನ ಕೊಟ್ಟು ಅಪ್ಪಿಕೊಂಡ ದಿನವೇ ಭಾರತದ ಗಣರಾಜ್ಯೋತ್ಸವ. ಇಂದು ನಾವು ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದೇವೆ. ಸಂವಿಧಾನವು ಸಾಮಾನ್ಯ ಪ್ರಜೆಯಿಂದ ರಾಷ್ಟ್ರಪತಿ ಯವರೆಗೆ ನೀತಿ ನಿರೂಪಣೆಗಳ ತಿಳಿಸುವಂತಹ ಒಂದು ಮಹಾನ್ ಪವಿತ್ರ ಗ್ರಂಥ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಬಿ.ಜೆ.ಸಿದ್ದಲಿಂಗಪ್ಪ, ವಿನೂತನ ಮಹಿಳಾ ಸಮಾಜದ ಅಧ್ಯಕ್ಷೆ ರೇಖಾ ಓಂಕಾರಪ್ಪ, ಭಾರತ ಸೇವಾದಳದ ಕಾರ್ಯಕರ್ತ ಕೆ.ಪಿ.ಬಸವರಾಜಪ್ಪ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಬಿ.ದಿಳ್ಯಪ್ಪ, ರೇವಣಸಿದ್ದಪ್ಪ ಅಂಗಡಿ, ಸಂಘಟನಾ ಕಾರ್ಯದರ್ಶಿ ಜಿಗಳಿ ಪ್ರಕಾಶ್, ಸಹ ಕಾರ್ಯದರ್ಶಿ ಕೆ.ಎಸ್.ವಿರೇಶ್ ಪ್ರಸಾದ್, ಸಾಹಿತಿ ಸತ್ಯಭಾಮ, ವಿನೂತನ ಮಹಿಳಾ ಸಮಾಜದ ಪದಾಧಿಕಾರಿಗಳು, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.ಲೀಲಾ ಕುಬೇರಪ್ಪ ಮತ್ತು ಸಂಗಡಿಗರು ಪ್ರಾರ್ಥಿಸಿದರೆ, ಚೇತನ ಮಂಜುನಾಥ ಸ್ವಾಗತಿಸಿದರು, ರೂಪ ಶಂಕರಮೂರ್ತಿ ವಂದಿಸಿದರು. ಶೈಲಜಾ ತಿಮ್ಮೇಶ್ ಕಾರ್ಯಕ್ರಮ ನಿರೂಪಿಸಿದರು.