ಗ್ರಾಹಕರಿಗೆ ಕ್ರೆಡಿಟ್ ಕೋ ಆಪರೇಟಿವ್ ಮೇಲೆ ವಿಶ್ವಾಸ ಅಪಾರ: ಶಾಸಕ ಪಾಟೀಲ

| Published : Jan 05 2024, 01:45 AM IST

ಗ್ರಾಹಕರಿಗೆ ಕ್ರೆಡಿಟ್ ಕೋ ಆಪರೇಟಿವ್ ಮೇಲೆ ವಿಶ್ವಾಸ ಅಪಾರ: ಶಾಸಕ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಹಕರಿಗೆ ಕ್ರೆಡಿಟ್ ಕೋ ಆಪರೇಟಿವ್ ಮೇಲೆ ವಿಶ್ವಾಸ ಅಪಾರವಾದದ್ದು, ಠೇವಣಿಗಳ ಸದ್ಬಳಕೆಯಾದಾಗ ಲಾಭಾಂಶ ಹಂಚಿಕೆ ಸರಳವಾಗಲಿದ್ದು, ಸೊಸೈಟಿ ನಿರ್ದೇಶಕರು ಹೆಚ್ಚಿನ ಡೆಪಾಸಿಟ್ ಮಾಡಲು ಮುಂದಾಗಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಗಜೇಂದ್ರಗಡ: ಗ್ರಾಹಕರಿಗೆ ಕ್ರೆಡಿಟ್ ಕೋ ಆಪರೇಟಿವ್ ಮೇಲೆ ವಿಶ್ವಾಸ ಅಪಾರವಾದದ್ದು, ಠೇವಣಿಗಳ ಸದ್ಬಳಕೆಯಾದಾಗ ಲಾಭಾಂಶ ಹಂಚಿಕೆ ಸರಳವಾಗಲಿದ್ದು, ಸೊಸೈಟಿ ನಿರ್ದೇಶಕರು ಹೆಚ್ಚಿನ ಡೆಪಾಸಿಟ್ ಮಾಡಲು ಮುಂದಾಗಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.ಪಟ್ಟಣದ ಅಕ್ಷಯ ಗ್ಯಾಂಡ್ ಹೋಟೆಲ್‌ನಲ್ಲಿ ಸ್ಥಳೀಯ ಶಿವಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಪ್ರಥಮ ವಾರ್ಷಿಕೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳ ಜನರಿಗೆ ಸಣ್ಣ ಮತ್ತು ಅತಿ ಸಣ್ಣ ವ್ಯಾಪಾರ ಮಾಡುವ ವರ್ತಕರಿಗೆ ಹಾಗೂ ವ್ಯಾಪಾರಸ್ಥರಿಗೆ ನೆರವಾಗುತ್ತಿರುವುದು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಹಾಗೂ ಸಹಕಾರಿ ಸಂಘಗಳು. ಜನರಿಗೆ ಕೆಲ ದಿನಗಳಲ್ಲಿ ಸಾಲದ ಸೌಲಭ್ಯ ಸಿಗುವುದರಿಂದ ಸೊಸೈಟಿಯತ್ತ ಮುಖ ಮಾಡುತ್ತಾರೆ. ಹೀಗಾಗಿ ಬ್ಯಾಂಕಿನ ನಿರ್ದೇಶಕರು ಗ್ರಾಹಕರಿಗೆ ನಿಯಮಗಳನ್ನು ತಿಳಿಸುವುದರ ಜತೆಗೆ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ಸಿಬ್ಬಂದಿ ಮುಂದಾಗಬೇಕು. ಅಲ್ಲದೆ ಸೊಸೈಟಿ ನಿರ್ದೇಶಕರು

ಹಣವನ್ನು ಡೆಪಾಸಿಟ್ ಮಾಡುವುದರ ಜತೆಗೆ ಮಾಡಿಸಲು ಮುಂದಾಗಬೇಕು ಅಂದಾಗ ಸೊಸೈಟಿ ಕಾರ್ಯ ವ್ಯಾಪ್ತಿ ಹೆಚ್ಚಾಗುವುದರ ಜತೆಗೆ ದಶಮಾನೋತ್ಸವದಿಂದ, ಶತಮಾನೋತ್ಸವದ ಆಚರಣೆಗಳನ್ನು ನಡೆಸಬಹುದಾಗಿದೆ ಎಂದರು.

ಶಿವಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಬಸವರಾಜ ಹೂಗಾರ, ತಾಪಂ ಮಾಜಿ ಉಪಾಧ್ಯಕ್ಷ ಶಶಿಧರ ಹೂಗಾರ, ಸುಜಾತಾ ಅಪ್ಪಣ್ಣವರ, ಕಳಕಪ್ಪ ಅಂಗಡಿ, ಶರಣಪ್ಪ ಯಲಿಗಾರ, ರಾಜೇಶ್ವರಿ ಕಾಲವಾಡಮಠ, ಶಿವಕುಮಾರ ಅಂಗಡಿ, ದೀಪಾ ಗೌಡರ, ಗವಿಸಿದ್ದನಗೌಡ ಪಾಟೀಲ, ಮಲ್ಲಿಕಾರ್ಜುನ ಕುಂದಗೋಳ, ರಾಘವೇಂದ್ರ ನಿರಂಜನ, ಶರಣಬಸಪ್ಪ ಕೋರಿ ಸೇರಿ ಇತರರು ಇದ್ದರು.