- ಬಿಲ್ ಇದ್ದರೆ ಕೇಸ್ ಹೂಡಬಹುದು: ಸಲಹೆ
- ಜಾಗೋ ಗ್ರಾಹಕ---
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಗ್ರಾಹಕ ಎಚ್ಚರದಿಂದಿದ್ದರೆ, ವಸ್ತುಗಳನ್ನು ಖರೀದಿಸುವಾಗಿ ಮೋಸ ತಪ್ಪಲಿದೆ ಎಂದು ಪ್ರಧಾನಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಎಂ.ಟಿ. ದೀಪು ಸಲಹೆ ನೀಡಿದರು.
ವಿಶ್ವ ಗ್ರಾಹಕರ ದಿನ ಹಾಗೂ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿ ದಿನ ಯಾವುದಾದರೂ ವಸ್ತು ಖರೀದಿಸುವ ಮೂಲಕ ಜನರು ಗ್ರಾಹಕರಾಗುತ್ತಿದ್ದಾರೆ. ವಸ್ತು ಖರೀದಿಸುವ ಮುನ್ನ ವಸ್ತುವಿನ ಬೆಲೆ, ಅವಧಿ, ತಯಾರಿಕೆಯಲ್ಲಿ ಬಳಸುವ ಪದಾರ್ಥಗಳ ಮಾಹಿತಿ ಪಡೆಯಬೇಕು ಎಂದರು.
ಯಾವುದೇ ವಸ್ತು ಪಡೆಯುವಾಗ ದೋಷಪೂರಿತ ಸರಕು ನೀಡಿದರೆ ಗ್ರಾಹಕರು ಬಿಲ್ ಪಡೆಯಬೇಕು. ರಸೀದಿ ಇದ್ದರೆ ಕಳಪೆ ಗುಣಮಟ್ಟದ ವಸ್ತು ಸಿಕ್ಕರೆ, ಜಿಲ್ಲಾ ಮತ್ತು ರಾಜ್ಯ ಮಟ್ಟದ ಗ್ರಾಹಕರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಪರಿಹಾರ ಪಡೆಯಬಹುದಾಗಿದೆ ಎಂದರು.ತಹಸೀಲ್ದಾರ್ ಎಂ.ಎಸ್. ತನ್ಮಯ್, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಎಚ್.ಎ .ಷಣ್ಮುಗಂ, ವಕೀಲರ ಸಂಘದ ಅಧ್ಯಕ್ಷ ಟಿ.ಎಸ್. ವೆಂಕಟೇಶ್, ಕಾರ್ಯದರ್ಶಿ ಜವರಾಜು, ಹಿರಿಯ ವಕೀಲ ಜಿ.ಎಸ್.ಮಧುಸೂದನ್, ವಿಜಯ ಗ್ಯಾಸ್ ಮಾಲೀಕ ದೊರೆಸ್ವಾಮಿ, ಆಹಾರ ಶಿರಸ್ತೇದಾರ್ ಅರವಿಂದ, ಆಹಾರ ನಿರೀಕ್ಷಕಿ ಪೂರ್ಣಿಮ ಸೇರಿದಂತೆ ಹಲವರಿದ್ದರು.---