ಚಿಕ್ಕಮಗಳೂರುಆಹಾರ ಪದ್ಧತಿ ಪ್ರಕೃತಿ ಜೊತೆಗೆ ಹೊಂದಿಕೊಂಡಿದ್ದು, ನಿರೋಗಿಗಳಾಗಬೇಕಾದರೆ ಪ್ರಕೃತಿ ಜೊತೆಗಿನ ಸಂಬಂಧವನ್ನು ಮತ್ತೆ ಪುನರ್ ಸ್ಥಾಪಿಸುವ ಅಗತ್ಯ ಇದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.
- ಸಿರಿ ಧಾನ್ಯ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಆಹಾರ ಪದ್ಧತಿ ಪ್ರಕೃತಿ ಜೊತೆಗೆ ಹೊಂದಿಕೊಂಡಿದ್ದು, ನಿರೋಗಿಗಳಾಗಬೇಕಾದರೆ ಪ್ರಕೃತಿ ಜೊತೆಗಿನ ಸಂಬಂಧವನ್ನು ಮತ್ತೆ ಪುನರ್ ಸ್ಥಾಪಿಸುವ ಅಗತ್ಯ ಇದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.ಜಿಲ್ಲಾಡಳಿತ, ಜಿಪಂ, ಕೃಷಿ ಇಲಾಖೆ, ಕೃಷಿಕ ಸಮಾಜ, ಕರ್ನಾಟಕ ರಾಜ್ಯ ರೈತ ಸಂಘ, ಲಯನ್ಸ್ ರೋಟರಿ, ಜೆಸಿಐ, ಕರ್ನಾಟಕ ಗೊಬ್ಬರ ಮತ್ತು ಕೃಷಿ ಪರಿಕರ ಮಾರಾಟ ಸಂಘದ ಸಂಯುಕ್ತ ಆಶ್ರಯದಲ್ಲಿ ತಾಲೂಕು ಕಚೇರಿಯಿಂದ ಶನಿವಾರ ಏರ್ಪಡಿಸಲಾಗಿದ್ದ ಸಿರಿಧಾನ್ಯ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಪೂರ್ವಿಕರು ವಿಜ್ಞಾನದ ಜೊತೆಗೆ ತಮ್ಮ ಬದುಕನ್ನು ಕಟ್ಟಿಕೊಂಡಿದ್ದರು. ಆ ಕಾರಣಕ್ಕೆ ರಾಮಧಾನ್ಯ ಚರಿತೆಯಲ್ಲಿ ರಾಗಿ ಮತ್ತು ಅಕ್ಕಿ ನಡುವಿನ ಸಂಬಂಧವನ್ನು ವಿವರಿಸಲಾಗಿದೆ ಎಂದರು.ಅಕ್ಕಿ ಮತ್ತು ರಾಗಿ ನಡುವೆ ಸ್ಪರ್ಧೆ ಪ್ರಾರಂಭವಾದಾಗ ರಾಮ ಈ ಎರಡನ್ನು ಆರು ತಿಂಗಳು ಬಂಧಿಸಿ ಜೈಲಿನಲ್ಲಿಡಬೇಕೆಂದು ಆದೇಶಿಸಿದರು. ಆರು ತಿಂಗಳ ಬಳಿಕ ಪರಿಶೀಲನೆ ನಡೆಸಿದಾಗ ಅಕ್ಕಿ ಹುಳ ತಿಂದು ಹಾಳಾಗಿದ್ದರೆ ರಾಗಿ ಹಾಗೆಯೇ ಇದ್ದು, ಸ್ವಾಭಾವಿಕವಾಗಿ ಜಯ ಗಳಿಸಿತು ಎಂದು ರಾಗಿ ಮಹತ್ವ ಎಂದು ವಿವರಿಸಿದರು.ಜನಸಾಮಾನ್ಯರಿಗೆ ಕಥೆಗಳ ಮೂಲಕ ಸಿರಿಧಾನ್ಯಗಳ ಬಳಕೆ ಬಗ್ಗೆ ಅರ್ಥವಾಗುವ ರೀತಿಯಲ್ಲಿ ಹೇಳಿದ್ದಾರೆ. ಸಜ್ಜೆ, ನವಣೆ ಮುಂತಾದವುಗಳು ಈಗ ಕಣ್ಮರೆಯಾಗಿದ್ದು, ಕೇಂದ್ರಸರ್ಕಾರ ಸಿರಿಧಾನ್ಯ ಬೆಳೆಗೆ ರೈತರಿಗೆ ಉತ್ತೇಜನ ನೀಡಲು ಹಲವಾರು ಯೋಜನೆಗಳನ್ನು ರೂಪಿಸಿದ್ದು, ಈ ಸಿರಿಧಾನ್ಯಗಳು ಹಿಂದೆ ಪೌಷ್ಟಿಕ ಆಹಾರ ಪದ್ಧತಿಗಳಾಗಿದ್ದವು ಎಂದು ಹೇಳಿದರು.ಆಹಾರ ಪದ್ಧತಿಗೆ ಪೂರಕವಾದ ಸಿರಿಧಾನ್ಯ ನಡಿಗೆ ಜಾಗೃತಿ ನಡಿಗೆ ಎಂದು ಭಾವಿಸುತ್ತೇವೆ. ಇದು ಪ್ರತಿಯೊಬ್ಬರ ಮನೆ ಯನ್ನು ತಲುಪಲಿ. ಪ್ರಕೃತಿಯೊಂದಿಗೆ ಹೊಂದಿಕೊಳ್ಳುವ ಕೆಲಸಗಳಾಗಲಿ ಎಂದು ಜಾಥಾಕ್ಕೆ ಶುಭ ಹಾರೈಸಿದರು.ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ಮಾತನಾಡಿ, ಆರೋಗ್ಯಕ್ಕೆ ಪೂರಕವಾದ ಸ್ಥಳೀಯವಾಗಿ ಬೆಳೆಯುವ ಸಿರಿಧಾನ್ಯ ಬಹಳ ಉತ್ತಮವಾಗಿದ್ದು, ಸಾವಿರಾರು ಕಿ.ಮೀ ದೂರದಿಂದ ಆಮದು ಮಾಡಿಕೊಳ್ಳುವುದಕ್ಕಿಂತ ಸ್ಥಳೀಯ ಸಿರಿಧಾನ್ಯ ಬೆಳೆಗೆ ಆದ್ಯತೆ ನೀಡಬೇಕೆಂದು ಮನವಿ ಮಾಡಿದರು.ಸಿರಿಧಾನ್ಯ ಬಳಸಿ ಆರೋಗ್ಯ ವೃದ್ಧಿಸಿಕೊಳ್ಳಿ, ಮುದ್ದೆ ಇಲ್ಲ ಎಂದರೆ ನಿದ್ದೆ ಇಲ್ಲ ಎಂಬಂತಾಗಿದೆ. ಬಹುತೇಕ ನಾಗರಿಕರು ಇತ್ತೀಚಿನ ದಿನಗಳಲ್ಲಿ ಸಿರಿಧಾನ್ಯ ಬಳಕೆ ಪ್ರೋತ್ಸಾಹಿಸಿ ಆದ್ಯತೆ ನೀಡಬೇಕೆಂದು ವಿನಂತಿಸಿದರು.ದೊಡ್ಡ ದೊಡ್ಡ ನಗರಗಳಲ್ಲಿ ಅಕ್ಕಿಯಿಂದ ತಯಾರಾಗುವ ಆಹಾರ ಪದಾರ್ಥಗಳು ಎಲ್ಲೆಡೆ ಸಿಗುತ್ತವೆ. ಆದರೆ, ಸಿರಿಧಾನ್ಯಗಳ ಬಗ್ಗೆ ಪ್ರಾಥಮಿಕ ಹಂತದ ಮಕ್ಕಳಲ್ಲಿಯೇ ಜಾಗೃತಿ ಮೂಡಿಸುವ ಅಗತ್ಯ ಇದೆ ಎಂದರು.ಅಕ್ಕಿ, ಗೋಧಿ ಮಾಡಿಕೊಳ್ಳುತ್ತಿರುವುದರಿಂದ ಸ್ಥಳೀಯವಾಗಿ ಬೆಳೆಯುವ ಸಿರಿಧಾನ್ಯಗಳ ಬಳಕೆ ಕಡಿಮೆಯಾಗುತ್ತಿರುವ ಬಗ್ಗೆ ವಿಷಾಧ ವ್ಯಕ್ತಪಡಿಸಿದ ಅವರು, ಲಾಭ ಕಡಿಮೆ ಇರುವುದರಿಂದ ಸಿರಿಧಾನ್ಯ ಉತ್ಪಾದನೆ ಕಡಿಮೆಯಾಗಿದ್ದು, ಇದಕ್ಕೆ ಕಾರಣ ರೈತರು ಲಾಭದಾಯಕ ಕೃಷಿಯತ್ತ ಮುಖ ಮಾಡುತ್ತಿದ್ದಾರೆಂದು ಹೇಳಿದರು.ಕೃಷಿ ಇಲಾಖೆ ಜಂಟಿ ನಿರ್ದೇಶಕ ತಿರುಮಲೇಶ್ ಮಾತನಾಡಿ, ಸಿರಿಧಾನ್ಯ ಮೇಳ ಭಾನುವಾರ ಎಐಟಿ ಕಾಲೇಜು ಆವರಣದಲ್ಲಿ ಪ್ರಾರಂಭವಾಗಲಿದೆ ಎಂದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಅಧ್ಯಕ್ಷ ಬಿ.ಎಚ್ ಹರೀಶ್, ಅಶೋಕ್ ಕುಮಾರ್, ಕುಮಾರಸ್ವಾಮಿ ಹಾಗೂ ವಿವಿಧ ಸಂಘಟನೆಗಳ ಮುಖಂಡರು, ಕೃಷಿ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.3 ಕೆಸಿಕೆಎಂ 1ಚಿಕ್ಕಮಗಳೂರಿನ ತಾಲೂಕು ಕಚೇರಿಯಿಂದ ಹೊರಟ ಸಿರಿ ಧಾನ್ಯ ನಡಿಗೆಗೆ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಚಾಲನೆ ನೀಡಿದರು. ಕೆಫೆಕ್ ಅಧ್ಯಕ್ಷ ಬಿ.ಎಚ್. ಹರೀಶ್, ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್, ತಿರುಮಲೇಶ್ ಇದ್ದರು.