ಕರ್ನಾಟಕ ರಾಜ್ಯೋತ್ಸವ ನಡೆಸುವ ಸಂಘಟನೆಗಳು ಕ್ರಿಯಾತ್ಮಕವಾಗಿ ನಾಡು-ನುಡಿ, ಸಂಸ್ಕೃತಿಯ ಉಳಿವಿಗಾಗಿ ನಿರಂತರ ಹೋರಾಡಬೇಕು. ನನ್ನ ಕ್ಷೇತ್ರದಲ್ಲಿ ಶಾಸಕನಾಗಿದ್ದಾಗ ಭದ್ರಾ ಮೇಲ್ದಂಡೆ ಯೋಜನೆಯಂತಹ ಹೋರಾಟಕ್ಕೆ ಕನ್ನಡ ಸಂಘಟನೆಗಳು ಸಂಘಟನಾತ್ಮಕವಾಗಿ ಸ್ಪಂದಿಸಿ ಹೋರಾಡಿದ್ದವು ಎಂದು ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಹೇಳಿದ್ದಾರೆ.
- ಕರುನಾಡ ನವನಿರ್ಮಾಣ ವೇದಿಕೆ ನೇತೃತ್ವದ ರಾಜ್ಯೋತ್ಸವದಲ್ಲಿ ಎಸ್.ವಿ.ರಾಮಚಂದ್ರ
- - -ಕನ್ನಡಪ್ರಭ ವಾರ್ತೆ ಜಗಳೂರು
ಕರ್ನಾಟಕ ರಾಜ್ಯೋತ್ಸವ ನಡೆಸುವ ಸಂಘಟನೆಗಳು ಕ್ರಿಯಾತ್ಮಕವಾಗಿ ನಾಡು-ನುಡಿ, ಸಂಸ್ಕೃತಿಯ ಉಳಿವಿಗಾಗಿ ನಿರಂತರ ಹೋರಾಡಬೇಕು. ನನ್ನ ಕ್ಷೇತ್ರದಲ್ಲಿ ಶಾಸಕನಾಗಿದ್ದಾಗ ಭದ್ರಾ ಮೇಲ್ದಂಡೆ ಯೋಜನೆಯಂತಹ ಹೋರಾಟಕ್ಕೆ ಕನ್ನಡ ಸಂಘಟನೆಗಳು ಸಂಘಟನಾತ್ಮಕವಾಗಿ ಸ್ಪಂದಿಸಿ ಹೋರಾಡಿದ್ದವು ಎಂದು ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ, ಕರುನಾಡ ನವನಿರ್ಮಾಣ ವೇದಿಕೆ ವತಿಯಿಂದ ೭೦ನೇ ವರ್ಷದ ಕರ್ನಾಟಕ ರಾಜ್ಯೋತ್ಸವ ಮತ್ತು ದೀನಬಂಧು ಎಜುಕೇಷನ್ ಚಾರಿಟೆಬಲ್ ಟ್ರಸ್ಟ್ ಉದ್ಘಾಟಿಸಿ ಅವರು ಮಾತನಾಡಿದರು.
ಪರಪೀಡಿತ ಜಗಳೂರು ತಾಲೂಕಿಗೆ ಈಗಾಗಲೇ ೫೭ ಕೆರೆ ನೀರು ಹರಿಯುತ್ತಿದೆ. ೨೦೧೭-೧೮ರಲ್ಲಿ ನಾನು ಶಾಸಕ ಆಗಿದ್ದಾಗ ಕರುನಾಡ ನವನಿರ್ಮಾಣ ವೇದಿಕೆ, ಭದ್ರಾ ಮೇಲ್ದಂಡೆ ಯೋಜನೆ ಹೋರಾಟ ಸಮಿತಿ ನಡೆಸಿದ ಹೋರಾಟದಿಂದ ಕ್ಷೇತ್ರಕ್ಕೆ ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ಅನೇಕ ಯೋಜನೆಗಳ ಅನುಷ್ಠಾನ ಸಾಧ್ಯವಾಯಿತು ಎಂದರು.ನಾನು ಶಾಸಕನಾಗಿದ್ದಾಗ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿದೆ. ಆದರೆ, ಕೇಂದ್ರ ಸರ್ಕಾರ ಮಾತ್ರ ಹಣ ನೀಡಿಲ್ಲ. ಭದ್ರಾ ಮೇಲ್ದಂಡೆ ಯೋಜನೆ ಫಲಪ್ರದವಾಗಲು ಎಲ್ಲರ ಸಹಕಾರ ಅಗತ್ಯ. ದೀನಬಂಧು ಎಜುಕೇಶಷನ್ ಟ್ರಸ್ಟ್‌ನಿಂದ ಪ್ರತಿವರ್ಷ ಸರ್ಕಾರಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ. ಅದೇ ರೀತಿ ಎಲ್ಲರೂ ಒಟ್ಟಾಗಿ ಸಾಮಾಜಿಕ್ಕೆ ಅಂಟಿಕೊಂಡಿರುವ ಅಜ್ಞಾನದ ಕೊಳೆ ತೆಗೆಯೋಣ. ಈ ಬಾರಿ ಭದ್ರಾ ಮೇಲ್ದಂಡೆ ಯೋಜನೆ ನೀರಾವರಿ ಹೋರಾಟಗಾರ ಆರ್.ಓಬಳೇಶ್‌ಗೆ ದೀನಬಂಧು ವಾರ್ಷಿಕ ಪ್ರಶಸ್ತಿ ನೀಡುತ್ತಿರುವುದು ಪ್ರಶಸ್ತಿಯ ಮೌಲ್ಯ ಹೆಚ್ಚಿಸಿದೆ ಎಂದು ಹೇಳೀದರು.
ಸಾಹಿತಿ ಎನ್.ಟಿ.ಯರಿಸ್ವಾಮಿ ಅವರು ಕರುನಾಡ ನವನಿರ್ಮಾಣ ವೇದಿಕೆ ಮತ್ತು ಸಂಘಟನೆಗಳು ನಾಡು ನುಡಿ ರಕ್ಷಣೆಗೆ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಟ್ರಸ್ಟ್ ಕಾರ್ಯದರ್ಶಿ ರಘುರಾಮ ರೆಡ್ಡಿ, ಬಿಜೆಪಿ ಮುಖಂಡ ಬಿಸ್ತುವಳ್ಳಿ ಬಾಬು, ಪಪಂ ಸದಸ್ಯ ಪಾಪಲಿಂಗಪ್ಪ, ಗೌರಿಪುರ ಕುಬೇಂದ್ರಪ್ಪ, ಪ್ರೊ.ನಾಗಲಿಂಗಪ್ಪ, ತುಪ್ಪದಹಳ್ಳಿ ಪೂಜಾರ್ ಸಿದ್ದಪ್ಪ ಸೇರಿದಂತೆ ನೂರಾರು ಹೋರಾಟಗಾರರು ಇದ್ದರು.ತಾಯಿ ಭುವನೇಶ್ವರಿ ಮೆರವಣಿಗೆ:
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶಾಸಕ ಬಿ.ದೇವೇಂದ್ರಪ್ಪ ರಾಜ್ಯೋತ್ಸವ ಮೆರವಣಿಗೆಗೆ ಚಾಲನೆ ನೀಡಿದರು. ಕೋಲಾಟ, ಡೊಳ್ಳು ಕುಣಿತ, ಕಂಸಾಳೆ ಸೇರಿದಂತೆ ವಿವಿಧ ಜಾನಪದ ಕಲಾಪ್ರಕಾರಗಳೊಂದಿಗೆ ಪ್ರವಾಸಿ ಮಂದಿರದಿಂದ ತಾಪಂ ಸಭಾಂಗಣದವರೆಗೆ ವಿಜೃಂಭಣೆಯಿಂದ ತಾಯಿ ಭುವನೇಶ್ವರಿ ಮೆರವಣಿಗೆ ಸಾಗಿತು.- - -
(ಬಾಕ್ಸ್) * ದುರ್ಬಲರಿಗೆ ನೆರವು ಕರುನಾಡು ನವ ನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಹಾಗೂ ದೀನ ಬಂಧು ಚಾರಿಟೆಬಲ್ ಅಧ್ಯಕ್ಷ ಎಚ್.ಎಂ.ಹೊಳೆ ಮಹಾಲಿಂಗಪ್ಪ ಮಾತನಾಡಿ, ೨೦೨೨ರಲ್ಲಿ ಸಮಾನ ಮನಸ್ಕರು ಸೇರಿ ಕರುನಾಡ ನವನಿರ್ಮಾಣ ವೇದಿಕೆ ಮೂಲಕ ಸಾಮಾಜಿಕ ಪರಿವರ್ತನೆ ಮತ್ತು ಹೋರಾಟಗಳ ಮೂಲಕ ರಚನಾತ್ಮಕ ಕಾರ್ಯಗಳನ್ನು ಮಾಡುತ್ತಿದ್ದೇವೆ. ಕೆಎಸ್ಆರ್ಟಿಸಿ ಡಿಪೋ ಹೋರಾಟ, ರಸ್ತೆ ವಿಸ್ತರಣೆ, ಭದ್ರಾ ಮೇಲ್ದಂಡೆ ಯೋಜನೆಗಳು ಯಶಸ್ವಿಯಾಗಿವೆ. ದುರ್ಬಲರಿಗೆ ನೆರವಿನ ಹಸ್ತ ಚಾಚಲು ದೀನಬಂಧು ಚಾರಿಟೇಬಲ್ ಟ್ರಸ್ಟ್ ನೆರವಾಗುತ್ತಿದೆ ಎಂದರು.- - -
-೬ಜೆ.ಎಲ್.ಆರ್.ಚಿತ್ರ1:ಜಗಳೂರು ಪಟ್ಟಣದ ತಾಪಂ ಸಭಾಂಗಣದಲ್ಲಿ ಕರುನಾಡ ನವನಿರ್ಮಾಣ ವೇದಿಕೆಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಉದ್ಘಾಟಿಸಿದರು.