ಶ್ರೀನೀಲಕಂಠೇಶ್ವರಗೆ ನಿರಂತರ ರುದ್ರಾಭಿಷೇಕ

| Published : Mar 08 2024, 01:54 AM IST

ಸಾರಾಂಶ

ರಬಕವಿ-ಬನಹಟ್ಟಿ: ತಾಲೂಕಿನ ನಾವಲಗಿ ಗ್ರಾಮದಲ್ಲಿ ಶ್ರೀನೀಲಕಂಠೇಶ್ವರ ದೇವಾಲಯ ಉದ್ಘಾಟನೆ ನಿಮಿತ್ಯ ಗ್ರಾಮದ ಸಕಲ ಸದ್ಭಕ್ತರು ಸತತ ೧೨ ದಿನಗಳ ಕಾಲ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀನೀಲಕಂಠೇಶ್ವರನಿಗೆ ರುದ್ರಾಭಿಷೇಕ ನಡೆಸುತ್ತಿದ್ದಾರೆ. ರುದ್ರಾಭಿಷೇಕ ಪೂಜಾ ಕಾರ್ಯಕ್ರಮವನ್ನು ಬಸಯ್ಯಸ್ವಾಮಿಜಿ, ಸೋಮಯ್ಯಶ್ರೀ, ಜಗದಾಳ ಹಿರೇಮಠದ ಚಿದಾನಂದಶ್ರೀ, ಸೋಮನಾಥ ಶ್ರೀ ನೇತೃತ್ವ ವಹಿಸಿ ಸಂಪನ್ನಗೊಳಿಸಿದರು.

ರಬಕವಿ-ಬನಹಟ್ಟಿ: ತಾಲೂಕಿನ ನಾವಲಗಿ ಗ್ರಾಮದಲ್ಲಿ ಶ್ರೀನೀಲಕಂಠೇಶ್ವರ ದೇವಾಲಯ ಉದ್ಘಾಟನೆ ನಿಮಿತ್ಯ ಗ್ರಾಮದ ಸಕಲ ಸದ್ಭಕ್ತರು ಸತತ ೧೨ ದಿನಗಳ ಕಾಲ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀನೀಲಕಂಠೇಶ್ವರನಿಗೆ ರುದ್ರಾಭಿಷೇಕ ನಡೆಸುತ್ತಿದ್ದಾರೆ. ರುದ್ರಾಭಿಷೇಕ ಪೂಜಾ ಕಾರ್ಯಕ್ರಮವನ್ನು ಬಸಯ್ಯಸ್ವಾಮಿಜಿ, ಸೋಮಯ್ಯಶ್ರೀ, ಜಗದಾಳ ಹಿರೇಮಠದ ಚಿದಾನಂದಶ್ರೀ, ಸೋಮನಾಥ ಶ್ರೀ ನೇತೃತ್ವ ವಹಿಸಿ ಸಂಪನ್ನಗೊಳಿಸಿದರು. ಈ ವೇಳೆ ಹಿರಿಯರಾದ ಸುಭಾಷ ಕಂಪು, ಶಿವನಪ್ಪ ಹಳ್ಳಿ, ಚಿನ್ನಪ್ಪ ಸಂಗಾನಟ್ಟಿ, ಮಂಜುನಾಥ ಕಂಪು, ಪರಮಾನಂದ ಹಳ್ಳಿ, ಮಹಾದೇವ ಮುಂಡಗನೂರ, ಶಂಕರೆಪ್ಪ ಹಳ್ಳಿ, ಕಿರಣ ಸಂಗಾನಟ್ಟಿ, ಶ್ರೀಕಾಂತ ಸಂಗಾನಟ್ಟಿ, ಸಂತೋಷ ಕಾಂತಿ, ಸಂತೋಷ ಖವಾಸಿ ಸೇರಿದಂತೆ ಪ್ರಮುಖರಿದ್ದರು.