ಜಿಲ್ಲೆಯಲ್ಲಿ 315 ಬಿಪಿಎಲ್ ಕಾರ್ಡ್‌ ಎಪಿಎಲ್ ಆಗಿ ಪರಿವರ್ತನೆ

| Published : Nov 19 2024, 12:50 AM IST

ಜಿಲ್ಲೆಯಲ್ಲಿ 315 ಬಿಪಿಎಲ್ ಕಾರ್ಡ್‌ ಎಪಿಎಲ್ ಆಗಿ ಪರಿವರ್ತನೆ
Share this Article
  • FB
  • TW
  • Linkdin
  • Email

ಸಾರಾಂಶ

23578 ಕಾರ್ಡ್‌ಗಳನ್ನು ಪರಿಶೀಲನೆ ನಡೆಸುವಂತೆ ಸರ್ಕಾರದಿಂದ ಸೂಚನೆ ಬಂದಿದ್ದು, ಕಾರ್ಡ್‌ಗಳ ಪರಿಶೀಲನಾ ಕಾರ್ಯ ಪ್ರಗತಿಯಲ್ಲಿದೆ.

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ 23578 ಅನರ್ಹರು ಬಿಪಿಎಲ್ ಕಾರ್ಡ ಹೊಂದಿರುವುದು ಬೆಳಕಿಗೆ ಬಂದಿದ್ದು, ಇದರಲ್ಲಿ ಈಗಾಗಲೆ 315 ಜನರ ಬಿಪಿಎಲ್ ಕಾರ್ಡಗಳನ್ನು ಎಪಿಎಲ್‌ಗೆ ಬದಲಾಯಿಸಲಾಗಿದೆ.

₹1.20 ಲಕ್ಷಗಳಿಗಿಂತ ಹೆಚ್ಚು ಆದಾಯ ಇರುವವರು 21459 ಜನರು ಬಿಪಿಎಲ್ ಕಾರ್ಡ್‌ ಹೊಂದಿದ್ದಾರೆ. ಆದಾಯ ತೆರಿಗೆ ಪಾವತಿಸುವ 2442 ಜನರು ಬಿಪಿಎಲ್ ಕಾರ್ಡ್ ಹೊಂದಿದ್ದರೆ, 45 ರಷ್ಟು ಸರ್ಕಾರಿ ನೌಕರರೂ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಇವರು ಹೊಂದಿರುವ ಕಾರ್ಯಗಳನ್ನು ಪರಿಶೀಲನೆ ನಡೆಸಿ, ಅನರ್ಹರು ಕಂಡುಬಂದಲ್ಲಿ ಅವುಗಳನ್ನು ಎಪಿಎಲ್ ಕಾರ್ಡುಗಳನ್ನಾಗಿ ಪರಿವರ್ತಿಸಲಾಗುತ್ತದೆ.

23578 ಕಾರ್ಡ್‌ಗಳನ್ನು ಪರಿಶೀಲನೆ ನಡೆಸುವಂತೆ ಸರ್ಕಾರದಿಂದ ಸೂಚನೆ ಬಂದಿದ್ದು, ಕಾರ್ಡ್‌ಗಳ ಪರಿಶೀಲನಾ ಕಾರ್ಯ ಪ್ರಗತಿಯಲ್ಲಿದೆ.

ಭೂಮಿ ಹಕ್ಕಿನ ಹೋರಾಟಕ್ಕೆ ಯಶಸ್ಸು ಸಿಗಲಿದೆ: ರವೀಂದ್ರ ನಾಯ್ಕ

ಯಲ್ಲಾಪುರ: ಭೂಮಿ ಹಕ್ಕಿಗಾಗಿ ತೊಡಗಿಸಿಕೊಂಡಿರುವ ಹೋರಾಟವನ್ನು ಗುರುತಿಸಿ ಅಭಿನಂದನೆ, ಸನ್ಮಾನ ನೀಡುವುದರಿಂದ ಹೋರಾಟಕ್ಕೆ ಸ್ಥೈರ್ಯ ಹೆಚ್ಚುತ್ತದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.ನ. ೧೬ರಂದು ಸಂಜೆ ತಾಲೂಕಿನ ಹಾಸಣಗಿ ಗ್ರಾಪಂ ವ್ಯಾಪ್ತಿಯ ಗಜಾನನೋತ್ಸವ ಸಮಿತಿಯ ಸಂಭಾಗಣದಲ್ಲಿ ಬೆಂಗಳೂರು ಚಲೋ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅರಣ್ಯವಾಸಿಗಳಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ನಿರಂತರ ೩೩ ವರ್ಷ ಐತಿಹಾಸಿಕ ಘಟ್ಟ ಯಶಸ್ಸಿನ ಹಾದಿಯಲ್ಲಿ ಹೋರಾಟ ನಡೆದಿದೆ. ದೇಶದ ಪ್ರತಿಯೊಂದು ಹೋರಾಟಕ್ಕೂ ಯಶಸ್ಸು ಸಿಕ್ಕಿರುವ ಇತಿಹಾಸವಿದೆ. ಅದರಂತೆ ೩೩ ವರ್ಷ ನಿರಂತರ ಹೋರಾಟಕ್ಕೂ ಮುಂದಿನ ದಿನಗಳಲ್ಲಿ ಯಶಸ್ಸು ಖಂಡಿತ ಇದೆ ಎಂದರು.

ಸಭೆಯಲ್ಲಿ ಪ್ರಮುಖರಾದ ವಿನೋದ ಸುರೇಶ ತಳೇಕರ್, ಚಂದ್ರು ಪೂಜಾರಿ, ರಘುನಾಥ ಮರಾಠಿ, ಶಂಕರ ಹೆಗಡೆ, ನರಸಿಂಹ ನಾಯ್ಕ, ಕೃಷ್ಣ ನಾಯರ್, ಉಮೇಶ ನಾಯ್ಕ, ನಾರಾಯಣ ಪೂಜಾರಿ ಹೋಟಗೇರಿ, ಜಯ ಬಿಲ್ಲವ, ರಾಮಕೃಷ್ಣ ಬಿಲ್ಲವ ಉಪಸ್ಥಿತರಿದ್ದರು.