ಸಾರ್ವಜನಿಕರು ತಮ್ಮ ಮಕ್ಕಳಿಗೆ ವಾಹನ ಚಲಾವಣೆಗೆ ಅವಕಾಶ ಕೊಡಬೇಡಿ, ಇದು ಕಾನೂನೂ ಅಪರಾಧ
ಕುಷ್ಟಗಿ: ಪಟ್ಟಣದಲ್ಲಿ ಸಂಚಾರ ಸಮಸ್ಯೆ ನಿವಾರಣೆಗೆ ವಿಶೇಷ ಆದ್ಯತೆ ನೀಡಲಾಗುವುದು, ವ್ಯಾಪಾರಸ್ಥರು, ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಸಿಪಿಐ ವಿಶ್ವನಾಥ ಹಿರೇಗೌಡರ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ನಡೆದ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ಸಂಚಾರ ಸಮಸ್ಯೆಯ ನಿವಾರಣೆ ಸೂಕ್ತ ಕ್ರಮಕ್ಕೆ ಮುಂದಾಗುತ್ತಿದ್ದು, ಇದಕ್ಕೆ ವ್ಯಾಪಾರಸ್ಥರು ಸಹಕಾರ ನೀಡಬೇಕು ಎಂದ ಅವರು, ಯಾವುದೆ ಅಂಗಡಿಕಾರರು ಕಾರ್ಮಿಕರ ಕೊರತೆಯ ನೆಪವೊಡ್ಡಿ ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಳ್ಳಬೇಡಿ ಎಂದರು.
ಸಾರ್ವಜನಿಕರು ತಮ್ಮ ಮಕ್ಕಳಿಗೆ ವಾಹನ ಚಲಾವಣೆಗೆ ಅವಕಾಶ ಕೊಡಬೇಡಿ, ಇದು ಕಾನೂನೂ ಅಪರಾಧವಾಗಿದ್ದು ಸೂಕ್ತ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದ ಅವರು, ಇನ್ನೂ ಮುಂದೆ ಪಟ್ಟಣದಲ್ಲಿ ಗಾಂಜಾ ಮಾರಾಟ ಸೇರಿದಂತೆ ಅಕ್ರಮ ಚಟುವಟಿಕೆಗಳಿಗೆ ಅವಕಾಶ ಇರುವದಿಲ್ಲ ಯುವಕರು ಹುಟ್ಟುಹಬ್ಬದ ನೆಪದಲ್ಲಿ ರಸ್ತೆಯಲ್ಲಿ ಕೇಕ್ ಕಟ್ ಮಾಡುವದು ಸಾರ್ವಜನಿಕರಿಗೆ ಅನವಶ್ಯಕವಾಗಿ ತೊಂದರೆ ಕೊಡುವದು, ಅಸಭ್ಯ ವರ್ತನೆ ತೋರುವುದು, ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಚುಡಾಯಿಸುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ನಿರ್ಧಾಕ್ಷೀಣ್ಯ ಕಾನೂನೂ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.ಸಮಾಜದಲ್ಲಿ ಬದಲಾವಣೆ ತರಲು ಅಗತ್ಯ ಸಲಹೆ ಇದ್ದಲ್ಲಿ ಪೊಲೀಸ್ ಠಾಣೆಗೆ ಅಥವಾ ಖುದ್ದು ನನಗೆ ಪೋನ್ ಮಾಡುವಂತೆ ಅಥವಾ ಸಂದೇಶ ಕಳಿಸಿದರೂ ಸಾಕು ನಾನು ಹಾಗೂ ಸಿಬ್ಬಂದಿಗಳು ಕೂಡಲೆ ಕಾರ್ಯೋನ್ಮುಖರಾಗಿ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಿಎಸೈ ಹನಮಂತಪ್ಪ ತಳವಾರ ಸೇರಿದಂತೆ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಪಟ್ಟಣದ ವ್ಯಾಪಾರಸ್ಥರು ನಾಗರಿಕರು ಇದ್ದರು.