ಅಭಿವೃದ್ಧಿಗೆ ಅಧಿಕಾರಿ-ನಾಗರಿಕರ ಸಹಕಾರ ಮುಖ್ಯ

| Published : Jul 30 2025, 01:30 AM IST

ಅಭಿವೃದ್ಧಿಗೆ ಅಧಿಕಾರಿ-ನಾಗರಿಕರ ಸಹಕಾರ ಮುಖ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ತಾಳಿಕೋಟೆ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿಯನ್ನು ಅಳಿಸಿ ಹಾಕುವ ಕೆಲಸವನ್ನು ಅಧಿಕಾರಿಗಳು ಮಾಡಿದ್ದು ಸಂತಸ ಪಡುವ ವಿಷಯ ಎಂದು ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ(ಕು.ಸಾಲವಾಡಗಿ) ಹೇಳಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿಯನ್ನು ಅಳಿಸಿ ಹಾಕುವ ಕೆಲಸವನ್ನು ಅಧಿಕಾರಿಗಳು ಮಾಡಿದ್ದು ಸಂತಸ ಪಡುವ ವಿಷಯ ಎಂದು ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ(ಕು.ಸಾಲವಾಡಗಿ) ಹೇಳಿದರು.

ಪಟ್ಟಣದ ಸಂಗಮೇಶ್ವರ ಸಭಾಭವನದಲ್ಲಿ ಕೇಂದ್ರ ಸರ್ಕಾರದ ನೀತಿ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ತಾಲೂಕಾಡಳಿತ ತಾಲೂಕಾ ಪಂಚಾಯತಿ ತಾಳಿಕೋಟೆ ಸಹಯೋಗದಲ್ಲಿ ಮಹಾತ್ವಾಕಾಂಕ್ಷಿ ತಾಲೂಕು ಕಾರ್ಯಕ್ರಮದಡಿ ಸಂಪೂರ್ಣತಾ ಅಭಿಯಾನ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ದೇಶದಲ್ಲಿ ಹಿಂದುಳಿದ ತಾಲೂಕುಗಳನ್ನು ಗುರುತಿಸಿ ಅವುಗಳನ್ನು ಅಭಿವೃದ್ದಿ ಪಡಿಸಬೇಕೆಂಬ ಇಚ್ಚೆಯೊಂದಿಗೆ ಕೇಂದ್ರ ಸರ್ಕಾರ ನೀತಿ ಆಯೋಗದ ಮೂಲಕ ರಾಜ್ಯದ ೧೪ ತಾಲೂಕುಗಳನ್ನು ಗುರುತಿಸಿದೆ. ಅದರಲ್ಲಿ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕು ಸೇರಿತ್ತು. ಅದರಲ್ಲಿ ೩೯ ಸೂಚ್ಯಂಕಗಳನ್ನು ಅಭಿವೃದ್ದಿ ಪಡಿಸುವದರಲ್ಲಿ ಕೇವಲ ೨ ವರ್ಷಗಳಲ್ಲಿ ೬ ಸೂಚ್ಯಂಕಗಳನ್ನು ಶೇ.೧೦೦ ರಷ್ಟು ಅಭಿವೃದ್ದಿ ಪಡಿಸಿ ಬಂಗಾರದ ಪದಕ ಪಡೆದುಕೊಳ್ಳುವ ಕೆಲಸವನ್ನು ಅಧಿಕಾರಿಗಳು ಮಾಡಿರುವುದು ಸಂತಸ ಪಡುವ ವಿಚಾರ. ಅಭಿವೃದ್ಧಿ ಕಾರ್ಯಗಳಾಗಬೇಕಾದರೆ ಅಧಿಕಾರಿಗಳ ಸಾರ್ವಜನಿಕರ ಸಹಕಾರ ಬಹುಮುಖ್ಯ.ಕೃಷಿ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಒಳಗೊಂಡು ೬ ಸೂಚ್ಯಂಕಗಳನ್ನು ಶೇ.೧೦೦ ರಷ್ಟು ಅಧಿಕಾರಿಗಳು ಗುರಿ ಸಾಧಿಸುರುವುದು ಮೆಚ್ಚುವ ಸಂಗತಿ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ಅಧಿಕಾರಿಗಳು ಅಚ್ಚುಕ್ಕಟ್ಟಾಗಿ ಮಾಡುವದರ ಜೊತೆಗೆ ಈ ಕಾರ್ಯಕ್ರಮದಲ್ಲಿ ಬಾಣಂತಿಯರಿಗೆ ಗೌರವಿಸುವ ಕೆಲಸ ಮಾಡಿದ್ದು ಶ್ಲಾಘನೀಯವಾಗಿದೆ ಎಂದರು.ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಮಾತನಾಡಿ, ತಾಳಿಕೋಟೆ ನಗರವು ಐತಿಹಾಸಿಕ ನಗರ. ವ್ಯಾಪಾರಿಕರಣ ನಗರವಾಗಿ ದಿನದಿಂದ ದಿನಕ್ಕೆ ಬೆಳೆಯುತ್ತಾ ಸಾಗಿದೆ. ಆದರೆ ಕೇಂದ್ರ ಸರ್ಕಾರವು ೩೯ ಮಾನದಂಡಗಳನ್ನು ಸೇರಿಸಿ ಅತೀ ಹಿಂದುಳಿದ ತಾಲೂಕುಗಳ ಪಟ್ಟಿಯಲ್ಲಿ ಸೇರಿಸಿ ಅಭಿವೃದ್ದಿ ಕಾರ್ಯಗಳಿಗೆ ಮುನ್ನುಡಿ ಬರೆದಿತ್ತು. ಅದರಂತೆ ಅಧಿಕಾರಿಗಳು ಕೇವಲ ೨ ವರ್ಷಗಳಲ್ಲಿ ಶ್ರಮವಹಿಸಿ ೩೯ ಮಾನದಂಡಗಳಲ್ಲಿ ೬ರಲ್ಲಿ ಶೇ.೧೦೦ ರಷ್ಟು ಸಾಧನೆ ಮಾಡಿ ಗೋಲ್ಡ್ ಮೆಡಲ್ ಪಡೆದಿದ್ದಾರೆ. ಈ ತಾಳಿಕೋಟೆ ತಾಲೂಕು ವಿಜಯಪುರ ಜಿಲ್ಲೆಯ ಕೊನೆಯ ತಾಲೂಕು ಕೇಂದ್ರವಾಗಿತ್ತು. ಈ ತಾಲೂಕಿಗೆ ಹೈದ್ರಾಬಾದ- ಕರ್ನಾಟಕವು ಸೇರಿಕೊಳ್ಳುತ್ತಿರುವದರಿಂದ ಸಹಜವಾಗಿಯೇ ಹಿಂದುಳಿದ ಪಟ್ಟಿಯಲ್ಲಿ ಸೇರಿಕೊಂಡಿತ್ತು. ಇನ್ನು ೩೩ ಸೂಚ್ಯಂಕಗಳನ್ನು ಪೂರೈಸಬೇಕಾಗಿದೆ. ಅಧಿಕಾರಿಗಳು ಕೆಲಸ ಮಾಡುತ್ತಿರುವ ಪರಿಯನ್ನು ನೋಡಿದರೆ ನಮ್ಮಲ್ಲಿಯೂ ಆತ್ಮ ವಿಸ್ವಾಸ ಹೆಚ್ಚಿಸುವಂತೆ ಮಾಡಿದೆ. ಸರ್ಕಾರದ ಯೋಜನೆಗಳು ನಿಜವಾದ ಫಲಾನುಭವಿಗಳಿಗೆ ಮುಟ್ಟಬೇಕಾಗಿದೆ. ಇದರಿಂದ ಹಳ್ಳಿಯಿಂದ ತಾಲೂಕು, ಜಿಲ್ಲೆ, ದೇಶ ಎಂದಿಗೂ ಬಡವಾಗುವದಿಲ್ಲ. ಹೀಗಾಗಿ, ರಾಜಕಾರಣಿಗಳು ಅಧಿಕಾರಿಗಳ ಆತ್ಮ ಸ್ಥೈರ್ಯದ ಜೊತೆಗೆ ನಿಲ್ಲಬೇಕು ಎಂದು ಹೇಳಿದರು.ಜಿಪಂ ಸಿಇಒ ರಿಷಿ ಆನಂದ ಮಾತನಾಡಿದರು. ಜಿಪಂ ಯೋಜನಾ ನಿರ್ದೇಶಕ ಎ.ಡಿ.ಅಲ್ಲಾಪೂರ ಯೋಜನೆಯ ಬಗ್ಗೆ ತಿಳಿಸಿದರು. ತಾಪಂ ಇಒ ನಿಂಗಪ್ಪ ಮಸಳಿ ಪ್ರಾಸ್ತಾವಿಕ ಮಾತನಾಡಿದರು. ಈ ಸಮಯದಲ್ಲಿ ೬ ಸೂಚ್ಯಂಕಗಳಲ್ಲಿ ಸಾಧನೆ ಮಾಡಿದ ಕೃಷಿ ಇಲಾಖೆಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆಯೊಳಗೊಂಡ ಅಧಿಕಾರಿಗಳು ಹಾಗೂ ಗರ್ಭಿಣಿ ಮಹಿಳೆಯರನ್ನು ಸನ್ಮಾನಿಸಿ ಗೌರವಿಸಲಾಯಿತು.ಈ ಸಮಯದಲ್ಲಿ ವಿನಯಾ ಹೂಗಾರ, ಶರಣಗೌಡ ಬಿಳಗಿ, ಡಾ.ಸತೀಶ ತಿವಾರಿ, ಶಿವಮೂರ್ತಿ ಕುಂಬಾರ, ಆರ್.ಎಸ್.ಹಿರೇಗೌಡರ, ಬಿ.ಎಸ್.ಸಾವಳಗಿ, ಮತ್ತು ಎಚ್.ಎಸ್.ಪಾಟೀಲ, ಪ್ರಭುಗೌಡ ಮದರಕಲ್ಲ, ಮಡುಸಾಹುಕಾರ ಬಿರಾದಾರ, ಸಿದ್ದನಗೌಡ ಪಾಟೀಲ(ನಾವದಗಿ) ಇತರರು ಇದ್ದರು. ಸಿಆರ್‌ಸಿ ರಾಜು ವಿಜಾಪೂರ ನಿರೂಪಿಸಿದರು. ತಾಪಂ ಸಹಾಯಕ ನಿರ್ದೇಶಕ ಬಿ.ಎಂ.ಸಾಗರ ವಂದಿಸಿದರು.