ಸಾರಾಂಶ
ಅಗರಬತ್ತಿ, ಎಣಿಕೆ ಸಾಮಗ್ರಿಗಳು, ಪೇಪರ್ ಪ್ಲೆಟ್, ರೊಟ್ಟಿ, ಗಾಣದ ಎಣ್ಣೆ, ಶೇಂಗಾ, ಕುಸುಬಿ ಚಟ್ನಿ, ಮೂರ್ತಿಗಳು (ಗಿಫ್ಟ್) ಇತರ ವಸ್ತು ಮಾರಾಟ
ಗಜೇಂದ್ರಗಡ: ಸಂಜೀವಿನಿ ಸ್ವ ಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಸಂಪರ್ಕ ಮತ್ತು ಉದ್ಯಮವನ್ನು ಉತ್ತೇಜಿಸಲು ಸಹಕಾರ ಅಗತ್ಯ ಎಂದು ತಾಪಂ ಇಒ ಅಧಿಕಾರಿ ಬಸವರಾಜ ಬಡಿಗೇರ ಹೇಳಿದರು.
ಪಟ್ಟಣದ ಸಾನ್ವಿ ಮಾರ್ಟ್‌ನಲ್ಲಿ ಸಂಜೀವಿನಿ ಸ್ವ ಸಹಾಯ ಸಂಘಗಳ ಸದಸ್ಯರು ತಯಾರಿಸಿರುವ ಉತ್ನನ್ನಗಳ ಮಾರಾಟ ಮಳಿಗೆ ಉದ್ಘಾಟಿಸಿ ಅವರು ಮಾತನಾಡಿದರು. ಎನ್‌ಆರ್‌ಎಲ್‌ಎಂ ಸಂಜೀವಿನಿ ಒಕ್ಕೂಟ ಬಡ ಮಹಿಳೆಯ ಸ್ವಯಂ ಉದ್ಯೋಗ ನೀಡುವ ಮೂಲಕ ಅವರನ್ನು ಆರ್ಥಿಕ ಸಾಮಾಜಿಕವಾಗಿ ಮುಂದೆ ಬರಲು ಸ್ವಾವಲಂಬಿ ಜೀವನಕ್ಕೆ ದಾರಿ ಮಾಡಿಕೊಟ್ಟಿದೆ. ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ಮಾರಾಟ ಮಾಡುವ ವಸ್ತುಗಳು: ಸಂಜೀವಿನಿ ಮಹಿಳಾ ಉದ್ಯಮಿದಾರರಿಂದ ಮಾರ್ಟ್‌ನಲ್ಲಿ ಅಗರಬತ್ತಿ, ಎಣಿಕೆ ಸಾಮಗ್ರಿಗಳು, ಪೇಪರ್ ಪ್ಲೆಟ್, ರೊಟ್ಟಿ, ಗಾಣದ ಎಣ್ಣೆ, ಶೇಂಗಾ, ಕುಸುಬಿ ಚಟ್ನಿ, ಮೂರ್ತಿಗಳು (ಗಿಫ್ಟ್) ಇತರ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ.
ಈ ವೇಳೆ ಎನ್‌ಆರ್‌ಎಲ್ ಸಂಜೀವಿನಿ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಗುರು ವೀರಾಪುರ, ಮೇಲ್ವಿಚಾರಕ ವೀರೇಶ ಎಸ್. ಬಳಿಗಾರ, ತಾಲೂಕು ವ್ಯವಸ್ಥಾಪಕರ ಅನಿಲಕುಮಾರ್, ಸಾನ್ವಿ ಮಾರ್ಟ್ ಅಂಗಡಿಯ ಹಾಗೂ ಸಂಜೀವಿನಿ ಒಕ್ಕೂಟದ ಸಿಬ್ಬಂದಿ ಕವಿತಾ ರೋಣದ, ಸಮೀನಾ, ರೋಷನ್ ಬೇಗಂ, ಶಾಂತಾ ಕರಮುಡಿ, ಮಾಲಾ ಕಮ್ಮಾರ, ವಿದ್ಯಾ ರೊಳ್ಳಿ, ಸಂಘದ ಉದ್ಯಮಿದಾರ ಮಹಿಳೆಯರು ಹಾಗೂ ಸ್ವಸಹಾಯ ಸಂಘದ ಮಹಿಳೆಯರು ಇದ್ದರು.