ಶ್ರೇಷ್ಠ ಕಲಾ ಪ್ರಶಸ್ತಿ ಸ್ಥಾಪನೆ ಶಾಘನೀಯ: ಪ್ರೊ.ಬಿ.ಡಿ.ಕುಂಬಾರ

| Published : Oct 05 2024, 01:43 AM IST / Updated: Oct 05 2024, 01:44 AM IST

ಸಾರಾಂಶ

ದೃಶ್ಯ ಕಲಾ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡಿ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ಕಲಾವಿದರನ್ನು ಕಾಲೇಜಿಗೆ ಕರೆಸಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಇದಕ್ಕೆ ಹಿರಿಯ ಪ್ರಾಧ್ಯಾಪಕರು ಹಾಗೂ ದಾವಣಗೆರೆ ವಿ.ವಿ.ಯ ಸಹಕಾರ ಇರಲಿದೆ ಎಂದು ದಾವಣಗೆರೆ ವಿವಿ ಉಪಕುಲಪತಿ ಪ್ರೊ. ಬಿ.ಡಿ. ಕುಂಬಾರ್ ದಾವಣಗೆರೆಯಲ್ಲಿ ಹೇಳಿದ್ದಾರೆ.

- ದೃಶ್ಯ ಕಲಾ ಕಾಲೇಜಿನಲ್ಲಿ 1964-2024 ಅನ್ವೇಷಣೆಯ ಪಥದಲ್ಲಿ ಕಾರ್ಯಕ್ರಮ- - - ಕನ್ನಡಪ್ರಭ ವಾರ್ತೆ ದಾವಣಗೆರೆ

ದೃಶ್ಯ ಕಲಾ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡಿ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ಕಲಾವಿದರನ್ನು ಕಾಲೇಜಿಗೆ ಕರೆಸಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಇದಕ್ಕೆ ಹಿರಿಯ ಪ್ರಾಧ್ಯಾಪಕರು ಹಾಗೂ ದಾವಣಗೆರೆ ವಿ.ವಿ.ಯ ಸಹಕಾರ ಇರಲಿದೆ ಎಂದು ದಾವಣಗೆರೆ ವಿವಿ ಉಪಕುಲಪತಿ ಪ್ರೊ. ಬಿ.ಡಿ. ಕುಂಬಾರ್ ಹೇಳಿದರು.

ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ ವಿಶ್ವವಿದ್ಯಾನಿಲಯ ದೃಶ್ಯ ಕಲಾ ಮಹಾವಿದ್ಯಾಲಯದ ಅರವತ್ತು ವರ್ಷಗಳ ಕಲಾಪಯಣ 1964-2024 ಅನ್ವೇಷಣೆಯ ಪಥದಲ್ಲಿ ಕಾರ್ಯಕ್ರಮ ಉದ್ಘಾಟಿಸಿ, ಕಲಾ ಪ್ರದರ್ಶನ ವೀಕ್ಷಿಸಿ ಅವರು ಮಾತನಾಡಿದರು. ಮಕ್ಕಳಲ್ಲಿ ಕಲಾಭಿರುಚಿ ಬೆಳೆಸಲು ನಗರದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಕ್ಕಳು ದೃಶ್ಯಕಲಾ ವಿವಿಯಲ್ಲಿ ನಡೆಯುವ ಕಲಾ ಪ್ರದರ್ಶನ ವೀಕ್ಷಿಸಬೇಕಿದೆ ಎಂದರು.

ಕಳೆದ 60 ವರ್ಷಗಳಲ್ಲಿ ಸಾಧಿಸಲಾಗದ ಸಾಧನೆಯನ್ನು 60ನೇ ವರ್ಷದಲ್ಲಿ ಮಾಡಬೇಕು. ಈ ನಿಟ್ಟಿನಲ್ಲಿ ಕಾಲೇಜಿನಲ್ಲಿ ಅತ್ಯುತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿ, ಕಾಲೇಜಿನ ಕೀರ್ತಿ ಹೆಚ್ಚಿಸಬೇಕು. ಹಿರಿಯ ಚಿತ್ರಕಲಾವಿದ ಶ್ರೀನಾಥ ಬಿದರೆ ತಮ್ಮ ತಂದೆ, ಕಲಾಪ್ರೇಮಿ ದಿವಂಗತ ಬಿದರೆ ನಾರಾಯಣ ರಾವ್ ಅವರ ಸವಿನೆನಪಿಗಾಗಿ ವಾರ್ಷಿಕ ಪ್ರಶಸ್ತಿಯನ್ನು ಅವರ ಹೆಸರಿನಲ್ಲಿ `ಶ್ರೇಷ್ಠ ಕಲಾ ಪ್ರಶಸ್ತಿ'''''''' ನೀಡಿರುವುದು ಕಾಲೇಜಿಗೆ ಹರ್ಷ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಮಾತನಾಡಿ, ದಾವಣಗೆರೆ ವಿವಿ ಹಾಗೂ ದೃಶ್ಯಕಲಾ ಕಾಲೇಜಿನಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಹಕಾರ ನೀಡಲಿದೆ ಎಂದರು.

ಹಿರಿಯ ಕಲಾವಿದ ಎ.ಮಹಾಲಿಂಗಪ್ಪ ಮಾತನಾಡಿ, ದೃಶ್ಯಕಲಾ ಕಾಲೇಜು ದೇವನಗರಿಯಲ್ಲೇ ಜನ್ಮ ತಾಳಲು ಶ್ರಮಿಸಿದ ಡಾ.ಮಿಣಜಗಿ ಅವರ ಹೆಸರು ಯಾರು ಮರೆಯಬಾರದು. ಹಾಗಾಗಿ ಅವರಿಗೆ ಗೌರವ ಸಮರ್ಪಣೆ ಸಲ್ಲಿಸುವ ನಿಟ್ಟಿನಲ್ಲಿ ಅವರ ಹೆಸರಿನಲ್ಲಿ ಕಾರ್ಯಕ್ರಮ ಮಾಡಬೇಕಿದೆ ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಡಾ. ಜೈರಾಜ್ ಚಿಕ್ಕಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಹಿರಿಯ ಕಲಾವಿದ ಶ್ರೀನಾಥ್ ಬಿದರೆ ಸ್ವಾಗತಿಸಿದರು. ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾದ ಆಶಾರಾಣಿ ನಡೋಣಿ, ಡಾ.ವಿಠ್ಠಲ ರೆಡ್ಡಿ ಎಫ್. ಚುಳಕಿ, ಮೈಸೂರು ಕಲಾನಿಕೇತನ ಕಲಾ ಶಾಲೆಯ ಡಾ. ವಿಠ್ಠಲ ರೆಡ್ಡಿ ಎಫ್. ಚುಳಕಿ, ಕಲಾವಿದರಾದ ಪಿ.ಅಬೂಬಕರ್, ಡಿ.ಕುಬೇರಪ್ಪ, ಕಾಲೇಜಿನ ಉಪನ್ಯಾಸಕರಾದ ದತ್ತಾತ್ರೇಯ ಎನ್.ಭಟ್, ಇತರೆ ಉಪನ್ಯಾಸಕರು, ಕಲಾವಿದರಾದ ಚಂದ್ರಶೇಖರ ಎಸ್.ಸಂಗ, ಡಾ.ಸಂತೋಷ ಕುಲಕರ್ಣಿ, ರವೀಂದ್ರ ಕಮ್ಮಾರ್, ಹನುಮಂತಾಚಾರ್, ಚಂದ್ರಶೇಖರ ತೆಗ್ಗಿನ ಮಠ, ನಾಗಭೂಷಣ, ಪದ್ಮಶ್ರೀ, ರಾಘವೇಂದ್ರ ನಾಯಕ್, ರಾಮು, ಹರೀಶ ಮಾಳಪ್ಪನವರ್ ಸೇರಿದಂತೆ ಹಾವೇರಿ, ಬೆಂಗಳೂರು, ಮೈಸೂರು, ರಾಯಭಾಗ್‌ನಿಂದ ಕಲಾವಿದರು, ವಿದ್ಯಾರ್ಥಿಗಳು ಇತರರು ಭಾಗವಹಿಸಿದ್ದರು.

ಶನಿವಾರ ಮತ್ತು ಭಾನುವಾರ ಹಿರಿಯ ಕಲಾವಿದರಿಂದ ಕಲಾವಿದರಿಗೆ, ಕಲಾ ವಿದ್ಯಾರ್ಥಿಗಳಿಗೆ ಉಪನ್ಯಾಸ, ಸಂವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

- - - -4ಕೆಡಿವಿಜಿ35ಃ: ದಾವಣಗೆರೆಯ ದೃಶ್ಯ ಕಲಾ ಮಹಾವಿದ್ಯಾಲಯದಲ್ಲಿಂದು ನಡೆದ 60 ವರುಷಗಳ ಕಲಾಪಯಣ ಅನ್ವೇಷಣೆಯ ಪಥದಲ್ಲಿ ಕಾರ್ಯಕ್ರಮವನ್ನು ಪ್ರೊ.ಬಿ.ಡಿ.ಕುಂಬಾರ ಉದ್ಘಾಟಿಸಿದರು. -4ಕೆಡಿವಿಜಿ36ಃ: ದಾವಣಗೆರೆಯ ದೃಶ್ಯ ಕಲಾ ಮಹಾವಿದ್ಯಾಲಯದಲ್ಲಿ ನಡೆದ ಕಲಾ ಪ್ರದರ್ಶನವನ್ನು ಪ್ರೊ. ಬಿ.ಡಿ.ಕುಂಬಾರ ಇತರೆ ಗಣ್ಯರು ವೀಕ್ಷಣೆ ಮಾಡಿದರು.