ಗ್ರಾಮೀಣರ ಆರ್ಥಿಕತೆಗೆ ಸಹಕಾರವೇ ಬೆನ್ನೆಲುಬು

| Published : Nov 20 2025, 12:00 AM IST

ಸಾರಾಂಶ

ಮಹಿಳಾ ಸಂಘಗಳು ಮತ್ತು ಯುವಕರಿಗೆ ಸಹಕಾರಿ ಸಂಸ್ಥೆಗಳು ಅಭಿವೃದ್ಧಿಯ ಮಾರ್ಗವಾಗಿದೆ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಸಹಕಾರಿ ಕ್ಷೇತ್ರವು ಗ್ರಾಮೀಣ ಆರ್ಥಿಕತೆಗೆ ಬೆನ್ನೆಲುಬಾಗಿ ನಿಂತಿದ್ದು, ಸಹಕಾರದ ಮೌಲ್ಯಗಳು ಬಲವಾಗಿದ್ದರೆ ಗ್ರಾಮಗಳು ಬಲವಾಗುತ್ತವೆ. ರೈತರು, ಮಹಿಳಾ ಸಂಘಗಳು ಮತ್ತು ಯುವಕರಿಗೆ ಸಹಕಾರಿ ಸಂಸ್ಥೆಗಳು ಅಭಿವೃದ್ಧಿಯ ಮಾರ್ಗವಾಗಿದೆ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.

ನಗರದ ನಂದಿನಿ ಕ್ಷೀರ ಭವನದಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಠ್ರೀಯ ಸಹಕಾರ ನೀತಿಯ ಪರಿಸರ ವ್ಯವಸ್ಥೆ ಭಾರತದ ಸಹಕಾರ ಸಂಸ್ಥೆಗಳಿಗೆ ರಚನಾತ್ಮಕ ಮಾರ್ಗಸೂಚಿ ದಿನವಾಗಿ ಆಚರಣೆ ಮಾಡಲಾಯಿತು. 45 ವರ್ಷಗಳ ರಾಜಕೀಯ ವೃತ್ತಿಯಲ್ಲಿ ಸಹಕಾರಿ ಕ್ಷೇತ್ರದಲ್ಲಿ ಸಿಕ್ಕಿರುವ ತೃಪ್ತಿ ರಾಜಕೀಯ ಕ್ಷೇತ್ರದಲ್ಲಿ ಸಿಕ್ಕಿಲ್ಲ. . ಈ ಕ್ಷೇತ್ರದಲ್ಲಿ ಶಿಕ್ಷಣದ ವ್ಯವಸ್ಥೆ, ಉದ್ಯೋಗದ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿ ರೈತರಿಗೆ ಹಾಗೂ ಸಹಕಾರಿಗಳಿಗೆ ಅನುಕೂಲಕರ ನೀತಿಗಳನ್ನು ತರಲಾಗುವುದು. ಸಹಕಾರ ಕ್ಷೇತ್ರ ಆರ್ಥಿಕವಾಗಿ ಹಿಂದುಳಿದವರಿಗೆ, ರೈತರಿಗೆ, ಕೃಷಿಕರ ಏಳಿಗೆಗೆ ಅನುಕೂಲಕರವಾಗಿದ್ದು ಇದರಿಂದ ಅವರ ಸೇವೆ ಮಾಡಲು ನಮಗೆ ಸಾಧ್ಯವಾಗಿದೆ. ಇಂದಿನ ಜಾಗತೀಕರಣಕ್ಕೆ ಯುವಕರು ಸಹಕಾರ ಕ್ಷೇತ್ರಕ್ಕೆ ಆಗಮಿಸಿ ಸಹಕಾರದ ತತ್ವಗಳನ್ನು ಬೆಳಸಿಕೊಳ್ಳಬೇಕಾಗಿದೆ. ಸಹಕಾರ ಕ್ಷೇತ್ರದ ಮೂಲಕ ಅಲ್ಫಾವಧಿ, ಮಧ್ಯಮಾವಧಿ, ದೀರ್ಘಾವಧಿ ಸಾಲಗಳನ್ನು ನೀಡಲಾಗುತ್ತಿದ್ದು, ರೈತರ ಕಲ್ಯಾಣಕ್ಕೆ ಶೂನ್ಯ ಬಡ್ಡಿದರದಲ್ಲಿ ಸಾಲವನ್ನು ನೀಡಲಾಗುತ್ತಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದರು. ತುಮೂಲ್ ನಿರ್ದೇಶಕ ಮಾದಿಹಳ್ಳಿ ಪ್ರಕಾಶ್ ಮಾತನಾಡಿ ತುಮಕೂರು ಜಿಲ್ಲೆ ಹಾಲು ಉತ್ಪಾದನೆಯಲ್ಲಿ ರಾಜ್ಯದ ಮುಂಚೂಣಿಯಲ್ಲಿದೆ. ಸದಸ್ಯರ ನಿ? ಮತ್ತು ಗುಣಮಟ್ಟದ ಮೇಲಿನ ಕಾಳಜಿ ಸಹಕಾರ ಚಳವಳಿಯ ಬಲವಾಗಿದ್ದು ತಾಲ್ಲೂಕಿನಲ್ಲಿ ಹತ್ತು ಸಾವಿರ ಹಾಲು ಉತ್ಪಾದಕರಿದ್ದು ಸಹಕಾರ ಸಂಘಗಳ ಮೂಲಕ ರೈತರ ಆರ್ಥಿಕ ಮಟ್ಟವನ್ನು ಏರಿಕೆ ಮಾಡಲಾಗುತ್ತಿದೆ ಎಂದರು ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ.ಜಿ.ವೆಂಕಟೇಗೌಡ ಮಾತನಾಡಿ ಸಹಕಾರ ಕ್ಷೇತ್ರದಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿತನ ಅವಶ್ಯ. ಸದಸ್ಯರಿಗೆ ಅನುಕೂಲಕರ ಯೋಜನೆಗಳನ್ನು ತಲುಪಿಸುವುದು ನಮ್ಮ ಸಹಕಾರ ಯೂನಿಯನ್ ಪ್ರಮುಖ ಗುರಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಕೆ.ಬಿ.ಪ್ರಕಾಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಸಿ.ಮುದ್ದಲಿಂಗೇಗೌಡ, ಟಿಎಪಿಸಿಎಮ್‌ಸಿ ಅಧ್ಯಕ್ಷ ಸಿ.ಚನ್ನಬಸವಯ್ಯ, ತುಮೂಲ್ ತಾ ಮುಖ್ಯಸ್ಥ ಶ್ರೀಧರ್, ವಿಸ್ತರಣಾಧಿಕಾರಿ ಶಶಿಕಲಾ, ಶ್ರೀಲಕ್ಷ್ಮಿ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಉಮಾಶಂಕರ್, ಪ್ರವೀಣ್ ಕುಮಾರ್, ವ್ಯವಸ್ಥಾಪಕ ದಯಾನಂದ್, ಸಿಇಓ ಮಹಾಂತೇಶ್ ಹಿರೇಮಠ, ಹರೀಶ್‌ಕುಮಾರ್, ಸಹಕಾರಿ ಇಲಾಖೆಯ ಅಧಿಕಾರಿಗಳು, ಹಾಲು ಉತ್ಪಾದಕರ ಸಂಘದ ಸದಸ್ಯರು, ಕಾರ್ಯದರ್ಶಿಗಳು ಹಾಗೂ ಸಹಕಾರ ಕ್ಷೇತ್ರದ ಸಹಕಾರಿಗಳು ಭಾಗವಹಿಸಿದ್ದರು. ಫೋಟೋ 19-ಟಿಪಿಟಿ3ರಲ್ಲಿ ಕಳುಹಿಸಲಾಗಿದೆ. ಶೀರ್ಷಿಕೆ : ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಕೆ.ಷಡಕ್ಷರಿ, ತುಮೂಲ್ ನಿರ್ದೇಶಕ ಮಾದಿಹಳ್ಳಿ ಪ್ರಕಾಶ್ ಮತ್ತಿತರರು.