ಹೊಸಕೋಟೆ: ಸಹಕಾರ ಸಂಘಗಳು ರೈತರ ಆರ್ಥಿಕತೆಯ ಬೆನ್ನೆಲು, ಹಿರಿಯ ಸಹಕಾರ ಧುರೀಣ ಸೊಣ್ಣಪ್ಪನವರು ಹಾಕಿಕೊಟ್ಟ ಭದ್ರ ಬುನಾದಿಯ ಹಾದಿಯಲ್ಲಿ ಎಲ್ಲರೂ ಕಾರ್ಯನಿರ್ವಹಿಸಬೇಕಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.

ನಗರದಲ್ಲಿ ನಡೆದ ಟಿಎಪಿಸಿಎಂಎಸ್ 2025-26ನೇ ಸಾಲಿನ 77ನೇ ಸರ್ವ ಸದಸ್ಯರ ಸಾಮಾನ್ಯ ಸಭೆ ಹಾಗೂ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಮಳೆ ಕೊರತೆ ಮುಂದುವರಿದರೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಒದಗಿಸುವ ಕುರಿತು ಸರ್ಕಾರ ಈಗಾಗಲೇ ಅಗತ್ಯ ಸಿದ್ಧತೆ ನಡೆಸಿದೆ. ಇಂತಹ ಸಂದರ್ಭದಲ್ಲಿ ಸಹಕಾರ ಸಂಘಗಳು ಇನ್ನಷ್ಟು ಜವಾಬ್ದಾರಿಯಿಂದ ರೈತರ ನೆರವಿಗೆ ನಿಲ್ಲಬೇಕಿದೆ ಎಂದರು.

ಟಿಎಪಿಸಿಎಂಎಸ್ ಅಧ್ಯಕ್ಷ ಕೋಡಿಹಳ್ಳಿ ಸುರೇಶ್ ಮಾತನಾಡಿ, ಸಂಘ ಇನ್ನಷ್ಟು ಬಲಿಷ್ಠಗೊಳಿಸುವ ಉದ್ದೇಶದಿಂದ ವೇರ್‌ಹೌಸ್, ಸೂಪರ್ ಮಾರ್ಕೆಟ್ ನಿರ್ಮಾಣ ಹಾಗೂ ಹೊಸ ಶಾಖೆಗಳ ಆರಂಭಕ್ಕೆ ಯೋಜನೆ ರೂಪಿಸಲಾಗಿದೆ. ಗ್ರಾಹಕರ ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ತಲುಪಿಸುವ ಸೇವೆ ಆರಂಭಿಸಿದ್ದು, ಮೊದಲ ಹಂತದಲ್ಲಿ 5 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸೇವೆ ಆರಂಭ, ಆನ್‌ಲೈನ್‌ನಲ್ಲಿ ನಾಗರಿಕರು ದಿನಸಿ ಪದಾರ್ಥ ಖರೀದಿಸಬಹುದು. ಜೊತೆಗೆ ಎರಡು-ಮೂರು ಹೊಸ ಶಾಖೆಗಳ ಆರಂಭ ಹಾಗೂ ಭಕ್ತಗೊಂಡನಹಳ್ಳಿ ಸಮೀಪ ನೂತನ ಗೋದಾಮು ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಟಿಎಪಿಸಿಎಂಎಸ್ ಪ್ರಭಾರ ಕಾರ್ಯದರ್ಶಿ ಎಂ.ಸೋಮಣ್ಣ ಸಹಕಾರ ಸಂಘದ ವರದಿ ಮಂಡಿಸಿದರು. 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಅದ್ಯಕ್ಷ ಗೋಪಾಲ ಗೌಡ, ವಕ್ಕಲಿಗರ ಸಂಘದ ನಿರ್ದೇಶಕ ರಾಜ್‌ಶೇಕರ್ ಗೌಡ, ಉದ್ಯಮಿ ಬಿ.ವಿ. ಬೈರೇಗೌಡ, ಯೋಜನಾ ಪ್ರಾಧಿಕಾರದ ನಿರ್ದೇಶಕ ಡಾ ಎಚ್.ಎಂ.ಸುಬ್ಬರಾಜ್, ಉಪಾಧ್ಯಕ್ಷ ಸಿ.ಮುನಿರಾಜ್, ನಿರ್ದೇಶಕರಾದ ಎಚ್.ಕೆ.ರಮೇಶ್, ಎಂ.ಬಾಬುರೆಡ್ಡಿ, ರವಿ ಎಚ್ ಎಸ್, ಕೆ.ಸುನೀಲ್, ಎಲ್.ಎಂ.ಮಂಜುನಾಥ್, ಡಿ. ನಾಗರಾಜ್, ಎಸ್.ಪಿ.ಕೃಷ್ಣಪ್ಪ, ಪಿ.ನಾರಾಯಣಪ್ಪ, ನಾರಾಯಣಸ್ವಾಮಿಸಿ.ಎಂ, ಪಾರ್ವತಮ್ಮ, ಹಸೀನ್ ತಾಜ್, ಎಂ.ಬಿ. ವೆಂಕಟೇಶಪ್ಪ, ಬಿ.ಸಿ.ಆನಂದಾಚಾರಿ ಇತರರಿದ್ದರು.


ಫೋಟೋ: 1 ಹೆಚ್‌ಎಸ್‌ಕೆ 3

ಹೊಸಕೋಟೆಯ ಟಿಎಪಿಸಿಎಂಎಸ್ ಸಹಕಾರ ಸಂಘದ 2025-26 ನೇ ಸಾಲಿನ ಸರ್ವ ಸದಸ್ಯರ ಸಭೆಯಲ್ಲಿ ಸದಸ್ಯರ ಮಕ್ಕಳಿಗೆ ಶಾಸಕ ಶರತ್ ಬಚ್ಚೇಗೌಡ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು.