ಮೋದಿಯವರಿಂದ ಮಾತ್ರ ದೇಶದ ಭವಿಷ್ಯ ಉಜ್ವಲ: ಕಾಗೇರಿ

| Published : Apr 22 2024, 02:16 AM IST

ಮೋದಿಯವರಿಂದ ಮಾತ್ರ ದೇಶದ ಭವಿಷ್ಯ ಉಜ್ವಲ: ಕಾಗೇರಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಜೈ ಶ್ರೀರಾಮ ಹೇಳುವಂತಿಲ್ಲ, ಹನುಮ ಧ್ವಜ ಹಾರಿಸುವಂತಿಲ್ಲ, ಹನುಮಾನ್ ಚಾಲೀಸಾ ಹೇಳುವಂತಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ನಮ್ಮ ಸ್ಥಿತಿ ಏನು ಎಂದು ಗಂಭೀರವಾಗಿ ಚಿಂತಿಸಿ ಎಂದು ಕಾಗೇರಿ ತಿಳಿಸಿದರು.

ಹಳಿಯಾಳ: ದೇಶಕ್ಕೆ ಉತ್ತಮ ನೇತೃತ್ವ ನೀಡಲು ಕಾಂಗ್ರೆಸಿನಿಂದ ಅಸಾಧ್ಯವಾಗಿದ್ದು, ದೇಶದ ಭವಿಷ್ಯ ಉಜ್ವಲವಾಗಿಸಲು ಕೇವಲ ಮೋದಿ ಅವರಿಂದ ಮಾತ್ರ ಸಾಧ್ಯ ಎಂದು ಉತ್ತರ ಕನ್ನಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಭಾನುವಾರ ತಾಲೂಕಿನ ಗ್ರಾಮಾಂತರ ಭಾಗಗಳಲ್ಲಿ ಹಾಗೂ ಪಟ್ಟಣದಲ್ಲಿ ಪ್ರಚಾರ ಸಭೆ ನಡೆಸಿ ಮತಯಾಚಿಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ದ್ವೇಷದ ಚಟುವಟಿಕೆ ಹೆಚ್ಚಾಗಿವೆ. ಅಪರಾಧಿ ಮನೋಭಾವ ಇದ್ದವರು ತಮ್ಮ ರಕ್ಷಣೆ ಮಾಡುವ ಸರ್ಕಾರ ಬಂದಿದೆ ಎಂದು ಮೆರೆಯುತ್ತಿರುವುದರಿಂದಲೇ ನೇಹಾ ಹಿರೇಮಠ ಕೊಲೆಯಂತಹ ದುರ್ಘಟನೆ ನಡೆದಿದೆ ಎಂದರು.

ರಾಜ್ಯದಲ್ಲಿ ಜೈ ಶ್ರೀರಾಮ ಹೇಳುವಂತಿಲ್ಲ, ಹನುಮ ಧ್ವಜ ಹಾರಿಸುವಂತಿಲ್ಲ, ಹನುಮಾನ್ ಚಾಲೀಸಾ ಹೇಳುವಂತಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ನಮ್ಮ ಸ್ಥಿತಿ ಏನೂ ಎಂದು ಗಂಭೀರವಾಗಿ ಚಿಂತಿಸಿ ಎಂದರು.

ಮಾಜಿ ಶಾಸಕ ಸುನೀಲ ಹೆಗಡೆ, ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ, ಪ್ರಮುಖರಾದ ಮಂಗೇಶ ದೇಶಪಾಂಡೆ, ಅನಿಲ ಮುತ್ನಾಳೆ, ಶಿವಾಜಿ ನರಸಾನಿ, ಗಣಪತಿ ಕರಂಜೇಕರ, ವಿ.ಎಂ. ಪಾಟೀಲ, ಶ್ರೀನಿವಾಸ ಘೋಟ್ನೇಕರ ಇತರರು ಇದ್ದರು.