ಕೆಂಪು ಸೀರೆ ಉಟ್ಟ ಕೋರ್ಟ್ ಮಹಿಳಾ ಸಿಬ್ಬಂದಿ

| Published : Oct 09 2024, 01:39 AM IST

ಸಾರಾಂಶ

ಹೊಳೆನರಸೀಪುರ ಪಟ್ಟಣದ ನ್ಯಾಯಾಲಯದ ಮಹಿಳಾ ನೌಕರರು ಶರನ್ನವರಾತ್ರಿ ಆಚರಣೆಯ ೬ನೇ ದಿನವಾದ ಮಂಗಳವಾರ ಕೆಂಪು ಬಣ್ಣದ ಪ್ರತೀಕವಾಗಿ ಕೆಂಪು ಬಣ್ಣದ ಸೀರೆಯನ್ನು ತೊಟ್ಟು ಸಂಭ್ರಮಿಸಿದರು. ಶರನ್ನವರಾತ್ರಿಯ ೬ನೇ ದಿನವಾದ ಮಂಗಳವಾರ ನ್ಯಾಯಾಲಯದ ಮಹಿಳಾ ನೌಕರರು ಕೆಂಪು ಬಣ್ಣದ ಸೀರೆಯ ತೊಟ್ಟು ಭಾರತೀಯ ಸಂಸ್ಕೃತಿಯ ಪಾಲನೆಯಲ್ಲಿ ಮಹಿಳೆಯರ ಪಾತ್ರ ಹಾಗೂ ಕೆಲಸದ ಒತ್ತಡದಲ್ಲೂ ತೊಡಗಿಸಿಕೊಳ್ಳುವ ಮನಸ್ಥಿತಿ ಮತ್ತು ಆಚರಣೆಗಳಿಗೆ ಅವರು ನೀಡುವ ಗೌರವಕ್ಕೆ ಸಾಕ್ಷಿಯಾಗಿದೆ.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪಟ್ಟಣದ ನ್ಯಾಯಾಲಯದ ಮಹಿಳಾ ನೌಕರರು ಶರನ್ನವರಾತ್ರಿ ಆಚರಣೆಯ ೬ನೇ ದಿನವಾದ ಮಂಗಳವಾರ ಕೆಂಪು ಬಣ್ಣದ ಪ್ರತೀಕವಾಗಿ ಕೆಂಪು ಬಣ್ಣದ ಸೀರೆಯನ್ನು ತೊಟ್ಟು ಸಂಭ್ರಮಿಸಿದರು.

ಮನೆಗಳಲ್ಲಿ ನವರಾತ್ರಿಯ ಸಮಯದಲ್ಲಿ ಒಂಬತ್ತು ದಿನಗಳು ಉಪವಾಸ ಮತ್ತು ವಿಶೇಷ ಅಹಾರ ಹಾಗೂ ಪಾನೀಯಗಳನ್ನು ತಯಾರಿಸುತ್ತಾರೆ. ಶರನ್ನವರಾತ್ರಿಯ ೬ನೇ ದಿನವಾದ ಮಂಗಳವಾರ ನ್ಯಾಯಾಲಯದ ಮಹಿಳಾ ನೌಕರರು ಕೆಂಪು ಬಣ್ಣದ ಸೀರೆಯ ತೊಟ್ಟು ಭಾರತೀಯ ಸಂಸ್ಕೃತಿಯ ಪಾಲನೆಯಲ್ಲಿ ಮಹಿಳೆಯರ ಪಾತ್ರ ಹಾಗೂ ಕೆಲಸದ ಒತ್ತಡದಲ್ಲೂ ತೊಡಗಿಸಿಕೊಳ್ಳುವ ಮನಸ್ಥಿತಿ ಮತ್ತು ಆಚರಣೆಗಳಿಗೆ ಅವರು ನೀಡುವ ಗೌರವಕ್ಕೆ ಸಾಕ್ಷಿಯಾಗಿದೆ.

ಭಾರತೀಯ ಸಂಸ್ಕೃತಿಯಲ್ಲಿ ಶರನ್ನವರಾತ್ರಿಯ ಪ್ರಯುಕ್ತ ವಿಶೇಷ ಪೂಜಾ ಮಹೋತ್ಸವದ ಆಚರಣೆ ಹಾಗೂ ನವರಾತ್ರಿಯ ಒಂಬತ್ತು ದಿನಗಳ ಕಾಲ ಹಬ್ಬವನ್ನು ಆಚರಿಸಲಾಗುತ್ತದೆ. ಪ್ರತಿ ದಿನ, ಹಬ್ಬದಲ್ಲಿ ತನ್ನದೇ ಆದ ಪ್ರಾಮುಖ್ಯತೆಯೊಂದಿಗೆ ಒಂಬತ್ತು ಬಣ್ಣವನ್ನು ಗೊತ್ತುಪಡಿಸಲಾಗುತ್ತದೆ. ನವರಾತ್ರಿ ಹಬ್ಬದ ಸದುಪಯೋಗವನ್ನು ಪಡೆಯಲು ಜನರು ಈ ಬಣ್ಣದ ನಿಯಮವನ್ನು ಅನುಸರಿಸುತ್ತಾರೆ. ನವರಾತ್ರಿಯ ಬಣ್ಣಗಳ ಪ್ರಕಾರ ತಮ್ಮ ಮನೆಯನ್ನು ಅಲಂಕರಿಸುತ್ತಾರೆ. ಹಿಂದು ದೇವತೆ ಕಾಳಿ ಅಥವಾ ದುರ್ಗೆಯ ವಿಜಯವನ್ನು ಹಬ್ಬದ ಉದ್ದಕ್ಕೂ ಅಚರಿಸಲಾಗುತ್ತದೆ.

ನ್ಯಾಯಾಲಯದ ಶಿರೆಸ್ತೇದಾರ್‌ರಾದ ನಳಿನಶಾಕ್ಷಿ ಹಾಗೂ ಹಿನಾಕೌಸರ್, ನೌಕರರಾದ ಮಂಜುಳ, ಲೀಲಾ, ಸೌಮ್ಯ, ರುಕ್ಮಿಣಿ, ಪ್ರೇಮಕುಮಾರಿ, ಲಲಿತಾ, ನೇತ್ರಾವತಿ, ಮಮತಾ, ಆಶಾ, ಚಾಯಾ, ಸುಮಿತ್ರ ಇದ್ದರು. ಫೋಟೋ: ಹೊಳೆನರಸೀಪುರದ ನ್ಯಾಯಾಲಯದ ಮಹಿಳಾ ನೌಕರರು ಶರನ್ನವರಾತ್ರಿಯ ಆಚರಣೆಯ ೬ನೇ ದಿನದ ಮಂಗಳವಾರ ಕೆಂಪು ಬಣ್ಣದ ಸೀರೆಯ ತೊಟ್ಟು ಸಂಭ್ರಮಿಸಿದರು.