ವಿದ್ಯುತ್ ಶಾಕ್‌ನಿಂದ ಹಸು-ಕರು ಸಾವು

| Published : May 18 2024, 01:32 AM IST

ಸಾರಾಂಶ

ಲಿಂಗದಹಳ್ಳಿ ಗ್ರಾಮದ ಹೊರ ವಲಯದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸಂಪರ್ಕದಿಂದ ಸಾವನ್ನಪ್ಪಿರುವ ಹಸು.

ಕನ್ನಡಪ್ರಭವಾರ್ತೆ ತರೀಕೆರೆ

ತುಂಡಾಗಿ ನೆಲಕ್ಕೆ ಬಿದ್ದಿದ್ದ ತಂತಿಯಿಂದ ವಿದ್ಯುತ್‌ ತಗುಲಿ ಮೇಯಲು ಹೋಗಿದ್ದ ಹಸು, ಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಲಿಂಗದಹಳ್ಳಿ ಹೊರ ಭಾಗದಲ್ಲಿ ಶುಕ್ರವಾರ ನಡೆದಿದೆ.

ಕಳೆದ ಕೆಲ ದಿನಗಳಿಂದ ಲಿಂಗದಹಳ್ಳಿ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಬೀರುಗಾಳಿ ಮಳೆಗೆ ವಿದ್ಯುತ್ ಕಂಬದ ಮೇಲೆ ಮರ ಬಿದ್ದ ಪರಿಣಾಮ ವಿದ್ಯುತ್‌ ತಂತಿ ತುಂಡಾಗಿ ಬಿದ್ದು ಅವಘಡ ಸಂಭವಿಸಿದೆ. ಲಿಂಗದಹಳ್ಳಿ ಪಶು ವೈದ್ಯಾಧಿಕಾರಿ ಡಾ, ಬಿ.ಟಿ. ಬಸವರಾಜು, ಮೆಸ್ಕಾಂ ಎಂಜಿನಿಯರ್ ತಿಪ್ಪೇಶ್ , ಲಿಂಗದಹಳ್ಳಿ ಆರಕ್ಷಕ ಠಾಣಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.