ಕಟೀಲು ನಂದಿನೀ ಗೋಶಾಲೆಯಲ್ಲಿ ಗೋಪೂಜೆ: ಗೋಪಾಲಕರಿಗೆ ಗೌರವ

| Published : Oct 24 2025, 01:00 AM IST

ಕಟೀಲು ನಂದಿನೀ ಗೋಶಾಲೆಯಲ್ಲಿ ಗೋಪೂಜೆ: ಗೋಪಾಲಕರಿಗೆ ಗೌರವ
Share this Article
  • FB
  • TW
  • Linkdin
  • Email

ಸಾರಾಂಶ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ನಂದಿನೀ ಗೋಶಾಲೆಯಲ್ಲಿ ಸಜ್ಜನ ಬಂಧುಗಳ ಸಂಯೋಜನೆಯಲ್ಲಿ ಗೋಪೂಜೆ ನೆರವೇರಿತು.

ಮೂಲ್ಕಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳವು ಮೂರು ಗೋಶಾಲೆಗಳನ್ನು ನಡೆಸುತ್ತಿದ್ದು, ವಾರ್ಷಿಕ ಸುಮಾರು ಒಂದು ಕೋಟಿ ರು. ವೆಚ್ಚ ಮಾಡುತ್ತಿದೆಯೆಂದು ಕಟೀಲು ದೇವಳದ ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಹೇಳಿದ್ದಾರೆ.

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ನಂದಿನೀ ಗೋಶಾಲೆಯಲ್ಲಿ ಸಜ್ಜನ ಬಂಧುಗಳ ಸಂಯೋಜನೆಯಲ್ಲಿ ನಡೆದ ಗೋಪೂಜೆಯಲ್ಲಿ ಅವರು ಮಾತನಾಡಿದರು.

ಜಿಲ್ಲಾ ಧಾರ್ಮಿಕ ದತ್ತಿ ಪರಿಷತ್ತು ಸದಸ್ಯ ಸುಬ್ರಹ್ಮಣ್ಯ ಪ್ರಸಾದ್ ಶಿಬರೂರು ಮಾತನಾಡಿ ಕಟೀಲಿನಲ್ಲಿ ಹರಿಯುವ ನಂದಿನೀ ನದಿ ಗೋಮಾತೆ ಕಾಮಧೇನುವಿನ ಮಗಳು ಎನ್ನುವುದು ವಿಶೇಷವಾಗಿದ್ದು 12ಕ್ಕೂ ಹೆಚ್ಚು ದೇಸೀ ತಳಿಯ 200ರಷ್ಟು ಗೋವುಗಳಿರುವ ಗೋಶಾಲೆಯನ್ನು ದೇವಸ್ಥಾನವು ಚೆನ್ನಾಗಿ ನಡೆಸುತ್ತಿರುವುದು ಅಭಿನಂದನೀಯ ಎಂದರು.

ಮೂಲ್ಕಿಯ ಬಿಜೆಪಿ ಮುಖಂಡ ಸುನಿಲ್ ಆಳ್ವ ಮಾತನಾಡಿ, ಕಟೀಲು ದೇವಳ ಮಾದರಿ ಗೋಶಾಲೆಯನ್ನು ನಡೆಸುತ್ತಿದೆ ಎಂದರು.ಅರ್ಚಕ ಗೋಪಾಲಕೃಷ್ಣ ಆಸ್ರಣ್ಣ ಗೋಪೂಜೆ ನಡೆಸಿದರು. ಗೋಶಾಲೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯನ್ನು ಗೌರವಿಸಲಾಯಿತು. ಕ್ಷೇತ್ರದ ಅರ್ಚಕರಾದ ವೆಂಕಟರಮಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಕೊಡೆತ್ತೂರುಗುತ್ತು ಕಿಶೋರ್ ಶೆಟ್ಟಿ, ವೇದವ್ಯಾಸ ಉಡುಪ, ಕೊಡೆತ್ತೂರುಗುತ್ತು ಗುತ್ತಿನಾರ್ ನಿತಿನ್ ಶೆಟ್ಟಿ, ಗೋಸೇವಕ ಸುಮನ್ ಶೆಟ್ಟಿ, ಈಶ್ವರ ಕಟೀಲ್, ಅಭಿಲಾಷ್ ಶೆಟ್ಟಿ, ದೇವದಾಸ ಮಲ್ಯ, ನಿಶಾಂತ್ ಶೆಟ್ಟಿ, ಲೋಕಯ್ಯ ಸಾಲ್ಯಾನ್, ತಿಮ್ಮಪ್ಪ ಕೋಟ್ಯಾನ್, ಸ್ವರಾಜ್ ಶೆಟ್ಟಿ, ಪುಷ್ಪರಾಜ ಚೌಟ, ದಾಮೋದರ ಶೆಟ್ಟಿ, ಸತೀಶ್ ಶೆಟ್ಟಿ ಎಕ್ಕಾರು, ಜ್ಯೋತಿ ಉಡುಪ, ಪ್ರಕಾಶ ಆಚಾರ್, ಸ್ಟ್ಯಾನಿ ಪಿಂಟೋ, ಯತೀಶ್ ಶೆಟ್ಟಿ, ತಾರಾನಾಥ ಶೆಟ್ಟಿ, ಗೋಶಾಲೆಯ ಸದಾನಂದ ಮತ್ತಿತರರಿದ್ದರು.

ಗೋವುಗಳಿಗೆ ದೋಸೆ, ಪಂಚಕಜ್ಜಾಯ, ಹಣ್ಣು, ಹಿಂಡಿ ನೀಡಲಾಯಿತು.