ಸಾರಾಂಶ
ಕೋಲಾರ ಜಿಲ್ಲೆಯಲ್ಲಿ ಜನವರಿ ೨೦೨೧ ರಿ೦ದ ಇಲ್ಲಿವರೆಗೆ ೧೩೪ ನಕಲಿ ವೈದ್ಯರ ಕ್ಲಿನಿಕ್‌ಗಳನ್ನು ಪತ್ತೆಹಚ್ಚಿದೆ, ಈ ಪೈಕಿ ೧೬ ಕ್ಲಿನಿಕ್‌ಗಳನ್ನು ಸೀಜ್ ಮಾಡಿದೆ, ೮೪ ಪಿ.ಸಿ.ಆರ್ ಪ್ರಕರಣಗಳು ದಾಖಲಾಗಿವೆ, ೧ ಪ್ರಕರಣವು ಎಫ್.ಐ.ಆರ್ ಆಗಿದೆ, ೭ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ ಮತ್ತು ಈವರೆಗೆ ೧೦೨ ಕ್ಲಿನಿಕ್‌ಗಳನ್ನು ಮುಚ್ಚಿಸಲಾಗಿದೆ,
ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯಲ್ಲಿ ನಕಲಿ ವೈದ್ಯರು ಅಕ್ರಮ ಕ್ಲಿನಿಕ್‌ಗಳನ್ನು ನಡೆಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ, ಬಂದಿದ್ದರೆ ಜಿಲ್ಲೆಯಲ್ಲಿ ಎಷ್ಟು ನಕಲಿ ವೈದ್ಯರನ್ನು ಹಾಗೂ ಅಕ್ರಮ ಕ್ಲಿನಿಕ್‌ಗಳನ್ನು ಸರ್ಕಾರ ಪತ್ತೆಹಚ್ಚಿದೆ. ಅದರಲ್ಲಿ ಎಷ್ಟು ಪ್ರಕರಣಗಳಲ್ಲಿ ಕ್ರಮ ತೆಗೆದುಕೊಂಡಿದೆ ಎಂದು ಬೆಳಗಾವಿ ಅಧಿವೇಶನದಲ್ಲಿ ಎಂಎಲ್ಸಿ ಇಂಚರ ಗೋವಿಂದರಾಜು ಆರೋಗ್ಯ ಸಚಿವರನ್ನು ಪ್ರಶ್ನಿಸಿದರು.
ನಕಲಿ ವೈದ್ಯರ ವಿರುದ್ಧ ಕ್ರಮಕೈಗೊಳ್ಳಲು ಸರ್ಕಾರ ಜಾರಿಗೊಳಿಸಿರುವ ಹೊಸ ಮಸೂದೆಯಂತೆ ಕಠಿಣ ಕ್ರಮಕೈಗೊಳ್ಳಲು ಸರ್ಕಾರಕ್ಕೆ ಇರುವ ತೊಂದರೆ ಏನು. ಕ್ಲಿನಿಕ್‌ಗಳನ್ನು ಪ್ರಾರಂಭಿಸಲು ಸರ್ಕಾರ ರೂಪಿಸಿರುವ ನೀತಿನಿಯಮಗಳೇನು, ನಿಯಮದ ವಿರುದ್ಧ ನಡೆಸುತ್ತಿರುವ ಕ್ಲಿನಿಕ್‌ಗಳ ಮೇಲೆ ಕ್ರಮತೆಗೆದುಕೊಳ್ಳಲು ಜಿಲ್ಲೆಯಲ್ಲಿ ಯಾವ ಅಧಿಕಾರಿಗಳಿಗೆ ಅಧಿಕಾರ ನೀಡಿದೆ ಎಂಬ ಕೇಳಿದರು.134 ನಕಲಿ ಕ್ಲಿನಿಕ್ ಪತ್ತೆ
ಇದಕ್ಕೆ ಸಚಿವರು ಉತ್ತರಿಸಿ, ಕೋಲಾರ ಜಿಲ್ಲೆಯಲ್ಲಿ ಜನವರಿ ೨೦೨೧ ರಿ೦ದ ಇಲ್ಲಿವರೆಗೆ ೧೩೪ ನಕಲಿ ವೈದ್ಯರ ಕ್ಲಿನಿಕ್‌ಗಳನ್ನು ಪತ್ತೆಹಚ್ಚಿದೆ, ಈ ಪೈಕಿ ೧೬ ಕ್ಲಿನಿಕ್‌ಗಳನ್ನು ಸೀಜ್ ಮಾಡಿದೆ, ೮೪ ಪಿ.ಸಿ.ಆರ್ ಪ್ರಕರಣಗಳು ದಾಖಲಾಗಿವೆ, ೧ ಪ್ರಕರಣವು ಎಫ್.ಐ.ಆರ್ ಆಗಿದೆ, ೭ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ ಮತ್ತು ಈವರೆಗೆ ೧೦೨ ಕ್ಲಿನಿಕ್‌ಗಳನ್ನು ಮುಚ್ಚಿಸಿ ಕ್ರಮಕೈಗೊಂಡಿದೆ.ಕೆ.ಪಿ.ಎಂ.ಇ ತಿದ್ದುಪಡಿ ಅಧಿನಿಯಮ ೨೦೧೭ ಸೆಕ್ಷನ್ ೫ ರಂತೆ ನೋಂದಣಿಗಾಗಿ ಅರ್ಜಿಸಲ್ಲಿಸಿ, ನಿಯಾಮಾನುಸಾರ ಕೆ.ಪಿ.ಎಂ.ಇ ನೋಂದಣಿ ಪ್ರಮಾಣಪತ್ರ ಪಡೆದು, ಖಾಸಗಿ ವೈದ್ಯಕೀಯ ಸಂಸ್ಥೆ ಪ್ರಾರಂಭಿಸಬಹುದು. ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಕ್ರಮಕೈಗೊಳ್ಳಲು, ಕೆ.ಪಿ.ಎಂ.ಇ ಅಧಿನಿಯಮ ೨೦೦೭, ಸೆಕ್ಷನ್ ೪ ರನ್ವಯ ನೊಂದಣಿ ಮತ್ತು ಕುಂದುಕೊರತೆ ಪ್ರಾಧಿಕಾರವಾಗಿ ಪ್ರತಿಯೊಂದು ಜಿಲ್ಲೆಯಲ್ಲಿ ಒಂದು ಸಮಿತಿಯನ್ನು ರಚಿಸಲಾಗಿದೆ ಎಂದು ಹ್ಳಿದರು.
ಈ ಸಮಿತಿಯ ಅಧ್ಯಕ ಡಿಸಿ ಮತ್ತು ಡಿಹೆಚ್‌ಓ ಹಾಗೂ ಸಮಿತಿಯ ಇತರೆ ಸದಸ್ಯರಾದ ಜಿಲ್ಲಾ ಆಯುಷ್ ಅಧಿಕಾರಿ, ಭಾರತೀಯ ವೈದ್ಯಕೀಯ ಓರ್ವ ಮಹಿಳಾ ಸಂಘದಿಂದ ಓರ್ವ ಸದಸ್ಯರು ಮತ್ತು ಓರ್ವ ಮಹಿಳಾ ಪ್ರತಿನಿಧಿಯನ್ನೊಳಗೊಂಡಿದೆ ಎಂದು ಉತ್ತರಿಸಿದರು.