ಲಯಾರ್ಥಿಗಳಿಗೆ ಉತ್ತಮ ಓದುವ ವಾತಾವರಣ ನಿರ್ಮಿಸಿ

| Published : May 11 2025, 01:22 AM IST

ಸಾರಾಂಶ

ನಿಲಯದ ಊಟೋಪಚಾರ ವ್ಯವಸ್ಥೆ, ಸ್ವಚ್ಛತೆ, ಶಿಸ್ತು ಈ ವಿಷಯಗಳ ಬಗ್ಗೆ ಯಾವುದೇ ರೀತಿಯ ಉದಾಸೀನತೆ ತೋರಿಸದೇ ಕರ್ತವ್ಯ ನಿರ್ವಹಿಸಬೇಕು. ನಿಲಯಗಳಲ್ಲಿ ಆಕಸ್ಮಿಕ ಅವಘಡಗಳು ಸಂಭವಿಸದ ಹಾಗೆ ಮುನ್ನೆಚ್ಚರಿಕೆಯನ್ನು ವಹಿಸಬೇಕು. ಪ್ರತಿ ಹಂತಗಳಲ್ಲೂ ಈ ಬಗ್ಗೆ ಪರಿವೀಕ್ಷಣೆಯನ್ನು ಮುಂದಿನ ಹಂತದ ಅಧಿಕಾರಿಗಳು ಮಾಡಬೇಕು ಎಂದು ವಿದ್ಯಾರ್ಥಿನಿಲಯಗಳಲ್ಲಿ ಪ್ರವೇಶ ಪಡೆಯುವ ನಿಲಯಾರ್ಥಿಗಳಿಗೆ ಉತ್ತಮವಾಗಿ ಓದುವ ವಾತಾವರಣವನ್ನು ನಿರ್ಮಿಸಿಕೊಡುವಲ್ಲಿ ನಿಲಯದ ಸಿಬ್ಬಂದಿಯ ಪಾತ್ರ ಬಹುಮುಖ್ಯ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ ಬಿ.ಆರ್‌. ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ವಿದ್ಯಾರ್ಥಿನಿಲಯಗಳಲ್ಲಿ ಪ್ರವೇಶ ಪಡೆಯುವ ನಿಲಯಾರ್ಥಿಗಳಿಗೆ ಉತ್ತಮವಾಗಿ ಓದುವ ವಾತಾವರಣವನ್ನು ನಿರ್ಮಿಸಿಕೊಡುವಲ್ಲಿ ನಿಲಯದ ಸಿಬ್ಬಂದಿಯ ಪಾತ್ರ ಬಹುಮುಖ್ಯ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ ಬಿ.ಆರ್‌. ಹೇಳಿದ್ದಾರೆ.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ವತಿಯಿಂದ ಇಲಾಖೆಯ ವಿದ್ಯಾರ್ಥಿನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಿಲಯ ಪಾಲಕರು, ನಿಲಯ ಮೇಲ್ವಿಚಾರಕರು, ಕಿರಿಯ ನಿಲಯ ಮೇಲ್ವಿಚಾರಕರು, ಅಡುಗೆಯವರು, ಅಡುಗೆ ಸಹಾಯಕರುಗಳು ಖಾಯಂ ಹಾಗೂ ಹೊರ ಸಂಪನ್ಮೂಲ ಸಿಬ್ಬಂದಿಗೆ ವಿದ್ಯಾರ್ಥಿನಿಲಯಗಳ ನಿರ್ವಹಣೆ ಕುರಿತು ಮೇ 7ರಿಂದ ಮೇ 9ರವರೆಗೆ ನಗರದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿರುವ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿಲಯದ ಊಟೋಪಚಾರ ವ್ಯವಸ್ಥೆ, ಸ್ವಚ್ಛತೆ, ಶಿಸ್ತು ಈ ವಿಷಯಗಳ ಬಗ್ಗೆ ಯಾವುದೇ ರೀತಿಯ ಉದಾಸೀನತೆ ತೋರಿಸದೇ ಕರ್ತವ್ಯ ನಿರ್ವಹಿಸಬೇಕು. ನಿಲಯಗಳಲ್ಲಿ ಆಕಸ್ಮಿಕ ಅವಘಡಗಳು ಸಂಭವಿಸದ ಹಾಗೆ ಮುನ್ನೆಚ್ಚರಿಕೆಯನ್ನು ವಹಿಸಬೇಕು. ಪ್ರತಿ ಹಂತಗಳಲ್ಲೂ ಈ ಬಗ್ಗೆ ಪರಿವೀಕ್ಷಣೆಯನ್ನು ಮುಂದಿನ ಹಂತದ ಅಧಿಕಾರಿಗಳು ಮಾಡಬೇಕು ಎಂದು ತಿಳಿಸಿದರು.

ಮೊದಲ ದಿನದ ತರಬೇತಿಯಲ್ಲಿ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಲು ೬ ಅವಧಿಗಳನ್ನು ನಿಗದಿಪಡಿಸಲಾಗಿದ್ದು, ಮೊದಲ ಅವಧಿಯಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಮಂಜುಳ ಕೆ.ಕೆ ಅವರು ಗುಣಮಟ್ಟದ ಆಹಾರ ಮತ್ತು ಪೌಷ್ಠಿಕ ಆಹಾರದ ಮಹತ್ವ ಮತ್ತು ಅವುಗಳನ್ನು ನಿಲಯದಲ್ಲಿ ವಿತರಿಸುವಲ್ಲಿ ಅಂತಹ ಪದಾರ್ಥಗಳನ್ನು ಬಳಸುವ ಕ್ರಮದ ಬಗ್ಗೆ ಹಾಗೂ ವೈಯಕ್ತಿಕ ಸ್ವಚ್ಛತೆ, ನಿಲಯದ ಸ್ವಚ್ಛತೆ, ಸಾಂಕ್ರಾಮಿಕ, ಅಸಾಂಕ್ರಾಮಿಕ ರೋಗಗಳು ಮತ್ತು ತಡೆಗಟ್ಟುವ ಕ್ರಮಗಳ ಬಗೆಗೆ ವಿವರಿಸಿದರು.

ಮುಂದಿನ ಅವಧಿಯಲ್ಲಿ ಗುಣಮಟ್ಟದ ಆಹಾರ ಪದಾರ್ಥಗಳ ಸರಬರಾಜು ಶುಚಿ ಮತ್ತು ರುಚಿಯಾದ ಆಹಾರ ತಯಾರಿಕೆ ಮತ್ತು ವಿತರಣೆ ಹಾಗೂ ಕಲಬೆರಕೆ ಆಹಾರ ಪದಾರ್ಥಗಳನ್ನು ಗುರುತಿಸುವಿಕೆ ಮತ್ತು ಕಲಬೆರಕೆ ಆಹಾರ ಪದಾರ್ಥ ಬಳಸುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಆಹಾರ ಸುರಕ್ಷತಾ ಅಧಿಕಾರಿಗಳಾದ ಬಸವೇಗೌಡ ಮತ್ತು ವಿನಯ್ ಅವರು ವಿವರಿಸಿದರು. ಅಡುಗೆ ತಯಾರಿಯಲ್ಲಿ ಆಹಾರ ಧಾನ್ಯಗಳ ಸಂಯೋಜನೆ ಬಗೆಗೆ ನಿಲಯ ಮೇಲ್ವಿಚಾರಕರಾದ ತ್ರಿವೇಣಿ ಅವರು ವಿವರವಾದ ಮಾಹಿತಿ ನೀಡಿದರು. ಅಗ್ನಿಶಾಮಕ ಅಧಿಕಾರಿಗಳಾದ ಶಫೀಕ್ ಅಹಮ್ಮದ್ ಅಗ್ನಿ ಅವಘಡಗಳ ತಡೆಯುವಿಕೆ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ವಿವರಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಕುಮಾರ್ ಎಂ, ಜಿಲ್ಲೆಯ ವಿವಿಧ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಾದ ಪ್ರತೀಪ ಎಸ್.ಕೆ., ಹರೀಶ್ ಕೆ., ರಾಜೇಶ್ ಚೌಹಾಣ್ ಹಾಜರಿದ್ದರು. ಸಕಲೇಶಪುರ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಾದ ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು.