ಸಾರಾಂಶ
ಚನ್ನಪಟ್ಟಣ: ಪ್ರತಿಯೊಬ್ಬ ವ್ಯಕ್ತಿಯ ಉಜ್ವಲ ಭವಿಷ್ಯ ನಿರ್ಮಿಸುವಲ್ಲಿ ಶಿಕ್ಷಣ ಮಹತ್ವದ ಪಾತ್ರ ವಹಿಸುತ್ತದೆ ಎಂದು ಸಾಹಿತಿ ವಿಜಯ್ ರಾಂಪುರ ತಿಳಿಸಿದರು.
ಚನ್ನಪಟ್ಟಣ: ಪ್ರತಿಯೊಬ್ಬ ವ್ಯಕ್ತಿಯ ಉಜ್ವಲ ಭವಿಷ್ಯ ನಿರ್ಮಿಸುವಲ್ಲಿ ಶಿಕ್ಷಣ ಮಹತ್ವದ ಪಾತ್ರ ವಹಿಸುತ್ತದೆ ಎಂದು ಸಾಹಿತಿ ವಿಜಯ್ ರಾಂಪುರ ತಿಳಿಸಿದರು.
ತಾಲೂಕಿನ ನೀಲಸಂದ್ರದ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ರಾಂಪುರದ ನೇಗಿಲಯೋಗಿ ಸಾಂಸ್ಕೃತಿಕ ಟ್ರಸ್ಟ್ ಏರ್ಪಡಿಸಿದ್ದ ಬಾಲ ಕಾರ್ಮಿಕ ಪದ್ಧತಿ ಕುರಿತು ಜಾಗೃತಿ ಮೂಡಿಸುವ ಬೀದಿ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೋಷಕರು ಮಕ್ಕಳ ಹಕ್ಕುಗಳಾದ ಬಾಲ್ಯವನ್ನು ಅನುಭವಿಸಲು, ಉತ್ತಮ ವಾತವರಣದಲ್ಲಿ ಜೀವಿಸುವ, ಶಿಕ್ಷಣ ಪಡೆಯುವ, ಕ್ರೀಡೆ, ಮನರಂಜನೆ ಹಾಗೂ ಇನ್ನಿತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಆಲೋಚಿಸಬೇಕಾಗಿದೆ ಎಂದರು.ಬಾಲ ಕಾರ್ಮಿಕ ಪದ್ಧತಿ ಇಂದಿನ ಆಧುನಿಕ ಯುಗದಲ್ಲೂ ಜೀವಂತವಾಗಿರುವುದು ವಿಷಾದನೀಯ. ಇಂದು ಮಕ್ಕಳ ಹಕ್ಕುಗಳನ್ನು ಕಸಿಯುವ ಘಟನೆಗಳು ಆಘಾತಕಾರಿ ಬೆಳವಣಿಗೆ. ಇದು ಮಕ್ಕಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ಬಗ್ಗೆ ಸಮಾಜ ಎಚ್ಚರಿಕೆ ವಹಿಸಬೇಕು. ಇದು ಸರ್ಕಾರದವಷ್ಟೇ ಅಲ್ಲ, ಸಮಾಜದ ಜವಾಬ್ದಾರಿಯೂ ಹೌದು. ಬಾಲ ಕಾರ್ಮಿಕ ಪದ್ಧತಿಯನ್ನು ಬುಡಮೇಲು ಮಾಡುವ ಮೂಲಕ ಸ್ವಸ್ಥ ಸಮಾಜ ರೂಪುಗೊಳ್ಳಲು ಸರ್ವರೂ ಕೈಜೋಡಿಸಬೇಕು ಎಂದರು.
ಮುಖ್ಯ ಶಿಕ್ಷಕ ಹಾಗೂ ಸಾಹಿತಿ ಎಲೆಕೇರಿ ಡಿ.ರಾಜಶೇಖರ್, ಹಿರಿಯ ಗಾಯಕ ಚೌ.ಪು. ಸ್ವಾಮಿ, ಶಿಕ್ಷಕಿ ತ್ರಿವೇಣಿ, ಮೋಳೆದೊಡ್ಡಿ ಸಿದ್ದರಾಜು, ಬೋಜಮ್ಮ ಹಾಜರಿದ್ದರು. ಕಾರ್ಮಿಕ ಅಧಿಕಾರಿಯಾಗಿ ವಿಜಯ್ ರಾಂಪುರ, ಶಿಕ್ಷಕರಾಗಿ ಚೌ.ಪು. ಸ್ವಾಮಿ, ಬಾಲ ಕಾರ್ಮಿಕನಾಗಿ ಸುಣ್ಣಘಟ್ಟ ಮೌನೀಶ್ ಗೌಡ, ಸೈಕಲ್ ಶಾಪ್ ಮಾಲೀಕರಾಗಿ ಸಿದ್ದರಾಜು ಅಭಿನಯಿಸಿದರು. ಜಾಗೃತಿ ಮೂಡಿಸುವ ಗೀತೆಗಳನ್ನು ಪ್ರಸ್ತುತಪಡಿಸಲಾಯಿತು.ಪೊಟೋ೧೮ಸಿಪಿಟಿ೨: ಚನ್ನಪಟ್ಟಣ ತಾಲೂಕಿನ ನೀಲಸಂದ್ರದ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಬಾಲ ಕಾರ್ಮಿಕ ಪದ್ಧತಿ ಕುರಿತಾದ ಜಾಗೃತಿ ಮೂಡಿಸುವ ಬೀದಿ ನಾಟಕ ಪ್ರದರ್ಶನ ನಡೆಯಿತು.