ಸ್ವಚ್ಛತೆಗೆ ಬಗ್ಗೆ ಅರಿವು ಮೂಡಿಸಿ: ವಸಂತಕುಮಾರಿ

| Published : Sep 20 2024, 01:33 AM IST

ಸಾರಾಂಶ

ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮಕ್ಕೆ ೧೦ ವರ್ಷ ಪೂರೈಸಿದ ಹಿನ್ನೆಲೆ ಸ್ವಚ್ಛತೆಯೇ ಸೇವೆ ೨೦೨೪ರ‌‌ ಅಭಿಯಾನದಡಿ "ಸ್ವಭಾವ ಸ್ವಚ್ಛತೆ ಸಂಸ್ಕಾರ ಸ್ವಚ್ಛತೆ " ಕಾರ್ಯಕ್ರಮಕ್ಕೆ ಪುರಸಭೆ ಅಧ್ಯಕ್ಷ ಕಿರಣ್‌ಗೌಡ ಚಾಲನೆ ನೀಡಿದರು

ಗುಂಡ್ಲುಪೇಟೆ: ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮಕ್ಕೆ ೧೦ ವರ್ಷ ಪೂರೈಸಿದ ಹಿನ್ನೆಲೆ ಸ್ವಚ್ಛತೆಯೇ ಸೇವೆ ೨೦೨೪ರ‌‌ ಅಭಿಯಾನದಡಿ "ಸ್ವಭಾವ ಸ್ವಚ್ಛತೆ ಸಂಸ್ಕಾರ ಸ್ವಚ್ಛತೆ " ಕಾರ್ಯಕ್ರಮಕ್ಕೆ ಪುರಸಭೆ ಅಧ್ಯಕ್ಷ ಕಿರಣ್‌ಗೌಡ ಚಾಲನೆ ನೀಡಿದರು.

ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಯಂದಿರ‌ ಹೆಸರಿನಲ್ಲಿ‌ ಗಿಡ ನೆಡುವ ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ಕೆ.ಪಿ. ವಸಂತಕುಮಾರಿ ಪ್ರಾರಂಭದಲ್ಲಿ ಸ್ವಚ್ಛತಾ ಪ್ರತಿಜ್ಞಾ ವಿಧಿ ಸ್ವೀಕರಿಸಿ ಮಾತನಾಡಿ, ಸ್ವಭಾವ ಸ್ವಚ್ಛತಾ ಸಂಸ್ಕಾರ ಸ್ವಚ್ಛತಾ ಅಭಿಯಾನ ೧೪ ದಿನಗಳ‌ ಕಾಲ ನಡೆಯಲಿದೆ ಎಂದರು.

ಸ್ವಚ್ಛತಾ ಕಿ ಭಾಗಿದಾರಿ: ಸ್ವಚ್ಛ ಭಾರತಕ್ಕಾಗಿ ಸಾರ್ವಜನಿಕ ಭಾಗವಹಿಸುವಿಕೆ, ಜಾಗೃತಿ ಮತ್ತು ವಕಾಲತ್ತು ಚಟುವಟಿಕೆಗಳು, ಸಂಪೂರ್ಣ ಸ್ವಚ್ಛತಾ-ಮೆಗಾ ಸ್ವಚ್ಛತೆ ಡ್ರೈವ್‌ಗಳು ಮತ್ತು ಕಠಿಣ ಮತ್ತು ಕೊಳಕು ತಾಣಗಳು ಮತ್ತು ಸಫಾಯಿ ಮಿತ್ರ ಆರೋಗ್ಯ ಸುರಕ್ಷಾ ಶಿಬಿರದಡಿ-ಆರೋಗ್ಯ ತಪಾಸಣೆ ಮತ್ತು ನೈರ್ಮಲ್ಯ ಕಾರ್ಮಿಕರ ಕಲ್ಯಾಣಕ್ಕಾಗಿ ಸೇವೆ, ಸಮುದಾಯ ಹಂತದಲ್ಲಿ ವಿವಿಧ ಕಾರ್ಯಕ್ರಮಗಳು‌ ಹಾಗೂ ಶಾಲಾ ಹಂತದಲ್ಲಿ ಸ್ವಚ್ಛತೆಯ ವಿಷಯಕ್ಕೆ ಸಂಬಂಧಿಸಿದಂತೆ ವಿವಿಧ ಸ್ಪರ್ಧೆ ಆಯೋಜಿಸುವ ಮೂಲಕ ಮಕ್ಕಳಿಗೆ ಸ್ವಚ್ಛತೆಯ ಅರಿವನ್ನು ಮೂಡಿಸುವ ಸಲುವಾಗಿ ಕಾರ್ಯಕ್ರಮ ರೂಪಿಸಲಾಗಿದೆ‌‌ ಎಂದರು.

ಪುರಸಭೆ ಸದಸ್ಯರಾದ ಅಣ್ಣಯ್ಯಸ್ವಾಮಿ,‌ ಮೊಹಮ್ಮದ್ ಇಲಿಯಾಸ್, ಗೌಡ್ರ ಮಧು, ಎನ್.ಕುಮಾರ್, ಮುಖಂಡರಾದ ಬಸವರಾಜು, ಸುರೇಶ್, ನಾರಾಯಣ ಸ್ವಾಮಿ‌, ಎಸ್‌ಡಿಎಂಸಿ ಅಧ್ಯಕ್ಷ ಮೋಹನ್, ಶಂಕರ್‌, ಸ್ವಯಂ ಸೇವಕರಾದ ತಾರಾ ನಾಗೇಂದ್ರ, ಮೂರ್ತಿ, ಪುರಸಭೆ ಸಿಬ್ಬಂದಿ ಇದ್ದರು.