ಸಾವಯವ ಕೃಷಿ ಬಗ್ಗೆ ಅರಿವು ಮೂಡಿಸಿ: ಎಡನೀರುಶ್ರೀ

| Published : Jun 30 2024, 12:54 AM IST

ಸಾರಾಂಶ

ಈ ಹಲಸು-ಮಾವು ಮೇಳದಲ್ಲಿ ವಿವಿಧ ಬಗೆಯ ತಳಿಗಳು, ಅವುಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಭಾನುವಾರ ಮಕ್ತಾಯಗೊಳ್ಳಲಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಹಿರಿಯರು ಅನುಸರಿಸಿದ ಆಹಾರ ಪದ್ಧತಿಯಿಂದ ವಿಮುಖರಾದ ಕಾರಣ ನಾವಿಂದು ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಆಹಾರ ಸ್ವಾವಲಂಬನೆಯಿಂದ ಆರೋಗ್ಯಕರ ಬದುಕು ಸಾಧ್ಯ ಎಂದು ಕಾಸರಗೋಡಿನ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಹೇಳಿದರು.

ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಸಾವಯವ ಕೃಷಿಕ ಗ್ರಾಹಕ ಬಳಗದ ಸಹಯೋಗದಲ್ಲಿ ಕದ್ರಿಕಂಬಳದ ಮುಂಜು ಪ್ರಾಸಾದ ಆವರಣದಲ್ಲಿ ಶನಿವಾರ ಆರಂಭವಾದ ಎರಡು ದಿನಗಳ ಹಲಸು ಮಾವು ಮೇಳದ ಉದ್ಘಾಟನಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ಸಾವಯವ ಕೃಷಿಯ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯಬೇಕು. ನಗರ ಪ್ರದೇಶದಲ್ಲಿ ಹಲವು-ಮಾವು ಕೃಷಿಯ ಬಗ್ಗೆ ಉತ್ತೇಜನ, ಉತ್ಸಾಹ ಕಂಡುಬರುತ್ತಿರುವುದು ಸಂತಸದ ಸಂಗತಿ ಎಂದರು.ಹಿರಿಯ ಸಾಮಾಜಿಕ ಕಾರ್ಯಕರ್ತೆ ಆರೂರು ಲಕ್ಷ್ಮೀ ರಾವ್ ಮೇಳ ಉದ್ಘಾಟಿಸಿದರು. ಹೋಟೆಲ್ ಉದ್ಯಮಿ ವೆಂಕಟರಮಣ ಪೋತಿ ಅವರು ಮಾರಾಟ ಮಳಿಗೆ ಉದ್ಘಾಟಿಸಿದರು. ಕಟೀಲು ಕ್ಷೇತ್ರದ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಶುಭ ಹಾರೈಸಿದರು.ಕೃಷಿ ತಜ್ಞ ಶ್ರೀ ಪಡ್ರೆ ಅವರು ಸಾವಯವ ಜಾಗೃತಿ ಸಂದೇಶ ನೀಡಿದರು. ಡಾ.ಮುರಳೀಧರ ಯಡಿಯಾಳ್ ಅವರು ಹಲಸು ಮತ್ತು ಮಾವಿನ ಬಗ್ಗೆ ವೈಜ್ಞಾನಿಕ ವಿಶ್ಲೇಷಣೆ ನೀಡಿದರು.ಪಾಲಿಕೆ ಸದಸ್ಯೆ ಶಕೀಲಾ ಕಾವ, ಶಾರದಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್, ಪ್ರಮುಖರಾದ ಶರವು ರಾಘವೇಂದ್ರ ಶಾಸ್ತ್ರಿ, ಡಾ.ಜೀವರಾಜ್ ಸೊರಕೆ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಪ್ರದೀಪ್ ಕುಮಾರ್ ಕಲ್ಕೂರ ಸ್ವಾಗತಿಸಿದರು. ಸುಧಾಕರ ರಾವ್ ಪೇಜಾವರ ವಂದಿಸಿದರು. ದಯಾನಂದ ಕಟೀಲ್ ನಿರೂಪಿಸಿದರು.ಈ ಹಲಸು-ಮಾವು ಮೇಳದಲ್ಲಿ ವಿವಿಧ ಬಗೆಯ ತಳಿಗಳು, ಅವುಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಭಾನುವಾರ ಮಕ್ತಾಯಗೊಳ್ಳಲಿದೆ.