ವಿದ್ಯಾರ್ಥಿಗಳಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸಿ

| Published : Nov 11 2024, 01:03 AM IST

ಸಾರಾಂಶ

ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮಹತ್ವ ಅದರ ಶಕ್ತಿ ಸಾಮರ್ಥ್ಯಗಳ ಬಗ್ಗೆ ತಿಳಿಸಿ ಕೊಡುವ ಕಾರ್ಯ ಶಿಕ್ಷಕರು ಮಾಡಬೇಕು

ಲಕ್ಷ್ಮೇಶ್ವರ: ಇಂದಿನ ವಿದ್ಯಾರ್ಥಿಗಳೇ ಮುಂದಿನ ಮತದಾರರು, ಆದ್ದರಿಂದ ಅವರಲ್ಲಿ ಮತದಾನದ ಬಗ್ಗೆ ಹಾಗೂ ಪ್ರಜಾಪ್ರಭುತ್ವ ಬಗ್ಗೆ ಅರಿವು ಮೂಡಿಸಲು ಇಂತಹ ಸ್ಪರ್ಧೆಗಳು ಸಹಕಾರಿ ಎಂದು ಲಕ್ಷ್ಮೇಶ್ವರ ತಾಲೂಕಿನ ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಎಂ.ಬಿ. ಹೊಸಮನಿ ಹೇಳಿದರು.

ಶನಿವಾರ ಮತದಾರರ ದಿನಾಚರಣೆ ಅಂಗವಾಗಿ ಸ್ವೀಪ್ ಸಮಿತಿ ವತಿಯಿಂದ ಶಿರಹಟ್ಟಿ ಬ್ಲಾಕ್ ಮಟ್ಟದ ಪ್ರಬಂಧ, ಪೋಸ್ಟರ್ ಡಿಸೈನ್ ಹಾಗೂ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ. 4 ರಲ್ಲಿ ಶಿರಹಟ್ಟಿ ಬ್ಲಾಕ್ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಸ್ವೀಪ್ ಸಮಿತಿ ಶಿರಹಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಶಿರಹಟ್ಟಿ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಶಿರಹಟ್ಟಿ ಸಹಯೋಗದಲ್ಲಿ ಏರ್ಪಡಿಸಲಾಗಿತ್ತು.

ಮತದಾರ ಜಾಗೃತರಾದಲ್ಲಿ ಮಾತ್ರ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ. ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮಹತ್ವ ಅದರ ಶಕ್ತಿ ಸಾಮರ್ಥ್ಯಗಳ ಬಗ್ಗೆ ತಿಳಿಸಿ ಕೊಡುವ ಕಾರ್ಯ ಶಿಕ್ಷಕರು ಮಾಡಬೇಕು ಎಂದು ಹೇಳಿದರು.

ಈ ವೇಳೆ ಬಿ.ಆರ್.ಪಿ ಈಶ್ವರ್ ಮೆಡ್ಲೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ಪರ್ಧೆಯ ರೂಪರೇಷಗಳ ಕುರಿತು ವಿದ್ಯಾರ್ಥಿಗಳಿಗೆ ವಿವರಣೆ ನೀಡಿದರು. ಇಂತಹ ಸ್ಪರ್ಧೆಗಳಿಂದ ಮಕ್ಕಳಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಸಹಕಾರಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾರಿ ಪ್ರಧಾನ ಗುರು ಆರ್.ಬಿ. ಜೋಶಿ ವಹಿಸಿದ್ದರು. ಎಂ.ಆರ್.ಹಿರೇಮಠ, ಆರ್.ಬಿ. ಕುಲಕರ್ಣಿ, ಶಶಿಕಲಾ ಇದ್ದರು. ಉರ್ದು ಸಿ.ಆರ್.ಪಿ ಎನ್.ಎ.ಮುಲ್ಲಾ ಸ್ವಾಗತಿಸಿದರು. ಸಿ.ಆರ್.ಪಿ ಜೆ.ಎಸ್. ಗಾಯಕವಾಡ ಪ್ರಾರ್ಥಿಸಿದರು. ಎನ್.ಎನ್. ಸಾವಿರ ಕುರಿ ವಂದಿಸಿದರು, ಉಮೇಶ ನೇಕಾರ ಕಾರ್ಯಕ್ರಮ ನಿರೂಪಿಸಿದರು. ಸುಮಾರು 25 ಶಾಲೆಗಳ 70 ಕ್ಕೂ ವಿದ್ಯಾರ್ಥಿಗಳು, ಶಿಕ್ಷಕರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ರಸಪ್ರಶ್ನೆ ಸ್ಪರ್ಧೆ:

ಪ್ರಥಮ ಸ್ಥಾನ: ಆಕ್ಸ್ಫರ್ಡ್ ಸ್ಕೂಲ್ ಲಕ್ಷ್ಮೇಶ್ವರ, ಸಿಂಚನ ಕಟ್ಟೆಣ್ಣನವರ, ಆಕಾಂಕ್ಷ ಪಾಟೀಲ

ದ್ವಿತೀಯ ಸ್ಥಾನ: ಎಸ್.ಎಸ್.ಹೈಸ್ಕೂಲ್ ಹೆಬ್ಬಾಳ, ಕಾರ್ತಿಕರೆಡ್ಡಿ ಕಾಮರೆಡ್ಡಿ, ಆಕಾಶ ಅಂಗಡಿ

ತೃತೀಯ ಸ್ಥಾನ: ಎನ್‍ಜಿಪಿ ಸರ್ಕಾರಿ ಪ್ರೌಢಶಾಲೆ ಮಾಡಳ್ಳಿ, ವೀರನಗೌಡ ಪಾಟೀಲ, ವಿಕಾಸ ಮಜ್ಜಿಗುಡ್ಡ

ಪ್ರಬಂಧ ಸ್ಪರ್ಧೆ(ಕನ್ನಡ ಮಾಧ್ಯಮ):

ಪ್ರಥಮ ಸ್ಥಾನ, ಭಾಗ್ಯ ವಡವಿ, ಸರ್ಕಾರಿ ಪ್ರೌಢಶಾಲೆ ಬಟ್ಟೂರು

ದ್ವಿತೀಯ ಸ್ಥಾನ: ಸಹನಾ ಮೇಟಿ, ಸರ್ಕಾರಿ ಪ್ರೌಢಶಾಲೆ ಹುಲ್ಲೂರು

ತೃತೀಯ ಸ್ಥಾನ: ಮಧುಮತಿ ಕೂಬಿಹಾಳ, ಸರ್ಕಾರಿ ಪ್ರೌಢಶಾಲೆ ಗೊಜನೂರು.

ಪ್ರಬಂಧ ಸ್ಪರ್ಧೆ(ಆಂಗ್ಲ ಮಾಧ್ಯಮ):

ಪ್ರಥಮ ಸ್ಥಾನ: ಶ್ರೇಯಾ ಸುಲಾಖೆ, ಎಸ್ ಟಿ ಪಿಎಂಬಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಲಕ್ಷ್ಮೇಶ್ವರ

ದ್ವಿತೀಯ ಸ್ಥಾನ: ಸುಶ್ಮಿತಾ ಯಲುವಿಗಿ, ಆಕ್ಸ್ಫರ್ಡ್ ಸ್ಕೂಲ್ ಲಕ್ಷ್ಮೇಶ್ವರ

ತೃತೀಯ ಸ್ಥಾನ: ಈಶ್ವರಿ ಕಟಗಿ,ಫೀನಿಕ್ಸ್ ಇಂಟರ್ನ್ಯಾಷನಲ್ ಸ್ಕೂಲ್ ಲಕ್ಷ್ಮೇಶ್ವರ

ಚಿತ್ರಕಲಾ ಸ್ಪರ್ಧೆ

ಪ್ರಥಮ ಸ್ಥಾನ: ಖದೀಜಾ ಸೂರಣಗಿ, ಎಸ್ ಟಿಪಿಎಂಬಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಲಕ್ಷ್ಮೇಶ್ವರ

ದ್ವಿತೀಯ ಸ್ಥಾನ: ಭಾಗ್ಯ ಮಾಡಳ್ಳಿ, ಸರ್ಕಾರಿ ಪ್ರೌಢಶಾಲೆ ಗೊಜನೂರು

ತೃತೀಯ ಸ್ಥಾನ: ಕವನಾ ಅಂಗಡಿ, ಫೀನಿಕ್ಸ್ ಇಂಟರ್ನ್ಯಾಷನಲ್ ಸ್ಕೂಲ್ ಲಕ್ಷ್ಮೇಶ್ವರ