ಕ್ರೆಡಿಟ್ ಕಾರ್ಡ್‌ ವಂಚನೆ: ಹಣ ದೋಚಿದ್ದ ಆರೋಪಿ ಬಂಧನ

| Published : Mar 15 2024, 01:16 AM IST

ಸಾರಾಂಶ

ವ್ಯಕ್ತಿಯೊಬ್ಬರ ಬಳಿ ಇದ್ದ ಹಳೆಯ ಕ್ರೆಡಿಟ್ ಕಾರ್ಡ್‌ ಗಳನ್ನು ಹೊಸಕಾರ್ಡ ಮಾಡಿಕೊಡುವುದಾಗಿ ನಂಬಿಸಿ ೩.೨೯ ಲಕ್ಷ ಹಣ ದೋಚಿದ ಆರೋಪಿಯನ್ನು ಬೀರೂರು ಪೊಲೀಸರು ಪತ್ತೆಹಚ್ಚಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಬೀರೂರು ಪೋಲೀಸರ ಯಶಸ್ವಿ ಕಾರ‍್ಯಾಚರಣೆಕನ್ನಡಪ್ರಭ ವಾರ್ತೆ, ಬೀರೂರು

ವ್ಯಕ್ತಿಯೊಬ್ಬರ ಬಳಿ ಇದ್ದ ಹಳೆಯ ಕ್ರೆಡಿಟ್ ಕಾರ್ಡ್‌ ಗಳನ್ನು ಹೊಸಕಾರ್ಡ ಮಾಡಿಕೊಡುವುದಾಗಿ ನಂಬಿಸಿ ೩.೨೯ ಲಕ್ಷ ಹಣ ದೋಚಿದ ಆರೋಪಿಯನ್ನು ಬೀರೂರು ಪೊಲೀಸರು ಪತ್ತೆಹಚ್ಚಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ತಾಲೂಕಿನ ಹಿರೇಬಳ್ಳೇಕೆರೆ ಗ್ರಾಮದ ಪ್ರತಾಪ್ ಬಂಧಿತ ಆರೋಪಿಯಾಗಿದ್ದು, ಹೊಗರೇಹಳ್ಳಿ ಗ್ರಾಮದ ಪ್ರದೀಪ್ ಎಂಬುವವರಿಗೆ ೨೦೨೩ರ ಸಾಲಿನಲ್ಲಿ ಆಕಾರ ಕ್ಯಾಪಿಟಲ್ ಬ್ಯಾಂಕ್ ಹೆಸರಿನಲ್ಲಿ ದೂರವಾಣಿ ಮೂಲಕ ಸಂಪರ್ಕಿಸಿ ಅವರ ಬಳಿ ಇದ್ದ ೪ ಕ್ರೆಡಿಟ್ ಕಾರ್ಡ್‌ ಗಳ ಬದಲಾಗಿ ಹೊಸ ಕ್ರೆಡಿಟ್ ಕಾರ್ಡ್‌ಗಳನ್ನು ಕೊಡುತ್ತೇವೆಂದು ನಂಬಿಸಿ ೩.೨೯ ಲಕ್ಷ ಹಣ ವರ್ಗಾವಣೆ ಮಾಡಿಕೊಂಡಿದ್ದು, ಈ ಬಗ್ಗೆ ಬೀರೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಆರೋಪಿ ಪತ್ತೆಗಾಗಿ ವಿವಿಧ ಆಯಾಮಗಳಲ್ಲಿ ಡಿವೈಎಸ್ಪಿ ಹಾಲಮೂರ್ತಿ ರಾವ್ ಮಾರ್ಗ ದರ್ಶನದೊಂದಿಗೆ ಮಾಹಿತಿ ಕಲೆಹಾಕಿದ ಬೀರೂರು ಪೊಲೀಸರು ಆರೋಪಿಯನ್ನು ಖಚಿತ ಮಾಹಿತಿಯ ಮೇರೆಗೆ ವಶಕ್ಕೆ ಪಡೆದು ಪ್ರಕರಣದ ವಿಚಾರಣೆ ನಡೆಸಿದ್ದಾರೆ. ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡ ಆರೋಪಿಯಿಂದ ೧ ಲಕ್ಷ ನಗದು ಹಣ ವಶ ಪಡಿಸಿಕೊಂಡಿದ್ದಾರೆ.

ತನಿಖೆ ಕಾರ‍್ಯಾಚರಣೆಯಲ್ಲಿ ಬೀರೂರು ಸಿಪಿಐ ಎಸ್.ಎನ್. ಶ್ರೀಕಾಂತ್, ಪಿಎಸೈ ಬಿ.ಆರ್. ಸಜಿತ್‌ಕುಮಾರ್, ಸಿಬ್ಬಂದಿ ಡಿ.ವಿ.ಹೇಮಂತ್‌ಕುಮಾರ್, ಬಿ.ಪಿ.ಕೃಷ್ಣಮೂರ್ತಿ, ವಿ.ಟಿ. ಶಿವಕುಮಾರ್, ರಾಜಪ್ಪ ತಂಡದಲ್ಲಿದ್ದರು.

೧೪ ಬೀರೂರು ೪

ಬೀರೂರು ಪೊಲೀಸ್ ಠಾಣೆ ಮುಂಭಾಗದಲ್ಲಿ ವ್ಯಕ್ತಿಯೊಬ್ಬರ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ ಹಣ ದೋಚಿದ್ದ ಆರೋಪಿಯಿಂದ ೧ಲಕ್ಷ ನಗದನ್ನು ವಶಪಡಿಸಿಕೊಂಡಿರುವುದು. ಪೊಲೀಸ್ ವೃತ್ತ ನಿರೀಕ್ಷಕ ಶ್ರೀಕಾಂತ್, ಪಿ. ಎಸ್. ಐ ಸಚಿತ್ ಕುಮಾರ್, ಅಪರಾಧ ವಿಭಾಗದ ಪೇದೆಗಳಾದ ಡಿ.ವಿ.ಹೇಮಂತ್‌ಕುಮಾರ್, ಬಿ.ಪಿ.ಕೃಷ್ಣಮೂರ್ತಿ, ವಿ.ಟಿ. ಶಿವಕುಮಾರ್, ರಾಜಪ್ಪ ತಂಡದಲ್ಲಿದ್ದರು.