ಸಾರಾಂಶ
ಹನೂರು: ಪಟ್ಟಣದ ಮಹದೇಶ್ವರ ಕ್ರೀಡಾಂಗಣದಲ್ಲಿ 40 ವರ್ಷ ಮೇಲ್ಪಟ್ಟವರಿಗೆ ಲೆಜೆಂಡ್ಸ್ ಕ್ರಿಕೆಟ್ ಟೂರ್ನಿಯನ್ನು ಆಯೋಜನೆ ಮಾಡಲಾಗಿದ್ದು ವಿವೇಕಾನಂದ ಪಿಯು ಕಾಲೇಜಿನ ಪ್ರಾಂಶುಪಾಲ ಮಧುಸೂದನ್ ಪಂದ್ಯಾವಳಿಗೆ ಚಾಲನೆ ನೀಡಿದರು.ಈ ವೇಳೆ ಪಂದ್ಯಾವಳಿ ಉದ್ದೇಶಿಸಿ ಮಾತನಾಡಿದ ಅವರು, ಕ್ರೀಡೆ ಎಂದರೆ ಕೇವಲ ದೈಹಿಕ ಚಟುವಟಿಕೆಯಲ್ಲಿ ಭಾಗವಹಿಸುವುದು ಮಾತ್ರವಲ್ಲದೆ ಇದು ವಾಸ್ತವದಲ್ಲಿ, ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಮೂಲಕ ಆರೋಗ್ಯ ವೃದ್ಧಿಸಲು ತಮ್ಮ ಸಾಮಾಜಿಕ ಕೌಶಲ್ಯಗಳನ್ನು ಹೆಚ್ಚಿಸಲು, ಸಾಂಸ್ಕೃತಿಕ ಮೌಲ್ಯಗಳನ್ನು ಬಲಪಡಿಸಲು ಮತ್ತು ಜನರನ್ನು ಒಟ್ಟುಗೂಡಿಸುವ ಕೆಲಸ ಮಾಡುತ್ತದೆ. ಹಾಗೂ ನಿರ್ಣಾಯಕ ಮೌಲ್ಯಗಳು ಮತ್ತು ಸಾಮಾಜಿಕ ಕೌಶಲ್ಯಗಳನ್ನು ಸಹ ತುಂಬುವುದರ ಜೊತೆಗೆ ಜನರನ್ನು ಒಟ್ಟುಗೂಡಿಸುತ್ತದೆ. ಈ ನಿಟ್ಟಿನಲ್ಲಿ ಹನೂರಿನ ಹಳೆಯ ಕೆಲ ಕ್ರಿಕೆಟ್ ಆಟಗಾರರು ವಿದೇಶದಲ್ಲಿದ್ದರೂ ಕೂಡ ತಮ್ಮ ಕಾರ್ಯ ಒತ್ತಡಗಳನ್ನು ಬದಿಗೊತ್ತಿ ಮತ್ತೆ ಬ್ಯಾಟ್ ಬಾಲ್ ಹಿಡಿದು ಹಳೆಯ ನೆನಪುಗಳನ್ನು ಮೆಲಕು ಹಾಕುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಈ ವೇಳೆ ಹನೂರಿನ ಹಿರಿಯ ಕ್ರಿಕೆಟ್ ಪಟುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಯಳಂದೂರು ಪದವಿ ಕಾಲೇಜಿನ ಪ್ರಾಂಶುಪಾಲ ವಿಜಯ್, ಪಪಂ ಸದಸ್ಯರಾದ ಹರೀಶ್, ಆನಂದ್ ಹನೂರು ತಾಲೂಕು ಕ್ರಿಕೆಟ್ ಕ್ಲಬ್ ಗೌರವ ಅದ್ಯಕ್ಷ ಮನ್ಸೂರ್, ಹಿರಿಯ ಮುಖಂಡರಾದ ಮಂಜೇಶ್ ನಾಗೇಂದ್ರ ಸೋಮಶೇಖರ್, ಪೊಲೀಸ್ ಪೇದೆ ನಿಂಗರಾಜು,ಸುರೇಶ್, ಶಿಕ್ಷಕರಾದ ಅಶೋಕ್ ವೆಂಕಟೇಶ್, ಸತೀಶ್ ಶ್ರೀನಿವಾಸ್ ನಾಯ್ಡು ರಿಯಾಜ್, ರುಹುಲ್ಲಾ ಚಂದ್ರು, ಕುಮಾರ್, ಶಶಿ ನಾಗರಾಜು ಸೇರಿದಂತೆ ಹಲವರು ಹಾಜರಿದ್ದರು.