ಕನ್ನಡಪ್ರಭ ವಾರ್ತೆ ಹಲಗೂರು
ಸಮೀಪದ ತೊರೆಕಾಡನಹಳ್ಳಿ-ಪುರುದೊಡ್ಡಿ ಗ್ರಾಮಗಳ ಮಧ್ಯಭಾಗದಲ್ಲಿರುವ ಶಿಂಷಾ ನದಿ ಸೇತುವೆ ಕೆಳಭಾಗ ಶನಿವಾರ ಸಂಜೆ ಮೊಸಳೆ ಮರಿ ಕಾಣಿಸಿಕೊಂಡಿದೆ.ವಿಷಯ ತಿಳಿದ ಅರಣ್ಯಾಧಿಕಾರಿ ಆರ್.ಎಫ್.ಗವಿಯಪ್ಪ ಅವರು ರೈತರಿಗೆ ನಿಮ್ಮ ದನ ಕರುಗಳನ್ನು ಶಿಂಷಾನದಿಯಲ್ಲಿ ನೀರು ಕುಡಿಸಲು ಹೋದಾಗ ಎಚ್ಚರಿಕೆಯಂದಿರಿರುವಂತೆ ನದಿಯಲ್ಲಿ ಸ್ನಾನ, ಬಟ್ಟೆ ತೊಳೆಯಲು ಹೋಗದಂತೆ ಮನವಿ ಮಾಡಿದರು.
ಮೊಸಳೆಮರಿ ಕಾಣಿಸಿಕೊಂಡಿರುವುದರಿಂದ ಅರಣ್ಯ ಇಲಾಖೆ ಗಸ್ತು ವನಪಾಲಕ ಕೃಷ್ಣ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪುರುದೊಡ್ಡಿ ಗ್ರಾಮದಲ್ಲಿ ಸಾರ್ವಜನಿಕರನ್ನು ಕುರಿತು ನಮ್ಮ ಮೇಲಿನ ಅಧಿಕಾರಿಗಳು ರೈತರಿಗೆ ಶಿಂಷಾನದಿಯಲ್ಲಿ ಮೊಸಳೆ ಇರುವುದನ್ನು ತಿಳಿಸಿ ಅವರಿಗೆ ಎಚ್ಚರಿಕೆಯಿಂದ ಇರುವಂತೆ ತಿಳಿಸಿದರು.ಬಿಸಿಲಿನ ಹೊತ್ತಿನಲ್ಲಿ ಅವು ನದಿ ದಡದಲ್ಲಿ ಹಾಗೂ ಮರಳಿನ ಮೇಲೆ, ಬಂಡೆ ಮೇಲೆ ಬರುತ್ತವೆ. ಅದನ್ನು ಸೂಕ್ಷ್ಮವಾಗಿ ಗಮನಿಸಬೇಕು ನೀವುಗಳು ಸಹ ಎಚ್ಚರಿಕೆಯಿಂದ ಇರಬೇಕು ಎಂದು ರೈತರಲ್ಲಿ ಜಾಗೃತಿ ಮೂಡಿಸಿದರು.
ಪುರದೊಡ್ಡಿ ಗ್ರಾಮದ ವಿನೋದ್ ಮಾತನಾಡಿ, ನಾನು ಚಿಕ್ಕವಯಸ್ಸಿನಿಂದಲೂ ಶಿಂಷಾನದಿಯಲ್ಲಿ
ಮೊಸಳೆ ಇರುವುದನ್ನು ನೋಡಿರಲಿಲ್ಲ. ಆದರೆ, ಇತ್ತೀಚೆಗೆ ಮೇಲ್ಬಾಗದಲ್ಲಿ ಮಳೆ ಆಗಿರುವುದರಿಂದ ಮಳೆ ನೀರಿನ ಮುಖಾಂತರ ಇಲ್ಲಿ ಮೊಸಳೆ ಕಾಣಿಸಿಕೊಂಡಿದೆ ಎಂದು ಅವರ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ವೇಳೆ ಪುರುದೊಡ್ಡಿ ಗ್ರಾಮದ ವಿನೋದ್, ಯೋಗೇಶ, ಕುಮಾರ್, ಆರ್ ಬಸವರಾಜು, ಶಿವಣ್ಣ , ಉಮೇಶ, ಸೇರಿದಂತೆ ಇತರರು ಇದ್ದರು.ಜಿಂಕೆ ಮರಿ ನುಂಗಿದ ಭಾರಿ ಗಾತ್ರದ ಹೆಬ್ಬಾವು
ಮಳವಳ್ಳಿ: ತಾಲೂಕಿನ ನೆಟ್ಕಲ್ ಬಳಿಯ ಬೆಂಗಳೂರು ಜಲಮಂಡಳಿಯ ನೀರು ಸರಬರಾಜು ಮಾಡುವ ಪೈಪ್ ಲೈನ್ ಅಂಚಿನ ಕಾಡಿನಲ್ಲಿ ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದೆ. ಹೆಬ್ಬಾವು ಜಿಂಕೆಯೊಂದನ್ನು ನುಂಗಿರುವ ದೃಶ್ಯವನ್ನು ಸ್ಥಳೀಯ ಯುವಕರು ಮೊಬೈಲ್ ಸೆರೆ ಹಿಡಿದಿದ್ದಾರೆ.