ಸಾರಾಂಶ
ಇತ್ತೀಚೆಗೆ ತಾಲೂಕಿನಾದ್ಯಾಂತ ಸುರಿದ ಭಾರಿ ಮಳೆಗೆ ರೈತರು ಬೆಳೆದಿರುವ ವಿವಿಧ ಬೆಳೆಗಳು ಹಾನಿಯಾಗಿದ್ದು, ಸರ್ಕಾರ ಶೀಘ್ರ ರೈತರಿಗೆ ಪರಿಹಾರ ವಿತರಿಸಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೂರಾರು ಪದಾಧಿಕಾರಿಗಳು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ ಎಂ.ಬಸವರಾಜ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಹುಣಸಗಿ
ಇತ್ತೀಚೆಗೆ ತಾಲೂಕಿನಾದ್ಯಾಂತ ಸುರಿದ ಭಾರಿ ಮಳೆಗೆ ರೈತರು ಬೆಳೆದಿರುವ ವಿವಿಧ ಬೆಳೆಗಳು ಹಾನಿಯಾಗಿದ್ದು, ಸರ್ಕಾರ ಶೀಘ್ರ ರೈತರಿಗೆ ಪರಿಹಾರ ವಿತರಿಸಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೂರಾರು ಪದಾಧಿಕಾರಿಗಳು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ ಎಂ.ಬಸವರಾಜ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಸಮಿತಿಯ ರಾಜ್ಯ ಪ್ರಧಾನ ಸಂಚಾಲಕ ನಾಗಯ್ಯಸ್ವಾಮಿ ದೇಸಾಯಿಗುರು ಹುಣಸಗಿ ಮಾತನಾಡಿ, 2025-26ನೇ ಸಾಲಿನಲ್ಲಿ, ಇತ್ತೀಚೆಗೆ ಸುರಿದ ಭಾರಿ ಮಳೆಗೆ ಹುಣಸಗಿ ತಾಲೂಕಿನ ರೈತರು ಬೆಳೆದ ವಿವಿಧ ಬೆಳೆಗಳಾದ ಹತ್ತಿ ತೊಗರಿ, ಆಲಸಂದಿ, ಹೆಸರು ಸಜ್ಜೆ ಹಾಗೂ ಇನ್ನಿತರ ಬೆಳೆಗಳು ಮಳೆಗೆ ಹಾನಿಗೊಳಗಾಗಿದ್ದು ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಪ್ರಸ್ತುತ ರೈತರು ಬೆಳೆದಿರುವ ಬೆಳೆ ಮಳೆಗೆ ಸಾಕಷ್ಟು ಪ್ರಮಾಣದಲ್ಲಿ ಬೆಳೆಗಳು ಹಾನಿಯಾಗಿದ್ದು, ಪ್ರತಿ ಎಕರೆಗೆ ಸಾವಿರಾರು ರುಪಾಯಿಗಳ ಸಾಲ ಮಾಡಿ ಉತ್ತಮ ಬೆಳೆ ನಿರೀಕ್ಷೆಯಲ್ಲಿರುವ ರೈತರಿಗೆ ಮಳೆಯಿಂದ ಎಲ್ಲಾ ಬೆಳೆಗಳು ಹಾನಿಯಾಗಿವೆ. ಕಂದಾಯ, ಕೃಷಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಹಾನಿಯಾದ ಸಂಪೂರ್ಣ ಬೆಳೆಗಳ ಸಮೀಕ್ಷೆ ಮಾಡಿ ಶೀಘ್ರ ಪರಿಹಾರ ವಿತರಿಸಬೇಕು ಎಂದು ಒತ್ತಾಯಿಸಿದರು.ಸಹಕಾರ ಸಂಘಗಳಿಂದ ಪಡೆದ ರೈತರ ಸಾಲಮನ್ನಾ, ರೈತರ ಜಮೀನುಗಳಿಗೆ ನಿರಂತರ ವಿದ್ಯುತ್ ಪೂರೈಸುವುದು, ಗ್ರಾಮೀಣ ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ದುರಸ್ತಿಗೊಳಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಲಾಯಿತು.
ಮಹೇಶಗೌಡ ಸುಬೇದಾರ, ರಾಜಶೇಖರ ದೇಸಾಯಿ, ಸಂಗೀತಾ ರಡ್ಡಿ ಶಹಾಪೂರ, ಶಂಕರ ಜಾಧವ, ಸಿದ್ದು ಮೇಟಿ, ಅಮರೇಶ ಬಿರದಾರ, ಸಿದ್ದನಗೌಡ ಕರಿಭಾವಿ, ನಾಗರಡ್ಡಿ ನಾವದಗಿ, ಮಹಿಬೂಬಸಾಬ ಚೈದ್ರಿ, ಹಣಮಂತ್ರಾಯಗೌಡ ಪಾಟೀಲ್, ಕಾಶಿಂಸಾಬ ಅಗ್ನಿ, ಸಂಗಮೇಶ ತಡಬಿಡಿ, ದ್ಯಾಮಣ್ಣ ಗುಜ್ಜಲ್ ಇತರರು ಇದ್ದರು.