ಸಾರಾಂಶ
ಎತ್ತಿನಹೊಳೆ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಕೈಗೆ ಬಂದಿದ್ದ ಫಸಲು ಸಂಪೂರ್ಣ ನೀರು ಹರಿದು ನಾಶವಾದ ಘಟನೆ ತಾಲೂಕಿನ ದೊಡ್ಡಪಾಲನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಕೊರಟಗೆರೆಎತ್ತಿನಹೊಳೆ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಕೈಗೆ ಬಂದಿದ್ದ ಫಸಲು ಸಂಪೂರ್ಣ ನೀರು ಹರಿದು ನಾಶವಾದ ಘಟನೆ ತಾಲೂಕಿನ ದೊಡ್ಡಪಾಲನಹಳ್ಳಿ ಗ್ರಾಮದಲ್ಲಿ ನಡೆದಿದೆ.ತಾಲೂಕಿನ ದೊಡ್ಡಪಾಲನಹಳ್ಳಿ ಮಜರೆ ಹೊಸಹಳ್ಳಿ ಗ್ರಾಮದ ಮಂಜುನಾಥ್ ಎನ್ನುವರ ಜಮೀನಿಲ್ಲಿ ಎತ್ತಿನಹೊಳೆ ಯೋಜನೆ ಕೆನಾಲ್ ಹಾದುಹೋಗಿದ್ದು, ಇದರಿಂದಾಗಿ ಮಳೆಗೆ ಬದು ಕಿತ್ತು ಹೋಗಿದೆ. ರೈತನ ೨ ಎಕರೆ ೧೩ ಗುಂಟೆಯಲ್ಲಿ ಹಾಕಲಾಗಿದ್ದ ರಾಗಿ, ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳು ಸಂಪೂರ್ಣ ಜಾಲಾವೃತವಾಗಿವೆ.
ರೈತ ಮಂಜುನಾಥ್ ಮಾತನಾಡಿ, ನಮ್ಮ ಜಮೀನಿನ ಪಕ್ಕದಲ್ಲಿ ಎತ್ತಿನಹೊಳೆ ಕಾಮಗಾರಿ ನಡೆಯುತ್ತಿದ್ದು, ನಮ್ಮ ಹೊಲದ ಪಕ್ಕ ಬದು ಹಾಕಲಾಗಿತ್ತು. ತಡರಾತ್ರಿ ಸುರಿದ ಬಾರಿ ಮಳೆಗೆ ಹೊಲಕ್ಕೆ ನೀರು ನುಗ್ಗಿ ಬೆಳೆ ನಾಶವಾಗಿದೆ. ₹೨ ಲಕ್ಷ ಸಾಲ ಮಾಡಿ ೨ ಎಕರೆ ೩ ಗುಂಟೆ ಜಮೀನಿನಲ್ಲಿ ಬೆಳೆ ಬೆಳೆಯಲಾಗಿತ್ತು. ಕೈಗೆ ಬಂದ ಬೆಳೆಗಳ ಸಂಪೂರ್ಣ ಜಾಲಾವೃತವಾಗಿವೆ. ಎತ್ತಿನಹೊಳೆ ಅಧಿಕಾರಿಗಳು ಹಾಗೂ ತಾಲೂಕು ದಂಡಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಪರಿಹಾರ ನೀಡಬೇಕು ಎಂದು ತಿಳಿಸಿದರು.