ಫೆಂಗಲ್ ಅಬ್ಬರಕ್ಕೆ ಬೆಳೆಗಳು ನಾಶ, ಅನ್ನದಾತ ಕಂಗಾಲು

| Published : Dec 04 2024, 12:31 AM IST

ಫೆಂಗಲ್ ಅಬ್ಬರಕ್ಕೆ ಬೆಳೆಗಳು ನಾಶ, ಅನ್ನದಾತ ಕಂಗಾಲು
Share this Article
  • FB
  • TW
  • Linkdin
  • Email

ಸಾರಾಂಶ

ಕಾಟಾವಿಗೆ ಬಂದಿದ್ದ ರಾಗಿ,ಭತ್ತ,ಟಮೇಟೋ,ಅವರೇಕಾಯಿ ಬೆಳೆ ಮಳೆಗೆ ನಲುಗಿ ಹೋಗಿದೆ.ಕಳೆದ ವರ್ಷ ಮಳೆ ಕೊರತೆಯಿಂದ ಅಲ್ಪಸ್ವಲ್ಪ ಬೆಳೆದಿದ್ದ ರಾಗಿ ಬೆಳೆಯನ್ನು ರೈತರು ಸರ್ಕಾರದ ಬೆಂಬಲ ಬೆಲೆಗೆ ಮಾರಾಟ ಮಾಡದೆ ತಮಗೆ ಇರಿಸಿಕೊಂಡಿದ್ದರು. ಈ ವರ್ಷ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದರು. ಇನ್ನೇನು ಕಟಾವು ಮಾಡಬೇಕೆನ್ನುವ ಸಮಯದಲ್ಲಿ ಫೆಂಗಲ್ ಮಳೆಯ ಹೊಡೆತದಿಂದಾಗಿ ಕೈಗೆ ಬಂದ ಬೆಳೆ ಬಾಯಿಗೆ ಬಾರದಂತಾಗಿದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಫೆಂಗಲ್ ಚಂಡಮಾರುತ ಅಬ್ಬರಕ್ಕೆ ತಾಲೂಕಿನಲ್ಲಿ ಸಾವಿರಾರು ಎಕರೆ ರಾಗಿ, ಟೊಮೆಟೋ, ಅವರೆ ಸೇರಿದಂತೆ ಇತರೇ ವಾಣಿಜ್ಯ ಬೆಳೆಗಳು ಸಂಪೂರ್ಣವಾಗಿ ನಾಶವಾಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂದು ಅನ್ನದಾತರು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ.ಕಳೆದ ನಾಲ್ಕು ದಿನಗಳಿಂದ ಫೆಂಗಲ್ ಚಂಡಮಾರುತದತ ಮಳೆಯ ಪರಿಣಾಮದಿಂದ ತಾಲೂಕಿನಲ್ಲಿ ಜನರು ಸೇರಿದಂತೆ ಅನ್ನದಾತರು ತತ್ತರಿಸಿ ಹೋಗಿದ್ದರೆ, ಮಂಗಳವಾರ ಮಳೆ ಸ್ವಲ್ಪಮಟ್ಟಿಗೆ ವಿರಾಮ ನೀಡಿರುವುದು ಜನರಲ್ಲಿ ನೆಮ್ಮದಿ ಮೂಡಿಸುವಂತಾಗಿದೆ.

ಜನತೆಗೆ ಸೂರ್ಯ ದರ್ಶನ

ನಾಲ್ಕು ದಿನಗಳಿಂದ ಸೂರ್ಯನ ದರ್ಶವೇ ಕಾಣದೆ ಚಳಿ, ಗಾಳಿ ಮಳೆಗೆ ಹೈರಾಣಾಗಿ ಹೋಗಿದ್ದರು.ಮನೆಯಿಂದ ಹೊರಬರಲಾಗದೆ ಮನೆಯಲ್ಲೆ ಬೀಡು ಬಿಡುವಂತಾಗಿತ್ತು. ಮಂಗಳವಾರ ಬೆಳಗ್ಗೆ ಮಳೆ ಸುರಿಯುತು,ಮಧ್ಯಾಹ್ನ ಮಳೆಗೆ ವಿರಾಮ ಬಿದ್ದು ಸೂರ್ಯನ ದರ್ಶನವಾದಾಗ ಜನರು ನೆಮ್ಮದಿಯ ಉಸಿರಾಡಿದರು.ಆದರೆ ನಾಲ್ಕು ದಿನಗಳಿಂದ ಜಟಿ ಜಟಿ ಮಳೆಗೆ ಕಾಟಾವಿಗೆ ಬಂದಿದ್ದ ರಾಗಿ,ಭತ್ತ,ಟಮೇಟೋ,ಅವರೇಕಾಯಿ ಬೆಳೆ ಮಳೆಗೆ ನಲುಗಿ ಹೋಗಿದೆ.ಕಳೆದ ವರ್ಷ ಮಳೆ ಕೊರತೆಯಿಂದ ಅಲ್ಪಸ್ವಲ್ಪ ಬೆಳೆದಿದ್ದ ರಾಗಿ ಬೆಳೆಯನ್ನು ರೈತರು ಸರ್ಕಾರದ ಬೆಂಬಲ ಬೆಲೆಗೆ ಮಾರಾಟ ಮಾಡದೆ ತಮಗೆ ಇರಿಸಿಕೊಂಡಿದ್ದರು. ಈ ವರ್ಷ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದರು. ಇನ್ನೇನು ಕಟಾವು ಮಾಡಬೇಕೆನ್ನುವ ಸಮಯದಲ್ಲಿ ಫೆಂಗಲ್ ಮಳೆಯ ಹೊಡೆತದಿಂದಾಗಿ ಕೈಗೆ ಬಂದ ಬೆಳೆ ಬಾಯಿಗೆ ಬಾರದಂತಾಗಿದೆ. ಸರ್ಕಾರದ ಬೆಂಬಲ ಬೆಲೆಗೆ ಮಾರಿ ಸ್ವಲ್ಪ ದುಡ್ಡಿಮ ಮುಖ ನೋಡಲು ಮುಂದಾಗಿದ್ದರು. ಈಗ ಅದು ಮಳೆಯಲ್ಲಿ ಕೊಚ್ಚಿ ಹೋಗಿದೆ. ರಾಗಿ ಬೆಳೆ ಹೊಳದಲ್ಲೆ ಕೊಳೆಯುವಂತಾಗಿದೆ.ಭತ್ತ, ರಾಗಿ, ಅವರೆ ನಾಶ

ಇದರ ಜೊತೆ ಅವರೆಕಾಯಿ ಬೆಳೆ ಸಹ ಉತ್ತಮವಾಗಿದ್ದು ಮಾರುಕಟ್ಟೆಗೆ ಲಗ್ಗೆಯಿಡುವ ಮೊದಲೆ ಕಾಯಿ ಮಳೆಗೆ ಕೊಳೆಯುವಂತಾಗಿದೆ. ಇದರಿಂದ ಅವರೆ ಪ್ರಿಯರಿಗೆ ನಿರಾಸೆಯಾದರೆ ರೈತರಿಗೆ ಬೆಳೆ ಹೋಯ್ತಲ್ಲ ಎಂಬ ಕೊರಗು ಕಾಡುತ್ತಿದೆ. ಇನ್ನೂ ಹಲವು ರೈತರು ಬೆಳೆದಿದ್ದ ಟೊಮೆಟೋ ಬೆಳೆ ಸಹ ಮಳೆಗೆ ಆಹುತಿಯಾಗಿ ರೈತರನ್ನು ದಿಕ್ಕಾಪಾಲು ಮಾಡುವಂತೆ ಮಾಡಿದೆ. ನಾಲ್ಕು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ತರಕಾರಿ ವ್ಯಾಪಾರವಿಲ್ಲದೆ ವ್ಯಾಪಾರಿಗಳು ಆತಂಕಗೊಂಡಿದ್ದರೆ. ಇತ್ತ ತರಕಾರಿ ಬೆಳೆ ಸಹ ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣದಲ್ಲಿ ಬಾರದೆ ತರಕಾರಿ ಬೆಳೆಗಳು ಸಹ ದುಬಾರಿಯಾಗಿದೆ.ಇನ್ನು ಹೂ ಬೆಳೆಗಾರರ ಸ್ಥಿತಿ ಸಹ ಭಿನ್ನವಾಗಿಲ್ಲ.

ಕೊಳೆಯುತ್ತಿರುವ ಚೆಂಡು, ಸೇವಂತಿಗೆ

ಚಂಡು ಹೂ, ಸೇವಂತಿ ಹೂಗಳನ್ನು ಕೇಳುವವರೇ ಇಲ್ಲ ಸಾವಿರಾರು ಹೂ ಖರ್ಚು ಮಾಡಿ ಬೆಳೆದ ರೈತರಿಗೆ ಹೂಗಳನ್ನು ಕಟಾವು ಮಾಡಿದರೂ ಕೂಲಿ ಕಾರ್ಮಿಕರಿಗೆ ನೀಡುವಷ್ಟು ಹಣ ಸಹ ಕೈಗೆ ಬರುವುದಿಲ್ಲವೆಂದು ಹೊಲದಲ್ಲೆ ಹೂಗಳನ್ನು ಕೊಳೆಯುವಂತೆ ಮಾಡಿದ್ದಾರೆ. ಒಟ್ಟಾರೆ ಫೆಂಗಲ್ ಚಂಡಮಾರುತದ ಮಳೆ ಎಲ್ಲಾ ವರ್ಗದ ಜನರಿಗೆ ಭಾರಿ ಹೊಡೆತ ನೀಡಿದೆ.