ಸಾರಾಂಶ
ಕನ್ನಡಪ್ರಭ ವಾರ್ತೆ ಮಲ್ಕುಂಡಿಹಲವು ವರ್ಷಗಳಿಂದ ಶಿಕ್ಷಕರ ವಸತಿ ಗೃಹಗಳು ಪಾಳು ಬಿದ್ದಿರುವುದ್ದರಿಂದ ಸರ್ಕಾರದ ಹಣ ವ್ಯರ್ಥವಾಗಿದೆ.ಸಮೀಪದ ಹುರ ಗ್ರಾಮದಲ್ಲಿ ಕೋಟ್ಯಂತರ ರೂ. ಹಣ ಖರ್ಚು ಮಾಡಿ ಶಿಕ್ಷಕರ ಅನುಕೂಲಕ್ಕಾಗಿ ಶಿಕ್ಷಕರ ವಸತಿ ಗೃಹಗಳನ್ನು ಜಿಪಂ ವತಿಯಿಂದ ಸಮಾರು 15 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿತ್ತು. ಕಾಮಗಾರಿ ಸಂಪೂರ್ಣವಾಗಿ ಮುಗಿದು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.ಅದರೆ ಉಪಯೋಗಕ್ಕೆ ಬಾರದೆ ಪಾಳು ಬಿದ್ದು ಬೂತ ಬಂಗಲೆಯಾಗಿ ಕಾಣುತ್ತಿದೆ. ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರವೇ ಪ್ರಮುಖವಾದದ್ದು ಶಿಕ್ಷಕರ ಹುದ್ದೆ ಸಮಾಜದಲ್ಲಿ ಅವರದೇ ಆದ ಜವಾಬ್ದಾರಿ ಹಾಗೂ ಗೌರವವನ್ನು ಹೊಂದಿದೆ. ರಾಜಕೀಯವಾಗಿ ಶಿಕ್ಷಕರು ಹೆಚ್ಚು ಸಂಘಟಿತರಾಗಿದ್ದು, ನಗರ ಪ್ರದೇಶದಿಂದ ಗ್ರಾಮೀಣ ಭಾಗಕ್ಕೆ ಹೆಚ್ಚು ಶಿಕ್ಷಕರು ಬರುತ್ತಿದ್ದು ಇದನ್ನು ಅರಿತ ಅಂದಿನ ಶಾಸಕ ದಿ.ವಿ. ಶ್ರೀನಿವಾಸ ಪ್ರಾಸದ್ ಅವರು, ಶಿಕ್ಷಕರು ಗ್ರಾಮೀಣ ಭಾಗದಲ್ಲೇ ಉಳಿದು ಮಕ್ಕಳಿಗೆ ಶಿಕ್ಷಕರು ಅಲ್ಲೇ ಉಳಿದು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂಬ ಮಹಾದಾಶೆಯಿಂದ ಲಕ್ಷಾಂತರ ರೂ. ಹಣ ಖರ್ಚು ಮಾಡಿ ಉತ್ತಮವಾದ ಶಿಕ್ಷಕರ ಕೊಠಡಿ ನಿರ್ಮಾಣ ಮಾಡಿ ಬಣ್ಣ ಸುಣ್ಣ ತುಂಬಿಸಲಾಯಿತು.ಅದರೆ ಎಷ್ಟೋ ವರ್ಷಗಳು ಕಳೆದರೂ ಈ ಶಿಕ್ಷಕರ ಕೊಠಡಿಯನ್ನು ಉಪಾಯೋಗ ಮಾಡಿಕೊಳ್ಳದೆ ಇರುವುದರಿಂದ ಈಗ ಬೂತ ಬಂಗಲೆಯಾಗಿ ಕಾಣುತ್ತಿದೆ. ಹುರ ಗ್ರಾಮವು ಹೋಬಳಿ ಮಟ್ಟಕ್ಕೆ ತಲುಪಿದೆ ಇಲ್ಲಿನ ಶಾಲೆಗೆ ಸುಮಾರು 70 ಕಿ.ಮೀ. ದೂರದಿಂದ ಶಿಕ್ಷಕರು ಬಂದು ಹೋಗುವ ಪರಿಸ್ಥಿತಿ ಇದೆ.ಒಂದು ಸಮುದಾಯ ಭವನವನ್ನು 2015ರಲ್ಲಿ ಉಪ ಪೋಲಿಸ್ ಠಾಣೆಯಾಗಿ ಮಾಡಲಾಗಿತ್ತು. ಅದರೆ ಅದು ಕೂಡ ಅರ್ಧಕ್ಕೆ ನಿಂತು ಮುಚ್ಚಿ ಹೋಗಿತ್ತು. ಸರ್ಕಾರ ಇಷ್ಟೆಲ್ಲಾ ಹಣ ಖರ್ಚು ಮಾಡಿ ಕಟ್ಟಡ ನಿರ್ಮಿಸಿದರೂ ಈ ಕಟ್ಟಡಗಳು ಮಾತ್ರ ಎಂಬ ಮಾತುಗಳು ಸಾರ್ವಜನಿಕರಲ್ಲಿ ಕೇಳಿ ಬರುತ್ತಿದೆ. ಕಟ್ಟಡದ ಸುತ್ತಮುತ್ತ ಗಿಡಗಂಟಿಗಳು ಬೆಳೆದು ಕಾಡು ಪ್ರಾಣಿಗಳ ತಾಣವಾಗಿದೆ.ಈಗಾಗಲೇ ಈ ಭಾಗದಲ್ಲಿ ಚಿರತೆ, ಹುಲಿಗಳ ಹಾವಳಿ ಹೆಚ್ಚಾಗಿದ್ದು ಏನಾದರೂ ಅಲ್ಲಿ ಸೇರಿಕೊಳ್ಳಬಹುದು ಎಂದು ಗ್ರಾಮಸ್ಥರಲ್ಲಿ ಭಯ ಉಂಟಾಗಿದೆ. ಸರ್ಕಾರ ಕಟ್ಟಡ ನಿರ್ಮಾಣ ಮಾಡುವುಕ್ಕಿಂತ ಹೆಚ್ಚಾಗಿ ಅದನ್ನು ಉಪಯೋಗಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ ಎಂದು ಸಾರ್ವಜನಿಕರ ಒತ್ತಾಯ.ಇನ್ನೂ ಮುಂದಾದರೂ ಶಿಕ್ಷಕರ ಕೊಠಡಿಗಳನ್ನು ಸರಿ ಪಡಿಸಿ ಶಿಕ್ಷಕರ ತಂಗಲು ಅನುವು ಮಾಡಿಕೊಡುವರೋ ಕಾದು ನೋಡಬೇಕಿದೆ.---ಕೋಟ್‌ದಿ.ವಿ. ಶ್ರೀನಿವಾಸ್ ಪ್ರಸಾದ್ ಅವರು ಗ್ರಾಮೀಣ ಭಾಗದಲ್ಲಿ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಶಿಕ್ಷಕರು ದೂರದಿಂದ ಬರುವುದನ್ನು ತಪ್ಪಿಸಲು ಗ್ರಾಮದಲ್ಲಿ ಉತ್ತಮವಾದ ಶಿಕ್ಷಕರ ವಸತಿ ಗೃಹವನ್ನು ನಿರ್ಮಾಣ ಮಾಡಿದರು. ಅದರೆ ಅದು ಉಪಯೋಗಕ್ಕೆ ಬಾರದೆ ಪಾಳು ಬಿದ್ದಿರುವುದು ಸರ್ಕಾರದ ಹಣ ವ್ಯಥೆಯಾಗಿದೆ.- ಚಂದ್ರ, ತಾಪಂ ಮಾಜಿ ಸದಸ್ಯ