ಸಾರಾಂಶ
ಹೊಳಲ್ಕೆರೆ: ನಿತ್ಯವೂ ನಾವು ದೇವರನ್ನು ಸ್ಮರಿಸುವ ಜೊತೆ ದೇಶದ ಗಡಿ ಕಾಯುವ ಯೋಧರನ್ನು ಸ್ಮರಿಸುವ ಮನೋಭಾವವನ್ನು ಪ್ರತಿಯೊಬ್ಬರು ಬೆಳಸಿಕೊಳ್ಳಬೇಕು ಎಂದು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ್ ತಗಡೂರು ಹೇಳಿದರು.
ಹೊಳಲ್ಕೆರೆ: ನಿತ್ಯವೂ ನಾವು ದೇವರನ್ನು ಸ್ಮರಿಸುವ ಜೊತೆ ದೇಶದ ಗಡಿ ಕಾಯುವ ಯೋಧರನ್ನು ಸ್ಮರಿಸುವ ಮನೋಭಾವವನ್ನು ಪ್ರತಿಯೊಬ್ಬರು ಬೆಳಸಿಕೊಳ್ಳಬೇಕು ಎಂದು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ್ ತಗಡೂರು ಹೇಳಿದರು. ತಾಲೂಕಿನ ರಾಮಗಿರಿ ಗ್ರಾಮದ ವಿರಕ್ತ ಮಠದ ಸಭಾಂಗಣದಲ್ಲಿ ನಡೆದ ಮಾಜಿ ಯೋಧರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಯೋಧರು ಗಡಿ ಕಾಯುವ ಮೂಲಕ ದೇಶದ ರಕ್ಷಣೆ ಮಾಡುತ್ತಾರೆ. ಪತ್ರಕರ್ತರ ಸಂಘವು ಮಾಜಿ ಯೋಧರನ್ನು ಸ್ಮರಿಸುವ ಮೂಲಕ ಅವರನ್ನು ಅಭಿನಂಧಿಸುತ್ತಿರುವುದು ಶ್ಲಾಘನೀಯ ಎಂದರು.
ಶಾಲಾ ಕಾಲೇಜುಗಳು, ಸಂಘ ಸಂಸ್ಥೆಗಳು ತಮ್ಮ ತಮ್ಮ ತಾಲೂಕಿನಲ್ಲಿರುವ ಮಾಜಿ ಯೋಧರನ್ನು ಆಹ್ವಾನಿಸಿ ಅವರಿಂದ ದೇಶದ ರಕ್ಷಣೆಗೆ ಯೋಧರ ಪರಿಶ್ರಮ ತಿಳಿಸಬೇಕು. ಸೈನ್ಯಕ್ಕೆ ಸೇರಲು ಉತ್ಸಾಹ ತುಂಬುವ ಕೆಲಸ ಮಾಡಬೇಕು. ಅನೇಕ ವಿಷಯಗಳ ಕುರಿತು ಮಕ್ಕಳಿಗೆ ಸ್ಫೂರ್ತಿ ತುಂಬುವ ಕೆಲಸ ಆಗಬೇಕಾಗಿದೆ ಎಂದರು.ಮಾಜಿ ಸೈನಿಕ ಬಾಣಾಗೆರೆ ಪಾಲಕ್ಷಪ್ಪ ಮಾತನಾಡಿ, ಯುವಕರು ಸರ್ಕಾರಿ ನೌಕರಿ ಹುಡುಕುತ್ತಾ ಅಲೆಯುವ ಬದಲು ಪೂರ್ವ ತಯಾರಿ ಮಾಡಿಕೊಳ್ಳುವ ಮೂಲಕ ಸೈನ್ಯಕ್ಕೆ ಸೇರಲು ಉತ್ಸಾವರಾಗಬೇಕು. ಆ ಮೂಲಕ ದೇಶ ಸೇವೆ ಮಾಡಬಹುದು. ಸೈನ್ಯದಲ್ಲಿ ನಿವೃತ್ತಿ ನಂತರ ರಾಜ್ಯದಲ್ಲಿ ಮತ್ತೆ ಕೆಲಸ ಮಾಡುವ ಅವಕಾಶ ದೊರೆಯಲಿದೆ. ಅಲ್ಲದೆ ತಮ್ಮ ಮಕ್ಕಳಿಗೆ ಉತ್ತಮ ಭವಿಷ್ಯಸಿಗುತ್ತದೆ ಎಂದು ಹೇಳಿದರು. ಇದೇ ವೇಳೆ ಮಾಜಿ ಸೈನಿಕರಾದ ಶಿವಗಂಗಾ ಬಸವರಾಜ, ಬಾಣಾಗೆರೆ ಪಾಲಕ್ಷಪ್ಪ, ತಿಪ್ಪೇಸ್ವಾಮಿ, ಕಣಿವೆಹಳ್ಳಿ ಪರಮೇಶ್ವರಪ್ಪ ಅರಬಘಟ್ಟಮಲ್ಲೇಶಪ್ಪ, ಚನ್ನಬಸಮುದ್ರ ಚಂದ್ರಪ್ಪ , ತಾಳ್ಯದ ಷಣ್ಮುಖಪ್ಪ ಅವರನ್ನು ಅಭಿನಂದಿಸಲಾಯಿತು.