ಸಾರಾಂಶ
ಮಕ್ಕಳ ಭವಿಷ್ಯ ಉಜ್ವಲವಾಗಬೇಕಾದರೆ ತಂದೆ, ತಾಯಿ ಹಾಗೂ ಗುರು ಹಿರಿಯರಿಗೆ ಗೌರವ ನೀಡುವ ಸಂಸ್ಕಾರ ಬೆಳೆಸಿಕೊಳ್ಳಬೇಕು
ಮುಂಡಗೋಡ: ಮಕ್ಕಳ ಭವಿಷ್ಯ ಉಜ್ವಲವಾಗಬೇಕಾದರೆ ತಂದೆ, ತಾಯಿ ಹಾಗೂ ಗುರು ಹಿರಿಯರಿಗೆ ಗೌರವ ನೀಡುವ ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದು ಮುಂಡಗೋಡ ಕ್ಷೇತ್ರ ಸಂಪನ್ಮೂಲ ಕೇಂದ್ರ ಸಮನ್ವಯಾಧಿಕಾರಿ ಡಾ. ರಮೇಶ್ ಅಂಬಿಗೇರ ಹೇಳಿದರು.ತಾಲೂಕಿನ ನಂದಿಕಟ್ಟಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪಾಲಕರು ಸಾಕಷ್ಟು ಕಷ್ಟಪಟ್ಟು ಮಕ್ಕಳ ಪಾಲನೆ ಪೋಷಣೆ ಮಾಡಿ ಮಕ್ಕಳ ಭವಿಷ್ಯದ ಬಗ್ಗೆ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಅವರಿಗೆ ನಿರಾಶೆಯಾಗದಂತೆ ಉನ್ನತ ಮಟ್ಟಕ್ಕೇರುವ ಗುರಿಯೊಂದಿಗೆ ಒಳ್ಳೆಯ ಶಿಕ್ಷಣ ಪಡೆದು ಕೀರ್ತಿ ತರುವಂತ ಕೆಲಸ ಮಾಡಬೇಕು. ಮಕ್ಕಳು ಗುಣಮಟ್ಟ ಶಿಕ್ಷಣ ಪಡೆಯಬೇಕಾದರೆ ಶಿಕ್ಷಕರ ಪಾತ್ರ ಕೂಡ ಪ್ರಮುಖವಾಗಿರುತ್ತದೆ. ಹಾಗಾಗಿ ಶಾಲಾ ವಾತಾವರಣ ಕೂಡ ಉತ್ತಮವಾಗಿರಬೇಕು ಎಂದರು.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಉದಯಕುಮಾರ್ ಕವಟೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಸಂತೋಷ ಬೋಸ್ಲೆ, ಎಸ್.ಡಿ ಮುಡೆಣ್ಣವರ, ಸೋಮಲಿಂಗಪ್ಪ ಕಾಂಬಳೆ, ಸಿಎನ್ ಕೊಟಗುಣಸಿ, ಕೇದಾರಿ ಮುಗಳಿ, ನಿಂಗಪ್ಪ ಕವಟೆ, ಶಿವಾನಂದ ಪಡುವಳ್ಳಿ, ಪರಶುರಾಮ ಮೆಂತೇಕಾರ, ಭರಮಣ್ಣ ಆಲೂರು, ಕಲಾವತಿ ಕೊಟಗುಣಿಸಿ, ಶಿವಪ್ಪ ಕೊಟಬಾಗಿ, ಶೋಭಾ ಹಂಚಿನಮನಿ, ಪೂರ್ಣಿಮಾ ಕಟ್ಟಿಮನಿ, ಅಶ್ವಿನಿ ಹಂಚಿನಮನಿ ಉಪಸ್ಥಿತರಿದ್ದರು.
ಮಂಜುನಾಥ ನೀಲಮ್ಮನವರ ನಿರೂಪಸಿದರು. ರವಿ, ದೇವರಾಜ ಸ್ವಾಗತಿಸಿದರು. ಶಿವಪ್ಪ ಕೊಟಬಾಗಿ ವಂದಿಸಿದರು. ಬಳಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಮುಂಡಗೋಡ ತಾಲೂಕಿನ ನಂದಿಕಟ್ಟಾ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ವಾರ್ಷಿಕೋತ್ಸವ ಸಮಾರಂಭ ನಡೆಯಿತು.