ಸಾರಾಂಶ
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಕನಕದಾಸರ ಸಾಹಿತ್ಯ, ಕೀರ್ತನೆಗಳು ಜಾತಿ ಸಂಘರ್ಷವನ್ನು ದೂರ ಮಾಡಿ ವಿಶ್ವ ಮಾನವರಾಗುವ ಅಮೃತವಾಣಿಯಾಗಿವೆ ಎಂದು ಪಿಡಿಒ ಚಲುವರಾಜು ತಿಳಿಸಿದರು.ಪಟ್ಟಣದ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಕನಕದಾಸರ 587 ಜಯಂತಿಯಲ್ಲಿ ಮಾತನಾಡಿ, ಕನ್ನಡ ಭಾಷೆ, ದಾಸ ಸಾಹಿತ್ಯಕ್ಕೆ ಹೊಸಭಾಷ್ಯ ಬರೆದವರು ಕನಕದಾಸರು. ವಿಶಾಲ ಜಗತ್ತಿನಲ್ಲಿ ಸಮಾನತೆ, ದೈವತ್ವ ಎಲ್ಲವನ್ನು ಕಾಣಬಹುದು ಎಂದವರು ಕನಕರು ಎಂದರು.
ಸಮಷ್ಟಿಯಲ್ಲಿ ಸಮೃದ್ಧವಾಗಿ ಬೆಳೆಯಲು ಭವಿಷ್ಯದ ಯುವ ಮನಸ್ಸಿನಲ್ಲಿ ಸೋದರತ್ವ ಭಾವನೆ ಬಿತ್ತುವ ಕೆಲಸವಾಗಬೇಕಿದೆ. ದಾಸ ಸಾಹಿತ್ಯದ ಅಶ್ವಿನಿ ದೇವತೆಯಾಗಿ ಮೋಹನ ತರಂಗಿಣಿ, ರಾಮಧಾನ್ಯ ಚರಿತೆ, ಹರಿಭಕ್ತಸಾರದಂತಹ ಉತ್ಕೃಷ್ಟ ಕಾವ್ಯ ರಚಿಸಿ ಸರ್ವಶ್ರೇಷ್ಠರಾದರು ಎಂದರು.ಇದೇ ವೇಳೆ ಗ್ರಾಪಂ ಅಧ್ಯಕ್ಷ ಕೆ.ಜೆ.ಪುಟ್ಟರಾಜು, ಸದಸ್ಯರು, ಪೌರಕಾರ್ಮಿಕರು ಕನಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮಿಸಿದರು. ಕಾರ್ಯದರ್ಶಿ ಪಾಪೇಗೌಡ, ಲೆಕ್ಕ ಸಹಾಯಕ ವಾಸು, ಸಿಬ್ಬಂದಿ ಶ್ರೀಕಾಂತ್, ಪ್ರದೀಪ್, ಪೌರಕಾರ್ಮಿಕರಾದ ಚಾಮುಂಡಿ, ನಾಗರಾಜು ಮತ್ತಿತರರಿದ್ದರು.
ಸಮಾಜ ಸುಧಾರಣೆಗೆ ಶ್ರಮಿಸಿದ್ದ ಕನಕದಾಸರು: ರಾಮಲಿಂಗಯ್ಯಮದ್ದೂರು:ಕನಕದಾಸರು ಶ್ರೇಷ್ಠ ಕವಿಯಾಗಿ ಸಮಾಜ ಸುಧಾರಣೆಗೆ ಶ್ರಮಿಸಿದ್ದರು ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ರಾಮಲಿಂಗಯ್ಯ ತಿಳಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಕನಕದಾಸರ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಮೂಢನಂಬಿಕೆ, ಕಂದಚಾರಗಳಿಂದ ಬಸವಳಿದಿದ್ದ ಸಮಾಜವನ್ನು ಸರಿದಾರಿಗೆ ತರಲು ಸಾಕಷ್ಟು ಶ್ರಮಿಸಿದ್ದಾರೆ ಎಂದರು.ಅಧ್ಯಕ್ಷತೆ ವಹಿಸಿದ್ದ ಗ್ರೇಟ್ 2 ತಹಸೀಲ್ದಾರ್ ಸೋಮಶೇಖರ್ ಕನಕದಾಸರ ಸೇವೆ ಸ್ಮರಿಸಿ ಅವರು ನಮಗೆ ಸದಾ ಸ್ಪೂರ್ತಿಯಾಗಿದ್ದಾರೆ ಎಂದರು.ಸಾಹಿತಿ, ಶಿಕ್ಷಕರಾದ ಬಿ.ವಿ.ಹಳ್ಳಿ ನಾರಾಯಣ್ ಉಪನ್ಯಾಸ ನೀಡಿ, ಕನಕದಾಸರು 15-16 ನೇ ಶತಮಾನದಲ್ಲಿ ಜಾತಿ ಪದ್ಧತಿ ವಿರುದ್ಧ ಹೋರಾಡಿ ಸಮಾಜದ ಅಂಕು ಡೊಂಕುಗಳನ್ನು ಹೋಗಲಾಡಿಸಲು ದಾಸ ಸಾಹಿತ್ಯದ ಮೂಲಕ ಪ್ರಯತ್ನಿಸಿದ ಹರಿದಾಸ ಶ್ರೇಷ್ಠರು ಎಂದರು.ಕಾರ್ಯಕ್ರಮದಲ್ಲಿ ತಾಲೂಕು ಕುರುಬರ ಸಂಘದ ಅಧ್ಯಕ್ಷ ಮರಿ ಹೆಗಡೆ, ಜಿಪಂ ಮಾಜಿ ಸದಸ್ಯರಾದಾ ಜವಾಹರಲಾಲ್, ನಾಗರಾಜು, ಅಹಿಂದ ಸಂಘಟನೆ ಅಧ್ಯಕ್ಷ ಎಂ.ನಿಂಗಯ್ಯ, ಮುಖಂಡರಾದ ಶ್ರೀನಿವಾಸ, ದಾಕ್ಷಾಯಿಣಿ, ಮಹದೇವಯ್ಯ, ಶಿವರಾಜು ಸೇರಿದಂತೆ ತಾಲೂಕಿನ ಸಂಘ ಸಂಸ್ಥೆಗಳ ಮುಖಂಡರು, ಕುರುಬರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.